ಚಿತ್ರದುರ್ಗ
ಪ್ಲಾಸ್ಟಿಕ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಭಸ್ಮವಾದ ಘಟನೆ ನಡೆದಿದೆ.ಚಿತ್ರದುರ್ಗ ಹೊರ ವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ತ್ರಿಮೂರ್ತಿ ಇಂಜಿನಿಯರಿಂಗ್ ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ಸ್.ಪ್ಲಾಸ್ಟಿಕ್ ಕೊಡ,ಟ್ರೈಯ್, ಕ್ಯಾನ್ ಗಳನ್ನ ತಯಾರಿಕಾ ಘಟಕ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಶಾಟ್ರ್ಸಕ್ರ್ಯೂಟ್ನಿಂದ ಹೊತ್ತಿರುವ ಬೆಂಕಿ ಹತ್ತಿರುವ ಘಟನೆ ನಡೆದಿದ್ದು, ಇಡೀ ಪ್ರದೇಶ ದಟ್ಟವಾದ ಕಪ್ಪು ಹೊಗೆಯಿಂದ ಆವರಿಸಿತ್ತು. ಮುಂದೆ ಆಗಬಹುದಾದ ಭಾರೀ ಅನಾಹುತವನ್ನು ಅದೃಷ್ಟವಶಾತ್ ತಪ್ಪಿಸಿದಂತಾಗಿದೆ.ಮೂರು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








