ಸಂವಿಧಾನ ಪರಿಪಾಲನೆ ಅತ್ಯವಶ್ಯ: ಶಶಿ

ಚನ್ನಗಿರಿ:

    ದೇಶದಲ್ಲಿ ಶೋಷಿತವರ್ಗದ ಧ್ವನಿಯಾಗಿ ಅಂಬೇಡ್ಕರ್ ನಡೆಸಿದ ಹೋರಾಟದ ಪ್ರತಿಫಲವಾಗಿ, ಇಡೀ ವಿಶ್ವವೇ ಮನಮುಟ್ಟುವಂತ ಸಂವಿಧಾನವನ್ನು ದೇಶಕ್ಕೆ ನೀಡಿದ್ದು, ಸಂವಿಧಾನ ಪರಿಪಾಲನೆ ಅಗತ್ಯವಿದೆ ಎಂದು ಪತ್ರಕರ್ತ ಸಿ.ಎಸ್.ಶಶೀಂದ್ರ ಅಭಿಪ್ರಾಯಪಟ್ಟರು.

    ತಾಲೂಕಿನ ವಿ.ಬನ್ನಿಹಟ್ಟಿ ಗ್ರಾಮದಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಗ್ರಾಮ ಶಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತವಾದ ಅಂಶಗಳನ್ನೊಳಗೊಂಡ ಸಂವಿಧಾನದ ತಿರುಚಿವಿಕ್ಕೆಗೆ ದೊಡ್ಡಮಟ್ಟದಲ್ಲಿ ಹುನ್ನಾರ ನಡೆಯುತ್ತಿದೆ, ಇಂತಹ ವಿಷಯಗಳ ಬಗ್ಗೆ ಜಾಗೃತಿ ಅವಶ್ಯವಿದೆ, ಕೆಲ ಮನುವಾದಿಗಳು ಅಂಬೇಡ್ಕರ್ ಸಿದ್ದಾಂತಗಳನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ,

      ಎಡಪಂಥಿಯ ವಾದಗಳನ್ನು ಇಟ್ಟುಕೊಂಡ ಪ್ರಗತಿಪರ ಚಿಂತಕರುಗಳ ಹತ್ಯೆ ಆಗುತ್ತಿದೆ, ಗೌರಿಲಂಕೇಶ್, ಸೇರಿದಂತೆ ಹಲವಾರು ಸಾಹಿತಿಗಳ ಕಗ್ಗೊಲೆಯನ್ನು ಮಾಡಲಾಗಿದೆ, ಇಲ್ಲಿಯವರೆಗೆ ಹಂತಕರನ್ನು ಸೆರೆಹಿಡಿಯುವ ಗೋಜಿಗೆ ಸರ್ಕಾರಗಳು ಹೋಗಿಲ್ಲ, ಇಲ್ಲಿ ಅಸ್ಪರುಷರು, ಅಸ್ಪರುಷರಾಗಿಯೇ ಉಳಿಯಬೇಕು, ದಲಿತರು, ಶೋಷಿತ ವರ್ಗಗಳು ಶೋಷಣೆಯಲ್ಲಿಯೇ ಜೀವನ ಸಾಗಿಸಬೇಕು ಎಂಬ ಮನುವಾದಿಗಳ ಹುನ್ನಾರಕ್ಕೆ ನಾವುಗಳು ಬಲಿಯಾಗುತ್ತಿರುವುದು ದುರಂತದ ವಿಷಯ, ಅದ್ದರಿಂದ ಹಲವಾರು ಚಿಂತನೆಗಳನ್ನು, ಸರ್ಕಾರಗಳ ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸುವ ನಿಟ್ಟಿನಲ್ಲಿ ಸಮಾಜದ ಯುವಕರು ಅಲೋಚನೆ ಮಾಡಬೇಕಿದೆ ಎಂದರು.

       ಆಧುನಿಕ ಕಾಲಘಟದಲ್ಲಿದ್ದರು, ನಿರಂತರವಾಗಿ ದಲಿತರ ಶೋಷಣೆಗಳಾಗುತ್ತಿವೇ, ಹಾಗೂ ಮೂಡನಂಬಿಕೆ, ಕಂದಚಾರಗಳಿಗೆ ಬಲಿಯಾಗುತ್ತಿದ್ದು, ಸರ್ಕಾರದ ಸೌಲಭ್ಯಗಳಿಂದ ಸಂಪೂರ್ಣ ವಂಚಿತರಾಗುತ್ತಿದ್ದಾರೆ, ದಲಿತರು ಮೊದಲು ಶಿಕ್ಷಣಕ್ಕೆ ಅಧ್ಯತೆಯನ್ನು ನೀಡಿದರೆ, ಅಂಬೇಡ್ಕರ್ ಕನಸ್ಸು ನೆನಸುಮಾಡಿದಂತೆ ಆಗುತ್ತದೆ, ಹಾಗೂ ಯಾವುದೇ ಮನುವಾದಿಗಳ ಶಕ್ತಿ ನಿಮ್ಮನ್ನು ಏನು ಮಾಡಲು ಆಗುವುದಿಲ್ಲ, ಮೊದಲು ಸಂಘಟನೆಗೆ ಹೆಚ್ಚಿನ ಒತ್ತುನೀಡಬೇಕು, ನಿಮ್ಮ ಸಮುದಾಯದ ಶಕ್ತಿಯನ್ನು ರಾಜಕೀಯವಾಗಿ ತೋರಿಸಬೇಕು ಆಗ ಮಾತ್ರ ನಿಮ್ಮಗಳ ಅಭಿವೃದ್ಧಿ ಸಾಧ್ಯ ಎಂದರು.

         ತಾಲೂಕು ಡಿಎಸ್‍ಎಸ್ ಸಂಚಾಲಕ ಗಾಂಧಿನಗರ ಚಿತ್ರಲಿಂಗಪ್ಪ ಮಾತನಾಡಿ. ಗ್ರಾಮೀಣ ಪ್ರದೇಶಗಳಲ್ಲಿ ದಲಿತರು ಇನ್ನೂಕೂಡ ಅಸ್ಪರುಷರಂತೆ ಜೀವನ ನಡೆಸುತ್ತಿರುವುದು ದುರಂತದ ವಿಷಯ, ದಲಿತರು ಶೋಷಿತರನ್ನು ದುರ್ಬಳಿಕೆ ಮಾಡಿಕೊಳ್ಳುವ ಮೂಲಕ, ಅವರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ, ಶಿಕ್ಷಣದಿಂದ ಶೋಷಿತರು ಪರಿಪೂರ್ಣರಾಗುವವರೆಗೂ ದಲಿತ ದೌರ್ಜನ್ಯಗಳು ನಿರಂತವಾಗಿ ನಡೆಯುತ್ತದೆ, ಅದ್ದರಿಂದ, ಶಿಕ್ಷಣ ಸಂಘಟನೆಗೆ ಪ್ರಾಮುಖ್ಯತೆಯನ್ನು ಯುವಕರು ನೀಡಬೇಕು ಎಂದು ಕರೆನೀಡಿದರು.ವಿ.ಬನ್ನಿಹಟ್ಟಿ ಗ್ರಾಪಂ ಸದಸ್ಯ ಅಂಜಿನಪ್ಪ, ಗುರುರಾಜಪುರ ಹರೀಶ್, ಹೊನ್ನನಾಯಕನಹಳ್ಳಿ ಪ್ರದೀಪ್, ರಾಜು, ಪ್ರಕಾಶ್, ಬಸವರಾಜಪ್ಪ, ನಾಗರಾಜ್, ಯೋಗರಾಜ್, ನವೀನ್, ಕುಮಾರ್.ಕೆ, ಮತ್ತಿತರರು ಪಾಲ್ಗೂಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap