ಬೆಂಗಳೂರು
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದ ನಿರ್ದೇಶಕರೊಬ್ಬರು, ಬಳಿಕ ಅವಕಾಶ ಬೇಕಾದರೆ ತಮ್ಮೊಂದಿಗೆ ಕಮಿಟ್ ಮೆಂಟ್ ಮಾಡಿಕೋ ಕೇಳಿರುವುದಾಗಿ ಸ್ಯಾಂಡಲ್‍ವುಡ್ ಯುವ ನಟಿಯೊಬ್ಬರು ಗೋರಿ ಮೇಲೆ ಲಗೋರಿ’ ಸಿನಿಮಾ ನಿರ್ದೇಶಕ ಎಸ್‍ಪಿ ಪ್ರಕಾಶ್ ವಿರುದ್ಧ ಆರೋಪ ಮಾಡಿದ್ದಾರೆ.
ಸಿನಿಮಾ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವೇಳೆಯೇ ಯುವ ನಟಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಸಿನಿಮಾ ಕ್ಷೇತ್ರದಲ್ಲೂ ನಟಿಯನ್ನು ಗುರಿ ಮಾಡಿ ಮಂಚಕ್ಕೆ ಕರೆಯವು ನಿರ್ದೇಶಕರಿದ್ದಾರೆ ಎಂದು ಹೇಳಿರುವ ಯುವ ನಟಿ, ಮೊದಲು ನನಗೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿದ್ದರು. ಬಳಿಕ ಕಮಿಟ್ ಆಗುತ್ತಿಯಾ, ಹಣ ಕೊಡುತ್ತೇನೆ ಎಂದಿದ್ದರು ಎಂದು ನಟಿ ಹೇಳಿದ್ದಾರೆ. ಅಲ್ಲದೇ ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ನನಗೆ ಪೊಲೀಸ್, ರಾಜಕೀಯ ನಾಯಕರು ಹಾಗೂ ರೌಡಿಗಳು ಗೊತ್ತು. ನೀನು ದೂರು ನೀಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಿರ್ದೇಶಕರು ಬೆದರಿಕೆ ಹಾಕಿದ್ದರು ಎಂದು ನಟಿ ಹೇಳಿದ್ದು, ಈ ಕುರಿತ ವಾಟ್ಸಾಪ್ ಮೇಸೆಜ್‍ಗಳ ಸ್ಕ್ರಿನ್ ಶಾಟ್ ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೀಟೂ ಅಭಿಯಾನ ಆರಂಭವಾದ ಬಳಿಕ ತನಗಾದ ಕಿರುಕುಳವನ್ನು ಬಹಿರಂಗ ಪಡಿಸಿರುವ ನಟಿ ತನ್ನ ಹೆಸರನ್ನು ಹೇಳಲು ಇಚ್ಛಿಸಿಲ್ಲ. ಆದರೆ ಸಿನಿಮಾದಲ್ಲಿ ಅವಕಾಶಕ್ಕಾಗಿ ಆಗಮಿಸುವ ಬೇರೆ ಯಾವ ಯುವತಿಯರಿಗೂ ತನಗಾದ ಅನುಭವ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಮಾಡಿದ್ದಾರೆ. ಆದರೆ ಇದುವರೆಗೂ ನಿರ್ದೇಶಕರ ಮೇಲೆ ಮಾಡಿರುವ ಆರೋಪದ ಕುರಿತು ನಟಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ