ಪಟಾಕಿ ಸಿಡಿಸಿ ಸಂಭ್ರಮ ತರವಲ್ಲ : ರಘುಚಂದನ್

ಚಿತ್ರದುರ್ಗ;
     ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಶುಕ್ರವಾರದಂದು ನಗರದಲ್ಲಿ ಮಾಲಿನ್ಯ ಮುಕ್ತ ದೀಪಾವಳಿ ಆಚರಿಸುವ ಕುರಿತು ಬೃಹತ್ ಜಾಗೃತಿ ಜಾಥ ನಡೆಸಲಾಯಿತು  ಶಾಲೆಯ ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ದೀಪ ಹಚ್ಚಿ ಪರಿಸರ ಉಳಿಸಿ ಎಂಬ ಘೋಷವಾಕ್ಯಗಳ ಮೂಲಕ ಚಿತ್ರದುರ್ಗದ ಜನತೆಗೆ ಪಠಾಕಿಯಿಂದ ಆಗುವ ಅನಾಹುತ ಮತ್ತು ಪರಿಸರ ಮಾಲಿನ್ಯದ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು
    ನಂತರ ಹೆಚ್ಚು ಮಾಲಿನ್ಯ ಮತ್ತು ಶಬ್ಧಭರಿತ  ಪಠಾಕಿಗಳಿಗೆ ಅನುಮತಿಯನ್ನು ನೀಡಬಾರದು ಇದಕ್ಕೆ ನಮ್ಮ ವಿರೋದವಿದೆ ಎಂದು 4000 ವಿದ್ಯಾರ್ಥೀಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಜಾಗೃತಿ ಜಾಥಗೆ ಚಾಲನೆ ನೀಡಿದ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಮಾತನಾಡಿ,
    ದೀಪಾವಳಿ ಹಿಂದೂಗಳಿಗೆ ಸಂಭ್ರಮ ತರುವ ಹಬ್ಬ. ಆದರೆ ಪರಿಸಕ್ಕೆ ಹಾನಿಯಾಗದಂತೆ ಆಚರಿಸುವುದು ಒಳಿತು. ಹೆಚ್ಚು ಶಬ್ದ ಉಂಟು ಮಾಡುವ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ತರವಲ್ಲ. ಎಲ್ಲರೂ ಪರಿಸರ ಸ್ನೇಹಿ ದೀಪಾವಳಿ ಆಚರಣೆಯತ್ತ ಆಲೋಚಿಸಬೇಕು ಎಂದು ಸಲಹೆ ನೀಡಿದರು
   ದೀಪಾವಳಿ ರಂಗು ರಂಗಿನ ಬೆಳಕಿನ ಹಬ್ಬ ಈ ಹಬ್ಬವನ್ನು ಹಿಂದೂ ಧರ್ಮೀಯರು ಸಡಗರದಿಂದ ಆಚರಿಸುತ್ತಾರೆ. ಈ ದಿನದಂದು ಹೊಸ ಬಟ್ಟೆ ತೊಟ್ಟು ಸಿಹಿ ತಿನಿಸಿಗಳನ್ನು ಮಾಡಿ ಬಾಗಿಲೆಗೆ ಶೃಂಗಾರ ಮಾಡಿ ಶಾಂತಿಯಿಂದ ಆಚರಣೆ ಮಾಡಬೇಕೆಂಬುದು ನನ್ನ ಆಸೆ, ಆದರೆ ಇವತ್ತಿನ ದಿನಗಳಲ್ಲಿ  ನಮ್ಮ ಜನರು ಸಿಡಿಮದ್ದುಗಳನ್ನು ಬಳಸಿಕೊಂಡು ಸಂಭ್ರಮ ಮಾಡಲು ಹೋಗಿ ತಮ್ಮ ಅಮೂಲ್ಯ ಜೀವನವನ್ನೆ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು
    ನಮ್ಮ ಪರಿಸರದಲ್ಲಿ ವಾಯುಮಾಲಿನ್ಯಕ್ಕೆ ಸುಮಾರು ಕಾರಣಗಳಿವೆ ಅದರಲ್ಲಿ ಪ್ರತಿ ಶತ 30% ಕೇವಲ ಮೂರು ದಿನದ ಪಟಾಕಿ ಸಿಡಿಸುವುದರಿಂದ ಆಗಿದೆ ಎಂದರೆ ನಂಬಲು ಅಸಾಧ್ಯ ಆದರೂ ಇದು ಸತ್ಯ ಈ ಸಿಡಿಮದ್ದುಗಳಿಂದ ಹೊರಬರುವ ವಿಷ ಅನಿಲಗಳೆಂದರೆ ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಬೆಂಜಿನ್ ಮುಂತಾದುವುಗಳು ಪರಿಸರದಲ್ಲಿನ ಗಾಳಿಯನ್ನು ಮಲೀನಗೊಳಿಸುತ್ತವೆ. ವಾಯುಮಾಲಿನ್ಯದಿಂದಾಗಿ ಮಾನವನಿಗೂ ಹಾಗೂ ಪ್ರಾಣಿ ಪಕ್ಷಿಗಳಿಗೂ ಹಲವಾರು ತೊಂದರೆಗಳಾಗುತ್ತವೆ ಎಂದರು
 
    ಮುಖ್ಯವಾಗಿ ಅಸ್ತಮ ಶ್ವಾಸÀಕೋಶದ ತೊಂದರೆ ಹಾಗೂ ಉಸಿರಾಟದ ತೊಂದರೆಗಳೇ ಹೆಚ್ಚು ಇವುಗಳ ಕಾರಣದಿಂದಾಗಿ  ದೇಶದಲ್ಲಿ ಸುಮಾರು 620000 ಜನರು ಬಲಿಯಾಗುತ್ತಿದ್ದಾರೆ. ದಿ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ (ಜಿಬಿಡಿ) ಪ್ರಕಾರ  ಬೆಂಗಳೂರಿನಲ್ಲಿ ಸುಮಾರು 8000 ದಿಂದ 25000 ಜನರು ವಾರ್ಷಿಕವಾಗಿ ಸಾವಿಗೀಡಾಗುತ್ತಿದ್ದಾರೆ. ಪ್ರಸ್ತುತ ಸಾಲಿನ ಪರಿವೀಕ್ಷಣೆಯ ಪ್ರಕಾರ ತುಂಬಾ ವಾಯುಮಾಲಿನ್ಯಗೊಂಡಿರುವ ರಾಜ್ಯಗಳು ಎಂದರೆ ಮೊದಲನೇ ಸ್ಥಾನದಲ್ಲಿ ದೆಹಲಿ, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ, ಮೂರನೇ ಸ್ಥಾನದಲ್ಲಿ ಹರಿಯಾಣ ಹಾಗೂ ನಮ್ಮ ರಾಜ್ಯ 18 ನೇ ಸ್ಥಾನದಲ್ಲಿದೆ ಹೀಗೆ ಪರಿಸ್ಥಿತಿ ಮುಂದುವರೆದರೆ ನಾವು ಬದುಕುಳಿಯುವುದೇ ಕಷ್ಟಕರವಾಗುತ್ತದೆ ಎಂದು ರಘುಚಂದನ್ ವಿವಿರಿಸಿದರು
     ಪರಿಸರದಲ್ಲಿನ ವಾಯುಮಾಲಿನ್ಯವನ್ನು ತಡೆಗಟ್ಟಲು ಹಾಗೂ ಎಷ್ಟೋ ಜೀವರಾಶಿಗಳನ್ನು ಕಾಪಾಡಲು ಹಾಗೂ ನಮ್ಮ ಸುತ್ತಮುತ್ತಲಿನ ಜನರಲ್ಲಿ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದಾಗುವ ಅನಾನುಕೂಲಗಳ ಬಗ್ಗೆ ಅರಿವು ಮೂಡಿಸುವ ನಮ್ಮ ಸಣ್ಣ ಪ್ರಯತ್ನವೇ ಈ ಜಾಗೃತಿ ಜಾಥಾದ ಉದ್ದೇಶವೆಂದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಕೊಟ್ರೇಶ್,ಶಿಕ್ಷಕರು, ಉಪನ್ಯಾಸಕರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link