ತುರುವೇಕೆರೆ
ಮಹಾತ್ಮ ಗಾಂದೀಜಿಯವರ ಗ್ರಾಮರಾಜ್ಯ ಮತ್ತು ಸ್ವಚ್ಚ ಭಾರತ್ ಎಂಬ ಪರಿಕಲ್ಪನೆಗಳು ಪ್ರಪಂಚದ ಎಲ್ಲಾ ದೇಶಗಳಿಗೂ ಇಂದಿಗೂ ಮಾದರಿಯಾಗಿದೆ ಎಂದು ತುರುವೇಕೆರೆ ಸಿಪಿಐ ಮೊಹಮದ್ ಸಲೀಮ್ ಅಭಿಪ್ರಾಯಪಟ್ಟರು.
ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ಪೋಲಿಸ್ ಇಲಾಖೆ ವತಿಯಿಂದ 150 ನೇ ಮಹಾತ್ಮಗಾಂಧೀಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಮಂಗಳವಾರ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಯಾವುದೇ ಮನುಷ್ಯ ತನ್ನ ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರಯಬೇಕು, ಮಾನವೀಯ ಮೌಲ್ಯಗಳಿರುವ ಮನುಜನಲ್ಲಿಯೇ ದೇವರನ್ನು ಕಾಣಬೇಕಿದೆ.
ಆಡಂಬರದ ಜೀವನಕ್ಕಿಂತ ಸರಳ ಬದುಕಿನ ಸೂತ್ರಗಳನ್ನು ಇಡೀಜಗತ್ತಿಗೆ ಮಾದರಿ ಆಗಿ ನೀಡಿದ ಮಹಾನುಭಾವ ಅವರು. ಆದುನಿಕ ಯಂತ್ರ ಕೈಗಾರಿಕೆಗಳು ಬಂದು ಶ್ರಮ ಮತ್ತು ದೇಶಿ ಗುಡಿಕೈಗಾರಿಕೆಗಳನ್ನೇ ಮೂಲೆ ಗುಂಪಾಗಿಸಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ಹಿಂದೆ ಬೀಳುವಂತಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ತಲೆದೋರಲಿದೆ ಎಂಬುವುದು ಗಾಂಧೀಜಿಯವರ ವಿಷಾದವಾಗಿತ್ತು. ಎಂದರು.
ಪಿಎಸ್‍ಐ ಜಿ.ಪಿ.ರಾಜು ಮಾತನಾಡಿ ರಾಷ್ಟ್ರವು ಇಂದು ತನ್ನ ಇಬ್ಬರು ಶ್ರೇಷ್ಠ ಪುತ್ರರಾದ ಮಹಾತ್ಮಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ನಮನಗಳನ್ನು ಸಲ್ಲಿಸುತ್ತಿದೆ. ಗಾಂಧೀಜಿಯವರ ಸ್ವಚ್ಚ ಭಾರತ ನಿರ್ಮಾಣದ ಕನಸು ನನಸಾಗಬೇಕಿದೆ. ಆ ನಿಟ್ಟಿನಲ್ಲಿ ತುರುವೇಕೆರೆ ಪಟ್ಟಣವನ್ನು ಸ್ವಚ್ಚ ನಗರವಾಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೆತ್ತಿಕೊಳ್ಳಲಾಗುವುದು.
ಈಗಾಗಲೇ ಪಟ್ಟಣದ ಸಂಚಾರ ವ್ಯವಸ್ಥೆಯಲ್ಲಿ ವಿನೂತನ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ ಜೊತೆ ಪ್ರಾಥಮಿಕ ಚರ್ಚೆ ನಡೆದಿದೆ. ಆಟೋ, ದ್ವಿಚಕ್ರ ವಾಹನ, ಕಾರು, ನಿಲುಗಡೆಗೆ ಸೂಕ್ತ ಸ್ಥಳ ನಿಗದಿ ಮಾಡಲಾಗವುದು.
ಬೀದಿಬದಿ ವ್ಯಾಪಾರ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಮಂಜಸ ಸ್ಥಳ ನೀಡುವ ಬಗ್ಗೆ ಹಾಗೂ ಪಟ್ಟಣದಲ್ಲಿ ಹಲವು ಆಯಾಮಗಳಲ್ಲಿ ಸುಧಾರಣೆ ತರಲು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಜನಪ್ರತಿನಿಧಿಗಳು ಸಾರ್ವಜನಿಕರು ಮತ್ತು ಅಧಿಕಾರಿಗಳು ಹಾಗೂ ನಾಗರೀಕರ ಸಹಕಾರ ಅಗತ್ಯವಾಗಿದ್ದು ನಮ್ಮೊಂದಿಗೆ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಬದಲ್ಲಿ ಎಎಸ್‍ಐ ಶಿವಲಿಂಗಪ್ಪ, ಸಿಬ್ಬಂದಿಗಳಾದ ಕೆ.ಎಸ್. ಶಂಕರ್, ಕೇಶವಮೂರ್ತಿ, ಮಂಜು, ಮಧು, ಸುಪ್ರಿತ, ಸಂಜುವಾಡ, ಹನುಮಂತು. ಸೋಮ, ಜಯರಾಮ್. ರಾಜ್ ಕುಮಾರ್ ಕಮ್ಮತ್ತಾರು, ಪ್ರಮೋದ, ಜಗನ್ನಾಥ್,ನಾಗರಾಜು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ