ಸುಗಮ ಸಂಚಾರಕ್ಕೆ ಮೊದಲ ಆಧ್ಯತೆ : ಭಾಸ್ಕರ್ ರಾವ್

ಬೆಂಗಳೂರು

     ನಗರದಲ್ಲಿನ ಮಿತಿ ಮೀರಿದ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಸುಗಮ ಸಂಚಾರ ಕೈಗೊಳ್ಳಲು ಸಲಹೆ ಸೂಚನೆ ನೀಡಲು ಸಾರ್ವಜನಿಕರಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಮನವಿ ಮಾಡಿದ್ದಾರೆ.ನಗರದಅತಿ ಹೆಚ್ಚು ಸಂಚಾರ ದಟ್ಟಣೆಯುಳ್ಳ ೪೦ ಸ್ಥಳಗಳನ್ನು ಗುರುತಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರಿಸುವ ಮೂಲಕ ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯವಿರುವ ಸಲಹೆ-ಸೂಚನೆ ನೀಡುವಂತೆ ಅವರು ಕೋರಿದ್ದಾರೆ.

     ಗುರುತಿಸಿರುವ ೪೦ ಸಂಚಾರ ದಟ್ಟಣೆ ಸ್ಥಳಗಳಲ್ಲಿ ಉಸಿರುಗಟ್ಟಿಸುವ ದಟ್ಟಣೆ ಹಾಗೂ ಸಂಚಾರಕ್ಕೆ ಅಡಚಣೆಯುಂಟಾಗುತ್ತಿರುವು ದನ್ನು ಗಂಭೀರವಾಗಿ ಪರಿಗಣಿಸಿ ಭಾಸ್ಕರರಾವ್ ಈ ಕ್ರಮಕ್ಕೆ ಮುಂದಾಗಿದ್ದಾರೆ.ರೇಷ್ಮೆ ಮಂಡಳಿ ಜಂಕ್ಷನ್, ಕೃಪಾನಿಧಿ ಕಾಲೇಜು ಜಂಕ್ಷನ್, ಕೆಆರ್ ಮಾರುಕಟ್ಟೆ ಜಂಕ್ಷನ್, ಟ್ರಿನಿಟಿ ವೃತ್ತ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್, ಯಲಹಂಕ ಬೈಪಾಸ್, ಮೇಖ್ರಿ ವೃತ್ತ ಜಂಕ್ಷನ್‌ಗಳಂತಹ ಸಂಚಾರ ದಟ್ಟಣೆ ಪ್ರದೇಶಗಳನ್ನೂ ಸೇರಿದಂತೆ ಒಟ್ಟು ೪೦ ಸಂಚಾರ ದಟ್ಟಣೆ ಪ್ರದೇಶಗಳನ್ನು ಪಟ್ಟಿ ಮಾಡಿ ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕರ ಸಲಹೆ-ಸೂಚನೆ ಕೋರಿದ್ದಾರೆ.

       ಕೇಂದ್ರ ವಾಣಿಜ್ಯ ಮಂಡಳಿ ನಗರದ ೭ ಸಂಚಾರ ದಟ್ಟಣೆ ಪ್ರದೇಶಗಳನ್ನು ಒಂಟಿಯಾಗಿ ಗುರುತಿಸಿ, ಪಟ್ಟಿ ಮಾಡಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರ ದಟ್ಟಣೆ ಪ್ರದೇಶಗಳ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಈ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕರ ಮಧ್ಯ ಪ್ರವೇಶದ ಅಗತ್ಯವಿದೆ.

        ಈ ಸಂಬಂಧ ಅಗತ್ಯ ಸಲಹೆಗಳನ್ನು ಇ-ಮೇಲ್, ವಾಟ್ಸಾಪ್, ಎಸ್‌ಎಂಎಸ್, ಟ್ವೀಟ್ ಅಥವಾ ಫೇಸ್‌ಬುಕ್‌ಗಳ ಮೂಲಕ ನಿನ್ನಿಂದ ನಿರೀಕ್ಷಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.ಪೊಲೀಸ್ ಆಯುಕ್ತರ ಟ್ವೀಟ್‌ಗೆ ಉತ್ತರಿಸಿರುವ ಕೆಲ ಸಾರ್ವಜನಿಕರು, ಎಲ್ಲೆಂದರಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ನಿಲುಗಡೆಯಾಗುತ್ತಿರುವುದರಿಂದ ಈ ಸಮಸ್ಯ ಉದ್ಭವವಾಗಿದೆ. ಬಸ್‌ಗಳಿಗೆ ನಿಗದಿಪಡಿಸಿರುವ ನಿಲುಗಡೆಗಳಲ್ಲಿ ಬಸ್ ನಿಲ್ಲಿಸದೆ ಬೇರೆಡೆ ನಿಲ್ಲಿಸುತ್ತಿರುವುದು ಸಂಚಾರ ದಟ್ಟಣೆಗೆ ಮತ್ತೊಂದು ಕಾರಣ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ