ಕೋಟೆನಗರಿಯಲ್ಲಿ ಕಣ್ಮನ ಸೆಳೆದ ಪುಷ್ಪಲೋಕ….!

ಚಿತ್ರದುರ್ಗ:

   ವಿವಿಧ ಪುಷ್ಪಗಳ ಜೋಡಣೆ, ಹಲವು ಬಗೆಯ ಆಕೃತಿಗಳು, ಹೂವಿನ ಲೋಕದ ಪ್ರಪಂಚ, ಮನಸ್ಸಿಗೆ ಆಹ್ಲಾದಕರ ನೀಡುವ ವಾತಾವರಣ ಸೃಷ್ಟಿಯಾಗಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ವರ್ಣರಂಜಿತ ಪುಷ್ಪ ಲೋಕ ನಿರ್ಮಾಣವಾಗಿದೆ.

   ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಜ. 31 ರಿಂದ ಫೆ. 2 ರವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ’29 ನೇ ಫಲ-ಪುಷ್ಪ ಪ್ರದರ್ಶನದಲ್ಲಿ’ ಆರೋಗ್ಯ ಕಾಳಜಿ ಕುರಿತ ಕೆಲವು ಸಸ್ಯ ಮತ್ತು ತರಕಾರಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

    ಗುಲಾಬಿ, ಗುಲಾಬಿ (ಮೆರಬುಲಾ), ಚೆಂಡು ಹೂ (ಯಲ್ಲೋ ಡೈಮಾಂಡ್), ರುದ್ರಾಕ್ಷಿ, ಸುಗಂಧರಾಜ, ಜರ್ಬೆರಾ, ಸುನಾಮಿ (ಗುಲಾಬಿ), ಚಿಂತಾಮಣಿ ಚೆಂಡು ಹೂ, ಸೇವಂತಿಗೆ, ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್‍ಕೊಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್, ಡೇಲಿಯಾ, ಸಾಲ್ವಿಯಾ, ಚೆಂಡು ಹೂ, ಚಿಂತಾಮಣಿ, ಜಿನಿಯಾ, ಪೆಟೊನಿಯಾ, ಕಾಸ್‍ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೋಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯಾ ಮಿಲ್ಲಿ, ಫಾಯಿನ್‍ಸಿಟಿಯಾ, ಬಿಗೋನಿಯಾ, ವಿಂಕಾ, ಆಂತೋರಿಯಂ ಮುಂತಾದ 50 ಸಾವಿರಕ್ಕೂ ಹೆಚ್ಚು ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳನ್ನು ಪ್ರದರ್ಶಿಸುವುದರ ಜೊತೆಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡುತ್ತಿದೆ.

ಚಂದ್ರಯಾನ-3 ಯಶಸ್ವಿಗೆ ಸಹಿ ಸಂಗ್ರಹಣೆ

    ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ-3 ಯಶಸ್ವಿಯಾಗಲೆಂದು ಗಣ್ಯರು ಮತ್ತು ಸಾರ್ವಜನಿಕರಿಂದ ಸಹಿ ಸಂಗ್ರಹಣೆ ಅಭಿಯಾನ ನಡೆಯಿತು. ಸಹಿ ಸಂಗ್ರಹಣೆ ಮೂಲಕ ಫಲಪುಷ್ಪ ಪ್ರದರ್ಶನದಲ್ಲಿ ಚಂದ್ರಯಾನ 3ಕ್ಕೆ ಶುಭ ಹಾರೈಸಲಾಯಿತು.

ತರೆಹೆವಾರಿ ತರಕಾರಿ, ಕೃಷಿ ಉಪಕರಣ

   ಫಲ-ಪುಷ್ಪ ಪ್ರದರ್ಶನದಲ್ಲಿ ಅತ್ಯುತ್ತಮ ತಳಿಯ ತರೆಹೆವಾರಿ ತರಕಾರಿಗಳು ಅಲ್ಲದೆ ಕೃಷಿ ಯಂತ್ರೋಪಕರಣಗಳ ಮಾಹಿತಿ ಲಭ್ಯವಿದ್ದು, ರೈತರು ಇದರ ಪ್ರಯೋಜನ ಪಡೆಯಬಹುದು.ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ 29ನೇ ಫಲ-ಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯಲ್ಲಿನ ವಿವಿಧ ಮೂಲೆಗಳಿಂದ ರೈತರು ಬೆಳೆದ ವಿವಿಧ ಬಗೆಯ ಬೆಳೆಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

ತರಕಾರಿ ಹಾಗೂ ತಳಿಗಳು

    ಪಪ್ಪಾಯ-ರೆಡ್‍ಲೇಡಿ, ಸಪೋಟ-ಕಲಿಪತಿ, ಮಾವು-ಸ್ಥಳಿಯ, ಸೀಬೆ-ತೈವಾನ್ ರೇಡ್, ಕಲ್ಲಂಗಡಿ-ಕಿರಣ, ಕರ್ಬೂಜ-ನಾಮದರ್, ಸಂಬಾರ್-ಸೌತೆ, ಕುಂಬಳಕಾಯಿ-ಎಲ್44, ಏಲಕ್ಕಿ ಬಾಳೆ-ಜಿ9, ಎಳೆನೀರು ತೆಂಗು-ಸಿಂಗಪುರ್, ಬದನೆಕಾಯಿ-ರಾಂಪುರ ತಳಿ, ಅಡಿಕೆ, ವಿಳ್ಳೇದೆಲೆÉ, ಹಲಸು, ನೆಲ್ಲಿಕಾಯಿ, ಸುವರ್ಣಗಡ್ಡೆ, ಬೆಟ್ಟದ ನೆಲ್ಲಿಕಾಯಿ, ಬೀಟ್ರೂಟ್, ತೆಂಗಿನಕಾಯಿ, ಹಾಗಲಕಾಯಿ, ಕ್ಯಾರೇಟ್, ಮೂಲಂಗಿ, ಬೆಂಡೆ, ಅವರೆಕಾಯಿ, ಸೋರೆಕಾಯಿ, ನುಗ್ಗೆಕಾಯಿ, ಈರುಳ್ಳಿ, ಎಲೆಕೋಸು, ಟೊಮಾಟೋ ಹಾಗೂ ಮೆಣಸಿನಕಾಯಿ ಇನ್ನು ಹಲವಾರು ಬಗೆಯ ತರಕಾರಿಗಳ ಉತ್ತಮ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಬೋನ್ಸಾಯ್ ಮರಗಳು :

   ಫಲ ಪುಷ್ಪ ಪ್ರದರ್ಶನ ನಗರದ ತೋಟಗಾರಿಕೆ ಆವರಣದಲ್ಲಿ ನೆಡೆಯುತ್ತಿರುವ ಫಲ ಪುಷ್ಪ ಪ್ರದರ್ಶನದಲ್ಲಿ ಮಣ್ಣಿನ ಕುಂಡಗಳಲ್ಲಿ ದೊಡ್ಡ ದೊಡ್ಡ ಮರಗಳನ್ನು ಕುಬ್ಜ ರೂಪ ದಲ್ಲಿ ಬೆಳೆಸಿರುವುದು ನೋಡುಗರಲ್ಲಿ ಕುತೂಹಲ ಮೂಡಿಸುತ್ತವೆ. 12 ವರ್ಷಗಳ ಆಲದ ಮರವನ್ನು ಸಣ್ಣ ಕುಂಡದಲ್ಲಿ ಬೊನ್ಸಾಯ್ ಮಾದರಿಯಲ್ಲಿ ಇರಿಸಲಾಗಿದೆ, ಅದೇ ರೀತಿ ಹತ್ತಾರು ವರ್ಷಗಳ ಮರಗಳನ್ನು ಕುಬ್ಜಗೊಳಿಸಿ ಕುಂಡಗಳಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

   ನಿಂಬೆ ಗಿಡ, ಜಡೆಜಂಗಲ್, ಪಿಕಾಸ್ ಮರ, ಪಿಕಾಸ್ ಮೈಕ್ರೊಕಾರ್ರೋ, ಸಪೋ ಟ, ಫಿಕಸ್ ಬೆಂಜಾಯಿನಾ, ಅಂಜೂರ, ಫಿಕಸ್, ಪಾಂಟಾ, ಮುಂತಾದ ಮರಗಳನ್ನು ಪ್ರದರ್ಶನದಲ್ಲಿ ಇರಿಸಿದ್ದು, ಜನರನ್ನು ಆಕರ್ಷಿಸುತ್ತಿವೆ.

ಆರೋಗ್ಯ ಬಗ್ಗೆಯೂ ಕಾಳಜಿ

   ಸುತ್ತಮುತ್ತ ಬೆಳೆಯಲಾಗುವ ತೋಟಗಾರಿಕೆ ಬೆಳೆಗಳಲ್ಲಿಯೇ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಿತ್ತಲ ಗಿಡ ಮೂಲಿಕೆಗಳ ಕಷಾಯದ ಮೂಲಕ ರೋಗಗಳ ನಿವಾರಣೆ. ಪ್ರತಿಯೊಂದು ಸಸ್ಯದ ಪ್ರಾಮುಖ್ಯತೆ. ಆರೋಗ್ಯ ಕಾಪಾಡುವಲ್ಲಿ ತೋಟಗಾರಿಕೆ ಬೆಳೆಗಳ ಪಾತ್ರ ಕುರಿತು ಫಲ-ಪುಷ್ಪ ಪ್ರದರ್ಶನದಲ್ಲಿ ಸವಿವರವಾಗಿ ಭಿತ್ತರಿಸಲಾಗಿದೆ.

   ಪೌಷ್ಠಿಕ ಆಹಾರದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಒಂದು ಪ್ರತ್ಯೇಕ ಪೋಷಣೆ ವಿಭಾಗವನ್ನು ವ್ಯವಸ್ಥಿತವಾಗಿ ಜೋಡಿಸಲಾಗಿತ್ತು. ಕೇವಲ ಪುಷ್ಪ, ಪೋಷಣೆ ನೀಡುವ ಆಹಾರ ಪದಾರ್ಥಗಳು ಅಷ್ಟೇ ಅಲ್ಲದೇ ಹಿತ್ತಲ ಗಿಡದ ಕೆಲವು ಔಷಧಿ ಸಸಿಗಳ ಔಷಧೀಯ ಗುಣಗಳನ್ನು ಸಹ ಭಿತ್ತರಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap