ನಗರದಲ್ಲಿ ಹೆಚ್ಚಿದ ಫ್ಲೆಕ್ಸ್‍ಗಳ ಹಾವಳಿ

ಆಯುಕ್ತರ ಆದೇಶದ ನಡುವೆಯೂ ರಾರಾಜಿಸುತ್ತಿರುವ ಫ್ಲೆಕ್ಸ್‍ಗಳು
ತುಮಕೂರು
ವಿಶೇಷ ವರದಿ:ರಾಕೇಶ್ ವಿ 
     ಡಿ.18ರಂದು ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಆಯುಕ್ತ ಟಿ.ಭೂಬಾಲನ್ ಅವರು ಪ್ಲಾಸ್ಟಿಕ್ ಹಾಗೂ ಫ್ಲೆಕ್ಸ್ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿರ್ಬಂಧಿಸಲು ಮೂರು ದಿನಗಳ ಗಡುವು ನೀಡಲಾಗಿತ್ತು. ಇದರ ನಡುವೆಯೂ ಇದೀಗ ನಗರದ ಹಲವು ಕಡೆಗಳಲ್ಲಿ ದೊಡ್ಡದೊಡ್ಡ ಫ್ಲೆಕ್ಸ್‍ಗಳು ರಾರಾಜಿಸುತ್ತಿವೆ.
    ಯಾವುದೇ ಕಾರ್ಯಕ್ರಮಕ್ಕೆ ಫ್ಲೆಕ್ಸ್ ಹಾಕಬೇಕಾದಲ್ಲಿ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಅದು ಕೂಡ ಬಟ್ಟೆಯಿಂದ ಮಾಡಿದ ಫ್ಲೆಕ್ಸ್‍ಗಳಿಗೆ ಮಾತ್ರ ಅನುಮತಿ ದೊರೆಯುತ್ತದೆ. ಪ್ಲಾಸ್ಟಿಕ್ ಫ್ಲೆಕ್ಸ್‍ಗಳಿಗೆ ಅನುಮತಿ ನೀಡಲಾಗುವುದಿಲ್ಲ. ಆದರೆ ಯಾವ ಅನುಮತಿ ಮೇರೆಗೆ ನಗರದ ಹಲವು ಭಾಗಗಳಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್‍ಗಳನ್ನು ಹಾಕಲಾಗುತ್ತಿದೆ ಎಂಬುದು ಪ್ರಶ್ನಾತೀತವಾಗಿದೆ. 
   ನಗರದ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಜೈನ ಮುನಿಗಳ ಕಾರ್ಯಕ್ರಮದ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಪಕ್ಕದ ರಸ್ತೆಯಲ್ಲಿ ಕೆಇಬಿ ಕಲ್ಯಾಣ ಮಂಟಪದ ವರೆಗೆ ಪ್ಲಾಸ್ಟಿಕ್ ಫ್ಲೆಕ್ಸ್‍ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಭದ್ರಮ್ಮ ವೃತ್ತದಲ್ಲಿ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಒಂದು ಫ್ಲೆಕ್ಸ್, ಸ್ಮಾರ್ಟ್ ಸಿಟಿ ಕಚೇರಿಯ ಬಳಿ ಒಂದು, ಶೆಟ್ಟಿಹಳ್ಳಿ ಅಂಡರ್‍ಪಾಸ್ ಬಳಿ ಒಂದು ಮುಂದೆ ವಿಶಾಲಾಕ್ಷಮ್ಮ ಸಭಾಭವನದ ಮುಂಭಾಗದಲ್ಲಿ 10ಕ್ಕೂ ಹೆಚ್ಚು ಫ್ಲೆಕ್ಸ್‍ಗಳನ್ನು ಹಾಕಲಾಗಿದೆ. 
   ಅನುಮತಿ ಪಡೆದು ಫ್ಲೆಕ್ಸ್ ಹಾಕುವುದಾದರೆ ಪ್ಲಾಸ್ಟಿಕ್ ಫ್ಲೆಕ್ಸ್‍ಗಳಿಗೆ ಅದ್ಹೇಗೆ ಅನುಮತಿ ದೊರೆಯಿತು. ಒಂದು ವಾರದ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡ ಆಯುಕ್ತರು ಪ್ಲಾಸ್ಟಿಕ್ ನಿಷೇಧ ಮಾಡುವತ್ತ ಗಮನ ಹರಿಸಿದರೆ ಇನ್ನೊಂದು ಪಾಲಿಕೆಯಿಂದಲೇ ಅನುಮತಿ ಪಡೆದು ಫ್ಲೆಕ್ಸ್‍ಗಳನ್ನು ಹಾಕಿಕೊಂಡಿದ್ದಾರೆ. ಪ್ಲಾಸ್ಟಿಕ್ ನಿಷೇಧ ಮಾಡುವತ್ತ ಗಮನ ಹರಿಸಿದ ಆಯುಕ್ತರ ನಡೆಗೆ ತದ್ವಿರುದ್ಧವಾಗಿ ಫ್ಲೆಕ್ಸ್‍ಗಳನ್ನು ಹಾಕಲು ಅನುಮತಿ ನೀಡಿದವರಾದರೂ ಯಾರು..? 
    ಪಾಲಿಕೆಯಿಂದ ಬಟ್ಟೆಯ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಪಡೆದು, ಪ್ಲಾಸ್ಟಿಕ್ ಫ್ಲೆಕ್ಸ್‍ಗಳನ್ನು ಹಾಕಿದರೂ ಕೂಡ ಪಾಲಿಕೆ ಆರೋಗ್ಯಾಧಿಕಾರಿಗಳು, ಸಂಬಂಧಿಸಿದ ಆರೋಗ್ಯ ನಿರೀಕ್ಷಕರು ಏನು ಮಾಡುತ್ತಿದ್ದಾರೆ. ಫ್ಲೆಕ್ಸ್ ಹಾಕಿದವರಿಗೆ ದಂಧ ಹಾಕಬೇಕು. ಹಾಕಿರುವ ಫ್ಲೆಕ್ಸ್‍ಗಳನ್ನು ತೆರವು ಗೊಳಿಸಬೇಕು. ಹೀಗಿದ್ದರೂ ಯಾವ ಕಾರಣಕ್ಕೆ ಫ್ಲೆಕ್ಸ್‍ಗಳನ್ನು ತೆರವು ಮಾಡಲು ಮುಂದಾಗು ತ್ತಿಲ್ಲ . ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂಬ ಮಾಹಿತಿ ಇದ್ದರೂ ಅದನ್ನು ಲೆಕ್ಕಿಸದೆ ಪ್ಲಾಸ್ಟಿಕ್ ಪ್ಲೆಕ್ಸ್‍ಗಳನ್ನು ಬಳಕೆ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. 

ಫ್ಲೆಕ್ಸ್ ಹಾಕುವ ಮುನ್ನ ಅನುಮತಿಗಾಗಿ ಬಂದಾಗ ಬಟ್ಟೆಯ ಫ್ಲೆಕ್ಸ್ ಹಾಕುವುದಾಗಿ ಹೇಳಿ ಮನವಿ ಸಲ್ಲಿಸುತ್ತಾರೆ. ಅನುಮತಿ ನೀಡಿದ ಮೇಲೆ ಪ್ಲಾಸ್ಟಿಕ್ ಫ್ಲೆಕ್ಸ್‍ಗಳನ್ನು ಹಾಕುತ್ತಿದ್ದಾರೆ. ಇದರಲ್ಲಿ ಹಾಲಿ ಮಾಜಿ ಜನಪ್ರತಿನಿಧಿಗಳ ಒತ್ತಡವೂ ನಮ್ಮ ಮೇಲೆ ಇರುವುದರಿಂದ ಏನು ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಪ್ಲಾಸ್ಟಿಕ್ ಫ್ಲೆಕ್ಸ್ ಹಾಕಿದವರಿಗೆ ದಂಡ ವಿಧಿಸಲಾಗುತ್ತಿದೆ. 

ಡಾ.ನಾಗೇಶ್‍ಕುಮಾರ್, ಆರೋಗ್ಯ ಅಧಿಕಾರಿ 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link