ಕಲಬುರಗಿ: ವಾರಿಸ್ ಪಠಾಣ್ ವಿರುದ್ಧ ಎಫ್ ಐ ಆರ್ ದಾಖಲು

ಕಲಬುರಗಿ:

     ಫೆ.16ರಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎಐಎಂಐಎಂ ಮುಖಂಡ ವಾರಿಸ್‌ ಪಠಾಣ್ ವಿರುದ್ಧ ಕಲಬುರಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಕಲಬುರ್ಗಿ ಪೊಲೀಸರು ಪಠಾಣ್ ವಿರುದ್ಧ ಐಪಿಸಿ ಸೆಕ್ಸೆನ್ 117, 150(ದಂಗೆಗೆ ಪ್ರಚೋದನೆ ನೀಡುವುದು) ಮತ್ತು 153ಎ ಅಡಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ್ದ ಪಠಾಣ್, ನಾವು ಎಲ್ಲರೂ ಒಟ್ಟಿಗೆ ಹೋಗಬೇಕು. ನಮಗೂ ಸ್ವಾತಂತ್ರ್ಯ ಬೇಕು. ಆದರೆ ಇದನ್ನು ಕೇಳಿ ಪಡೆಯಲು ಸಾಧ್ಯವಿಲ್ಲ. ಇವುಗಳನ್ನು ನಾವು ಬಲವಂತದಿಂದ ಪಡೆಯುವ ಸ್ಥಿತಿ ಬಂದಿದೆ. ನೆನಪಿಡಿ, ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ 15 ಕೋಟಿ ಇರಬಹುದು. ಆದರೆ, ಅಗತ್ಯಬಿದ್ದರೆ 100 ಕೋಟಿ ಬಹುಸಂಖಾತರಿಗೆ ತಿರುಗೇಟು ನೀಡಬಲ್ಲ ಸಾಮರ್ಥ್ಯ ನಮಗಿದೆ ಎಂದು ಹೇಳಿಕೆ ನೀಡಿದ್ದರು.
    ಇನ್ನು ಪಠಾಣ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಮತ್ತು ಶಿವಸೇನೆ, ಎಐಎಂಐಎಂ ಮುಖಂಡನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap