259 ಮತಗಟ್ಟೆಗಳ ವಿವಿಫ್ಯಾಟ್ ಪರಿಶೀಲನಾ ಕಾರ್ಯ ಮುಕ್ತಾಯದ ಹಂತದಲ್ಲಿ : ಎಸ್.ರಾಜಶೇಖರ್

ಚಳ್ಳಕೆರೆ

       ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 259 ಮತಗಟ್ಟೆ ಕೇಂದ್ರಗಳ ಮತದಾನಕ್ಕೆ ಪೂರಕವಾಗಿ ಅವಶ್ಯವಿರುವ ವಿವಿ ಫ್ಯಾಟ್ ಮತ್ತು ಕಂಟ್ರೋಲ್ ಯುನಿಟ್‍ಗಳನ್ನು ಪರೀಕ್ಷೆ ನಡೆಸಿ ಅವುಗಳನ್ನು ಸೀಲ್ ಮಾಡಿ ಸುರಕ್ಷಿತವಾಗಿ ಇಡುವ ಕಾರ್ಯ ಬರದಿಂದ ಸಾಗಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಸ್.ರಾಜಶೇಖರ್ ತಿಳಿಸಿದರು.

       ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಭದ್ರವಾಗಿಡಲಾಗಿದ್ದ ವಿವಿ ಫ್ಯಾಟ್ ಮತ್ತು ಕಂಟ್ರೂಲ್ ಯುನಿಟ್‍ಗಳ ಪರಿಶೀಲನಾ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಸೆಕ್ಟರ್ ಅಧಿಕಾರಿಗಳು, ಇಂಜಿನಿಯರ್‍ಗಳ ಸಹಕಾರದಿಂದ ಎಲ್ಲಾ ವಿವಿ ಫ್ಯಾಟ್‍ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ರೀತಿಯ ಲೋಪದೋಷಗಳು ಮತ ಯಂತ್ರದಲ್ಲಿ ಕಾಣಿಸಿಕೊಳ್ಳದಂತೆ ಜಾಗೃತೆ ವಹಿಸಲಾಗಿದೆ.

       ತಾಲ್ಲೂಕು ಆಡಳಿತದ ವತಿಯಿಂದ ಮತದಾನಕ್ಕೆ ಅವಶ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಿಲ್ಲಾಧಿಕಾರಿಗಳ ವಿನೋತ್ ಪ್ರಿಯಾ ಮಾರ್ಗದರ್ಶನದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿ ಫ್ಯಾಟ್ ಮತ್ತು ಕಂಟ್ರೋಲ್‍ಯುನಿಟ್ ಸಂರಕ್ಷಣೆ ಮಾಡಲಾಗಿದೆ. ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಅಧಿಕಾರಿಯೂ ಹಾಗೂ ಸಿಬ್ಬಂದಿ ವರ್ಗ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ. ಏ.18ರ ಮತದಾನಕ್ಕೆ ತಾಲ್ಲೂಕು ಆಡಳಿತ ಸಜ್ಜಾಗಿದೆ ಎಂದರು.

         ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಸಹಾಯಕ ಚುನಾವಣಾಧಿಕಾರಿಗಳ ಸಹಯೋಗದಲ್ಲಿ ಪ್ರತಿಯೊಂದು ಬೂತ್‍ನ ವ್ಯವಸ್ಥೆಯ ಬಗ್ಗೆ ವಿಶೇಷ ಗಮನವಿಟ್ಟು ಕಾರ್ಯನಿರ್ವಹಿಸಲಾಗುತ್ತಿದೆ. ಇನ್ನು ಒಂದು ದಿನದೊಳಗೆ 259 ಮತಗಟ್ಟೆ ಕೇಂದ್ರಗಳ ಮತದಾನಕ್ಕೆ ಅವಶ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಪೂರೈಸಲಾಗುವುದು. ಈಗಾಗಲೇ ಮತ ಯಂತ್ರಗಳಿಗೆ ಅಭ್ಯರ್ಥಿಗಳ ಭಾವಚಿತ್ರವುಳ್ಳ ಬ್ಯಾಲೇಟ್ ನಮೂನೆಯಲ್ಲಿ ಅಳವಡಿಸಲಾಗಿದೆ.

        ವಿವಿ ಫ್ಯಾಟ್ ಮತ್ತು ಕಂಟ್ರೂಲ್ ಯುನಿಟ್‍ಗಳ ಬ್ಯಾಟರಿ, ಯಂತ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಇಂಜಿನಿಯಗಳ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ. ಸೆಕ್ಟರ್ ಅಧಿಕಾರಿಗಳ ಹೆಸರು, ಅವರಿಗೆ ನೀಡಿರುವ ಯಂತ್ರದ ನಂಬರ್‍ಗಳ ದಾಖಲು ಮಾಡಿಕೊಳ್ಳಲಾಗಿದೆ. ಯಾವುದೇ ಹಂತದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ಜಾಗ್ರತೆ ವಹಿಸಲಾಗಿದೆ. ಸೆಕ್ಟರ್ ಅಧಿಕಾರಿಗಳಿಗೆ ಇಣುಕು ಮತದಾನದ ಮೂಲಕ ಯಂತ್ರಗಳ ಕಾರ್ಯನಿರ್ವಹಣೆಯ ಬಗ್ಗೆ ಮನದಟ್ಟು ಮಾಡಲಾಗಿದೆ ಎಂದರು.

         ಈ ಸಂದರ್ಭದಲ್ಲಿ ಕಂದಾಯಾಧಿಕಾರಿಗಳಾದ ಶರಣಬಸಪ್ಪ, ಶಾಂತಣ್ಣ, ಗ್ರಾಮಲೆಕ್ಕಿಗರಾದ ರಾಜೇಶ್, ಲಿಂಗೇಗೌಡ, ಚುನಾವಣಾ ಇಲಾಖೆಯ ಶಿರಸ್ತೇದಾರ್ ನಾಗರಾಜು, ಪ್ರಕಾಶ್, ಓಬಳೇಶ್, ನಾಗರಾಜು ಮುಂತಾದವರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link