ಗಮನ ಸೆಳೆದ ಬಿಎಸ್‍ಸಿ ಫುಡ್ ಫೆಸ್ಟ್

ದಾವಣಗೆರೆ:

       ನಗರದ ಬಿ.ಎಸ್.ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬಿಎಸ್‍ಸಿ ಫುಡ್‍ಫೆಸ್ಟ್-2018 ಆಹಾರ ಮೇಳ ಕಾರ್ಯಕ್ರಮ ನಡೆಯಿತು.

      ಫೆಸ್ಟ್‍ನಲ್ಲಿ ಒಟ್ಟು 12 ಮಳಿಗೆಗಳನ್ನು ಹಾಕಲಾಗಿತ್ತು. ಇಲ್ಲಿ ವಿದ್ಯಾರ್ಥಿಗಳೇ 150ರಿಂದ 500 ರೂ,ಗಳ ವರೆಗೆ ದೇಣಿಗೆ ಹಾಕಿಕೊಂಡು ವಿವಿಧ ಬಗೆಯ ತಿಂಡಿ, ತಿನಿಸು ತಯಾರಿಸಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.

      ಆಹಾರ ಮೇಳದಲ್ಲಿ ಉತ್ತರ ಭಾರತ, ಉತ್ತರ ಕರ್ನಾಟಕ, ಕರಾವಳಿ, ದಕ್ಷಿಣ ಭಾರತ ಶೈಲಿಯ ತಿನಿಸುಗಳು, ಪಾಸ್ಟ್ ಫುಡ್ ಸೇರಿದಂತೆ ವಿವಿಧ ತಿನಿಸುಗಳು ಲಭ್ಯ ಇದ್ದವು.

      ಫೆಸ್ಟ್ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಬಿ.ಸಿ.ಶಿವಕುಮಾರ್, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಅಡುಗೆ ಮನೆಯನ್ನು ಪ್ರವೇಶಿಸುವುದೇ ಇಲ್ಲ. ಇಂಥಹ ಸಂದರ್ಭದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಸ್ವತಃ ಅವರೇ ಹಣ ಹಾಕಿಕೊಂಡು, ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ಮೂಲಕ ಮಾರಾಟಕ್ಕೆ ಇಟ್ಟಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಇಂಥಹ ಆಹಾರ ಮೇಳ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಯಲಿದೆ ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ಕಾಲೇಜಿನ ಎಂ.ಎಸ್.ನಿಜಾನಂದ, ಸುಗಂಧರಾಜ್‍ಶೆಟ್ಟಿ, ಅಥಣಿ ಪ್ರಶಾಂತ್, ದೀಪಾ ಶಿವಕುಮಾರ್, ಎಂ.ಸಿ.ಗುರು, ಡಾ.ಷಣ್ಮುಖ, ರಾಜಶೇಖರ್, ಈಶ್ವರ್, ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link