ವೈದ್ಯ ವಿದ್ಯಾರ್ಥಿಗಳಿಗೆ ಮೊದಲನೇ ವರ್ಷದ ಪದವಿ ಪ್ರಧಾನ ಸಮಾರಂಭ

ತುಮಕೂರು:

         ಶ್ರೀ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಕುರುಬ ಸುಮುದಾಯಕ್ಕೆ ಸೇರಿದ ಸಂಸ್ಥೆ ಇದನ್ನು 1992 ರಲ್ಲಿ ಡಾ.ಎಂ.ಆರ್. ಹುಲಿನಾಯ್ಕರ್ ತುಮಕೂರಿನಲ್ಲಿ ಪ್ರಾರಂಭಿಸಿದರು. ಇವರು ಜನರಲ್ ಸರ್ಜನ್‍ರಾಗಿ ಇವರ ಧ್ಯೇಯದ್ದೇಶಗಳಾದ ಶೈಕ್ಷಣಿಕ ಉತ್ಕೃಷ್ಟತೆ ಬಲವಾದ ನೈತಿಕ ಮೌಲ್ಯಗಳನ್ನೊಂದಿಗೆ ವೈದ್ಯ ವಿದ್ಯಾರ್ಥಿಗಳಿಗೆ ಆರೋಗ್ಯ ಚಿಕಿತ್ಸೆ ಪರಿಣಿತಿ ನೀಡಲು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಎಲ್ಲಾ ವಿಭಾಗಗಳಿಗೆ ಸೇರಿದ ರೋಗಿಗಳಿಗೆ ಇತ್ತೀಚಿನ ವೈದ್ಯಕೀಯ ಮೂಲಭೂತ ಸೌಕರ್ಯ ಮತ್ತು ವೈದ್ಯಕೀಯ ತಜ್ಞರು ಬೆಂಬಲಿಸುವ ಉತ್ತಮ ಆರೋಗ್ಯವನ್ನು ಒದಗಿಸಲು ಮೆಡಿಕಲ್ ಕೌನ್ನಿಲ್ ಆಫ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯ ನ್ಯೂ ಡೆಲ್ಲಿನಿಂದ ಅನುಮೋದನೆ ಹಾಗೂ ಮಾನ್ಯತೆ ಪಡೆಯಲಾಗಿದೆ.

         ಈ ಟ್ರಸ್ಟ್‍ನ ಅಡಿಯಲ್ಲಿ ಪಿ.ಜಿ. ಕೋರ್ಸ್, ಪದವಿ, ನರ್ಸಿಂಗ್, ಪ್ಯಾರಾ ಮೆಡಿಕಲ್, ಫೆಸಿಯೋಥೆರಪಿ, ಪಾಲಿಟೆಕ್ನಿಕ್, ಐ.ಟಿ.ಐ. ಇಂಜಿನಿಯರಿಂಗ್, ಎಂ.ಬಿ.ಎ., ಹಾಗೂ ಕಿಂಡರ್ ಗಾರ್ಡನ್‍ನಿಂದ ಪದವಿ ಕೋರ್ಸ್‍ಗಳ ವರೆಗೆ ಸ್ಥಾಪಿಸಲಾಗಿದೆ. ತದನಂತರ ವೈದ್ಯಕೀಯ ಮತ್ತು ಸಂಶೋಧನಾ ಆಸ್ಪತ್ರೆ ಪ್ರಾರಂಭಿಸಲಾಗಿದೆ. ಈ ಆಸ್ಪತ್ರೆಯ 750 ಚಾರಿಟಬಲ್ ಹಾಸಿಗೆಗಳನ್ನು ಹೊಂದಿದೆ. ಹಾಗೂ ವೈದ್ಯಕೀಯ, ಹೃದಯ, ಸರ್ಜಿಕಲ್, ಮಕ್ಕಳ ವಿಭಾಗ, ಶ್ವಾಸಕೋಶ ಮತ್ತು ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗಗಳಲ್ಲಿ ಹೆಚ್ಚುವರಿ ತೀವ್ರತೆಯ ಆರೈಕೆ ಸೌಕರ್ಯ ಹಾಗೂ 13 ಹೊಸ ಆಪರೇಷನ್ ಥಿಯೇಟರ್‍ಗಳ ಸೌಲಭ್ಯವನ್ನು ಹೊಂದಿದೆ.

         ಅತ್ಯುಧುನಿಕ ಪ್ರಯೋಗಾಲಯ ಶಾಲೆ, ರಕ್ತನಿಧಿ ಕೇಂದ್ರ ಮತ್ತು ಕ್ಷ ಕಿರಣ ರೇಡಿಯೋಜಿಯ ವಿಭಾಗಗಳನ್ನು ಹೊಂದಿರುತ್ತದೆ, ಆಸ್ಪತ್ರೆ ಪ್ರಾರಂಭದಿಂದಲೂ ಸಾವಿರಾರು ರೋಗಿಗಳಿಗೆ ರಿಯಾಯಿತಿ ದರದಲ್ಲಿ ಹಾಗೂ ತುತ್ರ್ತಾಗಿ ಚಿಕಿತ್ಸೆಯನ್ನು ನೀಡುತ್ತಿದೆ, ಇ.ಎಸ್.ಐ.ಸೌಲಭ್ಯ ಹೊಂದಿರುವ ಜಿಲ್ಲೆಯಲ್ಲಿ ಏಕೈಕ ಆಸ್ಪತ್ರೆಯಾಗಿದೆ, ಆಯಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಮೂಲಕ ಇದು ರೋಗಿಗಳಿಗೆ ಯಾವುದೇ ವೆಚ್ಚವಿಲ್ಲದೆ ಆರೋಗ್ಯವನ್ನು ಸಾವಿರಾರು ರೋಗಿಗಳಿಗೆ ಆರೋಗ್ಯ ಕಾಳಜಿ ಕೊಡಲು ಯತ್ನಿಸುತ್ತಿದೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಎಲ್ಲಾ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿವಿಧ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಉಚಿತವಾಗಿ ನೀಡುತ್ತಾ ಬಂದಿದೆ.

         ಎಲ್ಲಾ ರಾಷ್ಟ್ರೀಯ ಆರೋಗ್ಯ ದಿನಾಚರಣೆಯಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ವಿವಿಧ ಸಂಸ್ಥೆಗಳ ಜೊತೆ ಸಮನ್ವಯ ಮಾಡಿಕೊಂಡು ಸಕ್ರಿಯವಾಗಿ ಭಾಗವಹಿಸಲಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಎಂ.ಬಿ.ಬಿ.ಎಸ್.ವ್ಯಾಸಂಗಕ್ಕೆ ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಕಲ್ಪಿಸಲಾಗಿದೆ.

         ಇದಕ್ಕೆ ಪೂರಕವಾಗಿರುವಂತೆ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಅಡಿಯಲ್ಲಿ ಈ ಕಾಲೇಜು ಶಿಕ್ಷಣ ನೀಡಿ ಅಂತಿಮವಾಗಿ 95 ಶೇ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2013 ರಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗಕ್ಕೆ ದಾಖಲೆ ಹೊಂದಿ 2019 ರಂದು ಪರಿಪೂರ್ಣ ವೈದ್ಯ ವ್ಯಾಸಂಗವನ್ನು ಮುಗಿಸಿರುವ ಪ್ರಥಮ ಬ್ಯಾಚ್‍ನ ವೈದ್ಯ ವಿದ್ಯಾರ್ಥಿಗಳಿ ಮಾರ್ಚ್ 9 , 2019 ರ ಶನಿವಾರದಂದು ಮೊದಲ ಪದವಿ ಪ್ರದಾನ ಸಮಾರಂಭವನ್ನು ಶ್ರೀದೇವಿ ವೈದ್ಯಕೀಯ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದೆ.

          ಇದರಿಂದ ದೇಶದಲ್ಲಿ ವೈದ್ಯರ ಕೊರತೆಯನ್ನು ಪೊರೈಸಲು ಸರ್ಕಾರದ ದೃಷ್ಟಿಕೋನವನ್ನು ಅರಿತು ವೈದ್ಯಕೀಯ ಶಿಕ್ಷಣ ನೀಡಲಾಗುತ್ತಿದೆ. ಇದರಲ್ಲಿ ಆರೋಗ್ಯ ವಿಶ್ವವಿದ್ಯಾಲಯದ ವಿವಿಧ ವಿಷಯಗಳಲ್ಲಿ ಉನ್ನತ ರ್ಯಾಂಕ್ ಪಡೆದ ಪದವೀಧರ ವೈದ್ಯರಿಗೆ ಸನ್ಮಾನಿಸಲಾಗುವುದು. 

         ಈ ಸಮಾರಂಭದಲ್ಲಿ ವಿಶ್ವ ಪ್ರಸಿದ್ದ ಚೈನೈನ ಏಪೋಟೋ ಬೈಲರಿ ಶಸ್ತ್ರಚಿಕಿತ್ಸಾಕರಾದ ಡಾ. ಮಹಮ್ಮದ್ ರೀಲಾರವರು ಹಾಗೂ ರಾಜಸಭಾ ಸದಸ್ಯರಾದ ಡಾ. ವಿಕಾಸ್ ಮಹಾತ್ಮೆ ಮತ್ತು ಶ್ರೀದೇವಿ ವೈದ್ಯಕೀಯ ಡೀನ್ ಡಾ.ಸಿ.ಎನ್. ಗುರುಮೂರ್ತಿ ಶ್ರೀದೇವಿ ಆಸ್ಪತ್ರೆ ಇವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ವಹಿಸಲಿದ್ದಾರೆ. ಇದೇ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ. ಹುಲಿನಾಯ್ಕರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಕೆ. ಮಹಾಬಲರಾಜು , ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ. ಈ ಪದವಿ ಪ್ರದಾನ ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಅಡಿಯಲ್ಲಿ ಪದವಿಯನ್ನು ಪಡೆದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಹಾಗೂ ಪದವಿ ನೀಡಲಾಗುವುದು.

         ವಿವಿಧ ವಿಷಯಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಎಬಿನೇಷ ( 3ನೇ ರ್ಯಾಂಕ್ – ವೈದ್ಯಕೀಯ ವಿಭಾಗ ), ಕಾರ್ತಿಕ್ ವಿ. (7 ನೇ ರ್ಯಾಂಕ್ ಮಕ್ಕಳ ವಿಭಾಗ) ಇ.ಎನ್.ಟಿ. ವಿಭಾಗದಲ್ಲಿ ಅಪೂರ್ವ ವಿ.ಆರ್. (2ನೇ ರ್ಯಾಂಕ್) ಪೂಜ (9 ನೇ ರ್ಯಾಂಕ್) ಮೈತ್ರಿ (10 ನೇ ರ್ಯಾಂಕ್) ಫೆಥಾಲಜಿ ವಿಭಾಗದಲ್ಲಿ ಸುಶ್ಮಿತ (8 ನೇ ರ್ಯಾಂಕ್) ದರ್ಶನ (10 ನೇ ರ್ಯಾಂಕ್)ರವರಿಗೆ ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳ ಪೋಷಕರು ಸಹ ಸಕ್ರಿಯವಾಗಿ ಭಾಗವಹಿಸಲಿದ್ದಾರೆಂದು ಡಾ.ಎಂ.ಆರ್.ಹುಲಿನಾಯ್ಕರ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap