ಬೆಂಗಳೂರು
ಬೆಂಗಳೂರು ಕೆರೆಗಳ ಸಂರಕ್ಷಣೆ ವಿಚಾರವಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ-ಎನ್‍ಜಿಟಿ ಸರ್ಕಾರದ ಮೇಲೆ ದಂಡ ವಿಧಿಸಿರುವ ಆದೇಶದ ಪ್ರತಿ ಕೈ ಸೇರಿಲ್ಲ. ಪ್ರತಿ ಸಿಕ್ಕ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಂದೂರು ಕೆರೆ ನಿರ್ವಹಣೆಗೆ ಈ ಬಾರಿ 50 ಕೋಟಿ ರೂಪಾಯಿ ಮೀಸಲಿಡಲಾಗಿದೆ ಇದೀಗ ಅದರ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ದಂಡ ಹಾಕಿರುವುದು ಸರಿಯಲ್ಲ ಎಂದರು. ಕೆರೆ ವಿಚಾರವಾಗಿ ಎನ್‍ಜಿಟಿ ಹೊಂದಿರುವ ಉದ್ದೇಶ ಸರಿ ಇದ್ದರೂ ನಿರ್ವಹಣೆ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ ಎಂದು ಪರಮೇಶ್ವರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
