ಉಡುಪಿ:
ಸಮುದ್ರದ ಮೀನುಗಾರರಿಗೆ ರಜೆ ಇರುವ ಕಾರಣ ಮಾರುಕಟ್ಟೆಗೆ ಬರುತ್ತಿದ್ದ ಮೀನಿನ ಪ್ರಮಾಣದಲ್ಲಿ ಭಾರೀ ಕಡಿಮೆಯಾದ ಕಾರಣ,ಮೀನು ಪ್ರಿಯರು ಜಿಲ್ಲೆಯಲ್ಲಿರುವ ಹೊಳೆಗಳಿಗೆ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾರೆ.
ಜಿಲ್ಲೆಯ ಮಣಿಪುರ, ಉದ್ಯಾವರ, ಕಟಪಾಡಿ, ಕೆಮ್ತೂರು, ದುರ್ಗಾ ನಗರ ಮುಂತಾದ ಹೊಳೆಗಳಿರುವಲ್ಲಿಗೆ ಲಗ್ಗೆ ಇಟ್ಟು ಗಾಳ ಹಾಕಿ ಸಿಹಿನೀರಿನ ಮೀನಿಗಾಗಿ ಹಲವಾರು ಮಂದಿ ಜಾಲಾಡುತ್ತಿರುವುದು ಸಾಮಾನ್ಯವಾಗಿದೆ.
ನಗರದ ಮಾರುಕಟ್ಟೆಗಳಲ್ಲಿ ಸಮುದ್ರದ ಮೀನುಗಳು ದೊರಕುತ್ತಿಲ್ಲ. ತಾಜಾ ಮೀನಿಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳು ಕೆರೆ ಅಥವಾ ಹೊಳೆ ಮೀನುಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸಿಹಿನೀರಿನ ಮೀನುಗಾರಿಕೆ ಚುರುಕುಗೊಂಡಿದ್ದು. ಮಳೆ ಬರುತ್ತಿದ್ದಂತೆ ಗಾಳ ಹಾಕಿದ ಮತ್ತು ಬಲೆಬೀಸಿ ತಂದ ಹೊಳೆಯ ತಾಜಾ ಮೀನುಗಳೂ ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ