ಆಹಾರ ಆಯೋಗದ ಸದಸ್ಯರ ದಿಢೀರ್ ಭೇಟಿ

ಚಳ್ಳಕೆರೆ

         ರಾಜ್ಯದೆಲ್ಲೆಡೆ ನ್ಯಾಯಬೆಲೆ ಅಂಗಡಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸುವುದಲ್ಲದೆ, ಕಳಪೆ ಆಹಾರ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಹಿಂದು ಮುಂದೆ ನೋಡುವುದಿಲ್ಲವೆಂಬ ಖಡಕ್ ಎಚ್ಚರಿಕೆಯನ್ನು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು. 

       ಅವರು, ಶುಕ್ರವಾರ ನಗರದ ಎ.ಜಿ.ರಸ್ತೆಯಲ್ಲಿರುವ ಆಹಾರ ಇಲಾಖೆ ದಾಸ್ತಾನು ಕೇಂದ್ರಕ್ಕೆ ಅಧಿಕಾರಿಗಳು ಮತ್ತು ತಮ್ಮ ತಂಡದ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ದಾಸ್ತಾನಿದ್ದ ಅಕ್ಕಿ, ರಾಗಿ, ಗೋಧಿ, ಬೇಳೆ ಮುಂತಾದ ಆಹಾರ ಪದಾರ್ಥಗಳ ಗುಣಮಟ್ಟವನ್ನು ಮತ್ತು ಅವುಗಳನ್ನಿಟ್ಟ ಕ್ರಮವನ್ನು ಸಹ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.

       ಸುಮಾರು ಅರ್ಥಗಂಟೆಗಳ ಕಾಲ ಗೋಡನ್‍ನ ವಿವಿಧ ಭಾಗಗಳಿಗೆ ಭೇಟಿ ನೀಡಿದ ಅವರು, ಅಲ್ಲಿ ದಾಸ್ತಾನಿರುವ ಪ್ರತಿಯೊಂದು ವಸ್ತುವಿನ ಮೇಲೆ ದಾಖಲಾಗಿದ್ದ ಅಳತೆ, ದಿನಾಂಕ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ, ಉಗ್ರಾಣದ ವ್ಯವಸ್ಥಾಪಕ ರಾಮಯ್ಯನವರಿಂದ ಕೆಲವೊಂದು ಮಾಹಿತಿಯನ್ನು ಪಡೆದರಲ್ಲದೆ ಸರಬರಾeದ ಆಹಾರ ಪದಾರ್ಥಗಳ ದಾಖಲೆ ಮಾಡಿದ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಗ್ರಾಣದ ಎಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಣೆಯ, ವಿತರಣೆಯ ಬಗ್ಗೆ ಲಿಖಿತ ದಾಖಲೆಗಳನ್ನು ನೋಡಿ ಸಂತಸವನ್ನು ವ್ಯಕ್ತಪಡಿಸಿದರು.

         ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳೊಂದಿಗೆ ಅಧಿಕಾರಿಗಳ ತಂಡದ ಕುಶಲೋಪರಿ :- ನಗರದ ಅಂಬೇಡ್ಕರ್ ನಗರ, ತ್ಯಾಗರಾಜನಗರ, ಗಾಂಧಿನಗರ ಮುಂತಾದ ಪ್ರದೇಶಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಆಹಾರ ಆಯೋಗದ ತಂಡದ ಸದಸ್ಯರು ಅಂಗನವಾಡಿ ಕೇಂದ್ರಗಳಲ್ಲಿ ಪುಟ್ಟ ಮಕ್ಕಳೊಂದಿಗೆ ತಾವು ಸಹ ಕುಳಿತು ಪ್ರತಿನಿತ್ಯ ನೀವು ಸೇವಿಸುವ ಆಹಾರ ಯಾವುದು, ಅದರ ಬಣ್ಣ ಹೇಗಿದೆ, ರುಚಿ ಹೇಗಿರುತ್ತೇ, ಸಮಯಕ್ಕೆ ಸರಿಯಾಗಿ ಕೊಡುತ್ತಾರೆಯೇ, ಹೊಟ್ಟೆ ತುಂಬಾ ಕೊಡುತ್ತಾರೆಯೇ ಚನ್ನಾಗಿ ಆಹಾರ ಸೇವಿಸುತ್ತೀರ ಎಂಬ ಹಲವಾರು ಪ್ರಶ್ನಿಗಳನ್ನು ಪುಟಾಣಿ ಮಕ್ಕಳ ಮುಂದೆ ಮಂಡಿಸಿದರು.

       ಆದರೆ, ಆಹಾರ ಆಯೋಗದ ಸದಸ್ಯರು ಎಂಬ ಬಗ್ಗೆ ಮಾಹಿತಿ ಇಲ್ಲದ ಮಕ್ಕಳು ಮುಕ್ತವಾಗಿ ಅಂಗನವಾಡಿ ಕೇಂದ್ರದಲ್ಲಿ ನೀಡುವ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಿಮಗೆ ಸರಿಯಾದ ಹಾರ ಸಿಗದೇ ಇದ್ದಲ್ಲಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಅಂಗವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ಹಾಗೂ ಸಹಾಯಕಿಯರಿಗೆ ಆಹಾರ ಪದಾರ್ಥಗಳ ಬಳಕೆಗೂ ಮುನ್ನ ಪರೀಕ್ಷಿಸುವಂತೆ ಸೂಚನೆ ನೀಡಿದರು. ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತನ್ನಿ. ದೋಷಪೂರಿತ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಮಕ್ಕಳಿಗೆ ನೀಡಲೇ ಬೇಡಿ.

         ಅಂಗನವಾಡಿಗೆ ಭೇಟಿ ನೀಡಿದ್ದ ಬಾಂಣತಿ, ಗರ್ಭಿಣಿ ಹೆಣ್ಣುಗಳಿಗೆ ಆಹಾರ ನೀಡುವ ಬಗ್ಗೆ ಮಾಹಿತಿ ಪಡೆದರು. ಅಂತಹ ಸಂದರ್ಭದಲ್ಲಿ ಮಾಹಿತಿ ನೀಡಿದರೆ ಸರಬರಾಜುದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

         ರಾಜ್ಯ ಆಹಾರ ಆಯೋಗದ ಮೂಲ ಉದ್ದೇಶ ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕವಾಗಿ ಬಂದ ಆರೋಪಗಳ ಹಿನ್ನೆಲೆಯಲ್ಲಿ ಲೋಪದೋಷಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಈ ಪ್ರವಾಸ ಕೈಗೊಂಡಿದೆ. ಆಯೋಗದ ಮೂಲ ಉದ್ದೇಶ ರಾಜ್ಯದ ಸಾರ್ವಜನಿಕೆ ಹಾಗೂ ಅಂಗನವಾಡಿ ಮಕ್ಕಳಿಗೆ ಸರಬರಾಜಾಗುವ ಆಹಾರ ಎಲ್ಲಾ ರೀತಿಯಿಂದ ಉತ್ತಮ, ಪೌಷ್ಠೀಕತೆಯಿಂದ ಕೂಡಿರಬೇಕು. ಯಾವುದೇ ಕಾರಣಕ್ಕೂ ದೋಷಪೂರಿತ ಪದಾರ್ಥಗಳು ಸರಬರಾಜು ಆಗಕೂಡದು. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಪಾರದರ್ಶಕ ಸೇವೆ ನೀಡಬೇಕೆಂದು ಆಯೋಗ ಬಯಸುತ್ತದೆ ಎಂದರು.

        ಈ ಸಂದರ್ಭದಲ್ಲಿ ಆಹಾರ ಆಯೋಗದ ಸದಸ್ಯರಾದ ಪಾಟೀಲ್, ಮಹಮ್ಮದ್ ಆಲಿ, ಮಂಜುಳಾ, ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಮಧುಸೂಧನ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಶಿಶು ಅಭಿವೃದ್ಧಿ ಕಲ್ಯಾಣಾಧಿಕಾರಿ ಸಿ.ಕೆ.ಗಿರಿಜಾಂಬ, ಸಮಾಜ ಕಲ್ಯಾಣಾಧಿಕಾರಿ ಜೆ.ಆರ್.ಮಂಜಪ್ಪ, ಆಹಾರ ನಿರೀಕ್ಷಕ ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap