ತುಮಕೂರು :
ದೇವರಾಯನದುರ್ಗದ ನಿಸರ್ಗ ತಾಣ ಸವಿಯಲು ನೂರಾರು ಸಂಖ್ಯೆಯಲ್ಲಿ ನಿಸರ್ಗ ಪ್ರಿಯರು, ವಾಯು ವಿಹಾರಕ್ಕೆಂದು ಹೋಗುತ್ತಿರುವುದು ಸಂತಸದ ವಿಷಯವೆ. ಆದರೆ ಈಗ ಕೊರೊನಾ ಇನ್ನಷ್ಟು ಹೆಚ್ಚಿದೆ. ಇದರಿಂದ ಅನೇಕ ಮಂದಿ ಇದಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮಾಸ್ಕ್ ಧರಿಸಿ ಓಡಾಡುವುದೇ ಆಗಿದೆ. ಆದರೆ ಅನೇಕ ಮಂದಿ ವಾಯು ವಿಹಾರಿಗಳು ಮಾಸ್ಕ್ ಧರಿಸದೆ ಓಡಾಡುತ್ತಿದ್ದದನ್ನು ಅರಿತ ಪೊಲೀಸರು ಕುಂದೂರು ಕ್ರಾಸ್ ಬಳಿ ತಡೆದು ಮಾಸ್ಕ್ ಧರಿಸಿ ಓಡಾಡಿ.
ಮಾಸ್ಕ್ ಇಲ್ಲದೆ ಓಡಾಡಿದರೆ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದ ದೃಶ್ಯ ನಿಜಕ್ಕೂ ಪ್ರಶಂಸನೀಯ. ಪೊಲೀಸರ ವರಸೆಯೇ ಬೇರೆ. ಆದರೆ ಮಾನವೀಯ ದೃಷ್ಟಿಯಿಂದ ಸಾರ್ವಜನಿಕರಿಗೆ ಹಿತವಚನ ಹೇಳಿ ಮಾಸ್ಕ್ ಧರಿಸದೆ ಓಡಾಡಬೇಡಿ ಎಂಬ ಮಾತುಗಳನ್ನಾಡಿ ಪ್ರವಾಸಿಗರ ಹಾಗೂ ವಾಯುವಿಹಾರಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದು ಎಲ್ಲರ ದೃಷ್ಟಿಯಿಂದಲೂ ಒಳಿತೇ ಅಲ್ಲವೆ? ಸುಖಾಸುಮ್ಮನೆ ದಂಡ ಕಟ್ಟುವುದು ಏಕೆ? ಬಾಯಿ, ಮೂಗು ಮುಚ್ಚಿಕೊಳ್ಳುವಂತಹ ಮಾಸ್ಕ್‍ನ್ನು ಧರಿಸಿ ಕೊರೊನಾ ಹರಡದಂತೆ ತಡೆಗಟ್ಟುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೆ? ಏನೇ ಆಗಲಿ ಬೆಳ್ಳಂ ಬೆಳಿಗ್ಗೆಯೇ ಪೊಲೀಸರು ವಾಯು ವಿಹಾರಿಗಳನ್ನು ಎಚ್ಚರಿಸಿದ ಪರಿ ನಿಜಕ್ಕೂ ಅಭಿನಂದನೀಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ