ಗಗನ ಮುಟ್ಟಿದ ಹೂವಿನ ಬೆಲೆಗಳು..!!

ತಿಪಟೂರು
   ಶ್ರಾವಣ ಬಂತು ನಾಡಿಗೆ, ಬಂತು ಕಾಡಿಗೆ, ಬಂತು ಬೀಡಿಗೆ ಶ್ರಾವಣ ಎಂಬ ವರಕವಿ ಬೇಂದ್ರೆಯವರ ಕವಿವಾಣಿಯಂತೆ ಮತ್ತೆ ಶ್ರಾವಣಮಾಸ ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ವರಮಹಾಲಕ್ಷ್ಮಿ, ಮಂಗಳಗೌರಿ, ಸ್ವಾತಂತ್ರ್ಯದಿನ, ಯಜುರ್ ಉಪಾಕರ್ಮ ಮುಂತಾದ ಹಬ್ಬಗಳ ಸಾಲು ಈ ಬಾರಿಯು ಬರುವ ಜೊತೆಗೆ ಗ್ರಾಹಕರಿಗೆ ಹಬ್ಬದ ತಯಾರಿಗೆ ಬೇಕಾಗುವ ವಸ್ತುಗಳ ಬೆಲೆಯು ಅಂಬರವನ್ನು ನೋಡುತ್ತಿದೆ.
   ಈ ಹಬ್ಬಗಳಿಗೆ ತಾವು ಕೂಡಿಟ್ಟ ಹಣದ ಜೊತೆಗೆ ತಮಗೆ ತವರು ಮನೆಯಿಂದ ಬಂದ ಬಾಗಿನ ಮುಂತಾದವುಗಳನ್ನು ಮತ್ತು ಪ್ರತಿಷ್ಠೆಗಾಗಿ ನಾವು ಹೇಗಾದರೂ ಸರಿ ವಿಜೃಂಭಣೆಯಿಂದ ಹಬ್ಬವನ್ನು ಮಾಡಬೇಕೆನ್ನುವ ಗೃಹಿಣಿಯರಿಗೆ ಮಾರುಕಟ್ಟೆಯಲ್ಲಿ ಹೂವಿನ ದರವನ್ನು ಕೇಳಿ ಉತ್ತರ ಕರ್ನಾಟಕದಲ್ಲಿ ಸಂಭವಿಸುತ್ತಿರುವ ಪ್ರವಾಹವೇ ಬಂತೆಂದು ಹೌಹಾರುತ್ತಿದ್ದಾರೆ.
 
   ವರಮಹಾಲಕ್ಷ್ಮಿಗೆ ಪ್ರಿಯವಾದ ಕಮಲ ಹೂ 50-100 ರೂ, ಕನಕಾಂಬರ, ಸೇವಂತಿಗೆ, ಮಲ್ಲೆಹೂ, ಕಾಕಟ ಮಾರಿಗೆ 100ರೂ ದಾಟಿದೆ, ಇದರ ಜೊತೆ ಚಿಕ್ಕಗುಲಾಬಿ ಮತ್ತು ಮಾರಿಗೋಲ್ಡ್ ಸೇವಂತಿಗೆ 100 ಗ್ರಾಂಗೆ 100ರೂ, ಬಾಳೆಹಣ್ಣು 80-100, ಸೇಬು 100-200, ಹೀಗೆ ದರಗಳನ್ನು ಕೇಳಿ ಸುಸ್ತಾಗುತ್ತಿದ್ದೆ. ಆದರೂ ಸಹ ಹಬ್ಬವಲ್ಲವೇ ಎಂದು ತಮ್ಮ ಹತ್ತಿರವಿರುವ ಹಣವನ್ನು ಹೊಂದಿಸಿಕೊಂಡು ವ್ಯಾಪಾರಮಾಡುವುದು ಇಂದು ಕಂಡುಬಂತು.
   
  ಮಾರುಕಟ್ಟೆಯ ಅವ್ಯವಸ್ಥೆ : ಕೃಷಿಮಾರುಕಟ್ಟೆ, ನಗರಸಭೆ, ಪೊಲೀಸ್ ಇಲಾಖೆಗಳಿಗೆ ನಾಗರೀಕರು ಶಾಪಹಾಕುವಂತಹ ವಾತಾವರಣವೇ ಏರ್ಪಟ್ಟಿತ್ತು. ಇಂದು ಬೆಳಗ್ಗೆ ಸುರಿಯುತ್ತಿದ್ದ ಜಡಿಮಳೆಯಲ್ಲಿಯೇ ಹಬ್ಬಕ್ಕೆ ಬೇಕಾದಂತಹ ಸಾಮಗ್ರಿಗಳನ್ನು ಖರೀದಿಸಲು ಆಗಮಿಸಿದ ಸಾರ್ವಜನಿಕರಿಗೆ ತಮ್ಮ ವಾಹನಗಳನ್ನು ನಿಲ್ಲಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಮಾರುಕಟ್ಟೆಯ ಹತ್ತಿರ ಸೂಕ್ತವಾದ ವಾಹನನಿಲ್ದಾಣಗಳಿಲ್ಲದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಅರ್ಧತೊಂದರೆ ಮಾಡಿದರೆ, ಇನ್ನರ್ದಜನ ತಮ್ಮ ವಾಹನಗಳನ್ನು ಮಾರುಕಟ್ಟೆಯ ಒಳಭಾಗಕ್ಕೆ ತೆಗೆದುಕೊಂಡು ಬಂದಿದ್ದು ಎಲ್ಲರಿಗೂ ತೊಂದರೆಯಾಗುತ್ತಿತ್ತು.
ಗ್ರಾಹಕರೆ ಹುಷಾರ್ :
     ಹೆಚ್ಚಾಗಿ ಜನಜಂಗುಳಿಯಿಂದ ಕೂಡಿದ ಪ್ರದೇಶಗಳೆಂದರೆ ಕಳ್ಳಕಾಕರಿಗೆ ಅಚ್ಚುಮೆಚ್ಚು. ಇಂತಹ ಪರಿಸ್ಥಿಯಲ್ಲಿ ಮಾರುಕಟ್ಟೆಯಲ್ಲಿ ಉಂಟಾಗುವ ಜನಜಂಗುಳಿಯಲ್ಲಿಯೇ ಕಳೆದಬಾರಿ ಎಷ್ಟು ಜನರು ತಮ್ಮ ಅಮೂಲ್ಯವಾದ ಮೊಬೈಲ್‍ಗಳು, ಪರ್ಸ್‍ಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿಯು ಕಳ್ಳರು ತಮ್ಮ ಕೈಚಳಕ ತೋರಿಯೇ ತೋರುತ್ತಾರೆ.
 
      ಆದ್ದರಿಂದ ನಾವೇ ಜೋಪಾನವಾಗಿದ್ದರೆ ಮೇಲು. ಗೊತ್ತಿದ್ದರು ಪೊಲೀಸರು ಈ ಜಾಗಗಳಲ್ಲಿ ಸೂಕ್ತವಾದ ಸಿಬ್ಬಂದಿಯನ್ನು ನಿಯೋಜನೆ ಮಾಡದಿರುವುದು ಕಳ್ಳರಿಗೆ ವರದಾನವಾಗಿದೆ. ಇನ್ನೂ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಯ ಭದ್ರತಾ ಸಿಬ್ಬಂದಿಯು ಇದ್ದೂ ಇಲ್ಲದಂತಾಗಿದ್ದು ಯಾರಾದರೂ ಅಧಿಕಾರಿಗಳು ಬರುತ್ತಾರೆಂದ ದಿನ ಮಾತ್ರ ಬಂದು ನಾವು ಇದ್ದೇವೆಂದು ತೋರಿಸಿಕೊಳ್ಳುತ್ತಾರೆ.ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಗೃಹಿಣಿಯರು ಮಾತ್ರ ತಾವು ಇರುವ ಹಣದಲ್ಲೇ ಎಲ್ಲಾ ತರಹದ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ಹಬ್ಬ ಮಾಡುವತ್ತ ಗಮನ ಹರಿಸುತ್ತಿದ್ದಾರೆ. ಒಟ್ಟಿನಲ್ಲಿ ಖರೀದಿ ಮಾಡುವವರು ಸ್ವಲ್ಪ ಜಾಗರೂಕರಾಗಿದ್ದರೆ ಒಳ್ಳೆಯದು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap