ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಹೊಸಕೆರೆ ಬಳಿ ಕಳೆದ ಹದಿನೈದು ದಿನಗಳ ಹಿಂದಷ್ಟೆ ಶಾಸಕರು ರಾಶಿ ಕಂಪನಿಯ ಹತ್ತಿಯಿಂದ ಬೀಜ ಬೇರ್ಪಡಿಸುವ ಗಿರಣಿಯನ್ನು ಉದ್ಘಾಟಿಸಿದ್ದರು. ಇದೀಗ ನ. 25 ರಂದು ಸದರಿ ರಾಶಿ ಹತ್ತಿ ದಾಸ್ತಾನಿನ ಗೋಡಾನ್‍ಗೆ ವೆಲ್ಡಿಂಗ್‍ನ ಕಿಡಿ ಸಿಡಿದು ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಬೆಲೆಯ ಹತ್ತಿ ಸುಟ್ಟು ಬೂದಿಯಾಗಿದೆ. ಆ ಸಂದರ್ಭದಲ್ಲಿ ಸುಮಾರು
ಐವತ್ತು ಜನ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಅವಘಡದ ಬಗ್ಗೆ ಹೊಸಕೆರೆ ಗ್ರಾಮದ ಶ್ರೀ ವೀರನಾಗಮ್ಮ ದೇವಿಗೆ ಕಡೆ ಕಾರ್ತಿಕ ಮಾಸದ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಿಡಿಗೇಶಿ ಶ್ರೀ ಲಕ್ಷ್ಮೀದೇವಿ (ಲಕ್ಕಮ್ಮ ದೇವಿ)ಯ ಕಾರ್ತಿಕ ಮಾಸದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಾಸಕ ಎಂ.ವಿ.ವೀರಭದ್ರಯ್ಯನವರಿಗೆ ಸುದ್ದಿ ಮುಟ್ಟಿದೆ. ಅವರು ಹತ್ತಿಗಿರಣಿಗೆ ಭೇಟಿ ನೀಡಿ ಹತ್ತಿಗಿರಣಿ ಮಾಲೀಕ ಕಿತ್ತಗಳಿ ಗೋವಿಂದರಾಜುರವರಿಗೆ ಸಾಂತ್ವನ ಹೇಳಿದರು.
ಬೆಂಕಿ ಅವಘಡದಲ್ಲಿ 770 ಕ್ವಿಂಟಾಲ್ ಹತ್ತಿ ಸುಟ್ಟು ಹೋಗಿದೆ ಎಂದು ಹತ್ತಿ ಗಿರಣಿ ಮಾಲೀಕ ಗೋವಿಂದರಾಜು ಪತ್ರಿಕೆಗೆ ತಿಳಿಸಿದ್ದಾರೆ. ಬೆಂಕಿ ನಂದಿಸಲು ಮೂರು ಅಗ್ನಿಶಾಮಕ ವಾಹನಗಳು ಹಾಗೂ ಇಪ್ಪತ್ತು ಸಿಬ್ಬಂದಿ ತುರ್ತಾಗಿ ಆಗಮಿಸಿ ಬೆಂಕಿ ನಂದಿಸಿ, ಮುಂದಿನ ಅನಾಹುತವನ್ನು ತಪ್ಪಿಸಿದ್ದಾರೆ. ಹತ್ತಿ ಗಿರಣಿಗೆ ವಿದ್ಯುತ್ ಸಂಪರ್ಕ ಇರದೆ, ಜನರೇಟರ್ ಮೂಲಕ ಹತ್ತಿ ಗಿರಣಿಯ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಮಿಡಿಗೇಶಿಯ ಪೋಲೀಸ್ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ