ಅಸ್ತ್ರ ಕಿರುಚಿತ್ರಕ್ಕೆ ಮೊದಲ ಬಹುಮಾನ

ಚಿತ್ರದುರ್ಗ;

      ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಐತಿಹ್ಯ ಕ್ರಿಯೇಷನ್ಸ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಬಹುಮುಖಿ ಕಲಾ ಕೇಂದ್ರ ಆಯೋಜಿಸಿದ ರಾಜ್ಯ ಮಟ್ಟದ ಕಿರುಚಿತ್ರಗಳ ಚಿತ್ರೋತ್ಸವದಲ್ಲಿ ಬೆಂಗಳೂರಿನ ಪ್ರದೀಪ್ ಪರಮೇಶ್ವರ್ ನಿರ್ದೇಶನದ ಅಸ್ತ ಕಿರುಚಿತ್ರಕ್ಕೆ ಮೊದಲ ಬಹುಮಾನ ದೊರೆಯಿತು

        ಚಿತ್ರೋತ್ಸವದಲ್ಲಿ ಒಟ್ಟು 11 ಕಿರು ಚಿತ್ರಗಳು ಪ್ರದರ್ಶನಗೊಂಡವು. ಅಸ್ತ ಚಿತ್ರಕ್ಕೆ ಪ್ರಥಮ ಸ್ಥಾನ, ಅಂತರಂಗ ಚಿತ್ರಕ್ಕೆ ಎರಡನೆ ಸ್ಥಾನ, ಬ್ರೌನಿ ಚಿತ್ರ ಮೂರನೆ ಸ್ಥಾನ ಪಡೆದುಕೊಂಡಿತು. ಅತ್ಯುತ್ತಮ ನಿರ್ದೇಶನ ಸ್ಮಿತೇಷ್. ಚಿತ್ರ ಅಂತರಂಗ, ಅತ್ಯುತ್ತಮ ಕಥೆ ಸ್ಟಾನಿ ಲೂಪ್ಸ. ಚಿತ್ರ ಮುಪ್ಪು, ಅತ್ಯುತ್ತಮ ಛಾಯಾಗ್ರಹಣ ಪ್ರದೀಪ್, ಚಿತ್ರ ಚಾಕ್ಲೇಟ್ ಅತ್ಯುತ್ತಮ ನಟ ಅನಿಷ್, ಚಿತ್ರ ಅಂತರಂಗ, ಅತ್ಯುತ್ತಮ ಸಂಕಲನ ವಿಕ್ರಂ ಗೌಡ, ಚಿತ್ರ ಅಸ್ತ. ಅತ್ಯುತ್ತಮ ಬಾಲ ನಟಿ ಸಾವಿನ ಗುಂಡಿಗಳು ಚಿತ್ರಕ್ಕೆ ಬೇಬಿ ಹರಿಪ್ರಿಯ ಪಡೆದುಕೊಂಡರು.

        ಬೆಂಗಳೂರಿನ ಚಲನಚಿತ್ರ ನಿರ್ದೇಶಕ ವಿಠಲ ಭಟ್ಟ ಹಾಗೂ ವಿಮರ್ಶಕ ಪ್ರಕಾಶ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.ಕಿರು ಚಿತ್ರ ನಿರ್ದೇಶಕ ಲಕ್ಷ್ಮೀ ನಾರಾಯಣ ಮಾತನಾಡಿ, ಚಿತ್ರದುರ್ಗದಲ್ಲಿ ಇಂತಹ ಒಂದು ಉತ್ಸವ ಆಯೋಜನೆ ಮಾಡಿರುವುದ ಉತ್ತಮ ಬೆಳವಣಿಗೆ. ಈ ಪ್ರಯತ್ನ ಯಾರು ಮಾಡಿರಲಿಲ್ಲ ಇನೆಂಟ್ ವಿನಯ್ ಮಾಡಿದಕ್ಕೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ. ಇದರಿಂದ ಹೊಸ ಕಲಾವಿದರಿಗೆ, ತಂತ್ರಜ್ಞಾರಿಗೆ ಪ್ರೊತ್ಸಾಹ ನೀಡಿದಂತೆ ಆಗುತ್ತದೆ. ಹೊಸ ಪ್ರತಿಭೆಗಳು ಬೆಳೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.

          ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಫಾತ್ಯರಾಜನ್, ಐತಿಹ್ಯ ಕ್ರಿಯೇಷನ್ಸ್‍ನ ಇನೆಂಟ್ ವಿನಯ್, ಬಹುಮುಖಿ ಕಲಾ ಕೇಂದ್ರ ಮಧು, ಕಾರಂಜಿ ಶ್ರೀನಿವಾಸ್, ಐತಿಹ್ಯ ಕ್ರಿಯೇಷನ್ಸ್‍ನ ಅಧ್ಯಕ್ಷ ಬಿ.ಆರ್.ಮಂಜುನಾಥ, ಉದ್ಯಮಿ ಸದಾಶಿವ, ರಂಗ ನಿರ್ದೇಶಕ ಮಂಜುನಾಥ ಹರಪ್ಪನಹಳ್ಳಿ, ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap