ಹುಳಿಯಾರು:
ಹುಳಿಯಾರು ಹೋಬಳಿ ಕೋರಗೆರೆ ಪಂಚಾಯಿತಿಯ ಡಿಂಕನಳ್ಳಿ ಗ್ರಾಮದಲ್ಲಿ ನೆಲೆಸಿರುವ ಸಿಳ್ಳೆಕ್ಯಾತರು ಮತ್ತು ಅಲೆಮಾರಿ ಸಮುದಾಯದವರಿಗೆ ತಹಸೀಲ್ದಾರ್ ತೇಜಸ್ವಿನಿ ಅವರು ಆಹಾರದ ಕಿಟ್‍ಗಳನ್ನು ವಿತರಿಸಿದರು.ಮಹಾಮಾರಿ ಕೊರೊನಾ ವೈರಸ್ ಹತೋಟಿಗಾಗಿ ದೇಶಾಧ್ಯಂತ ಲಾಕ್‍ಡೌನ್ ಘೋಷಿಸಿರುವುದರಿಂದ ವ್ಯಾಪರ ಮಾಡಲಾಗದೆ ದಿನ ನಿತ್ಯದ ಜೀವನಕ್ಕೂ ತತ್ವಾರವಾಗಿದ್ದು ಊಟಕ್ಕೂ ಹಾಗೂ ನೀರಿಗೂ ತೀರಾ ತೊಂದರೆಯಾಗಿದೆ ಎಂದು ಇಲ್ಲಿನ ಅಲೆಮಾರಿಗಳು ಪತ್ರಿಕೆ ಮತ್ತು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದಕ್ಕೆ ಸ್ಪಂಧಿಸಿದ ತಹಶೀಲ್ದಾರ್ ತೇಜಸ್ವಿನಿ ಅವರು ಕಾಂಗ್ರೆಸ್ ಮುಖಂಡ ಡಾ.ಸಾಸಲು ಸತೀಶ್ ಅವರ ಅಭಿಮಾನಿಗಳು, ಹುಳಿಯಾರಿನ ಧಾನ್ಯ ವರ್ತಕರ ಸಂಘದವರು ಹಾಗೂ ಇತರೆ ದಾನಿಗಳು ನೀಡಿದ ದವಸಧಾನ್ಯಗಳಲ್ಲಿ ಇಲ್ಲಿನ ಅಲೆಮಾರಿಗಳಿಗೆ ಅಕ್ಕಿ, ಬೇಳೆ, ಎಣ್ಣೆ ಇರುವ ಆಹಾರ ಕಿಟ್ ಅನ್ನು ವಿತರಿಸಿದರು.
ಕೊರೊನಾ ಭಯಾನಕ ಕಾಯಿಲೆಯಾಗಿದೆ. ಇದರಿಂದ ಸ್ವಯಂ ರಕ್ಷಿಸಿಕೊಳ್ಳಲು ನಾವೆಲ್ಲರೂ ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸಬೇಕಿದೆ. ಶೀತ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದಲ್ಲಿ ನಿರ್ಲಕ್ಷ್ಯೆ ಮಾಡದೇ ಸಮೀಪದ ಅಸ್ಪತ್ರೆಗೆ ಭೇಟಿ ನೀಡಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅಲೆಮಾರಿಗಳಿಗೆ ತಹಸೀಲ್ದಾರ್ ಸಲಹೆ ನೀಡಿದರು.ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಸೋಮೇಶ್, ಕಂದಾಯ ತನಿಖಾಧಿಕಾರಿ ಮಂಜುನಾಥ್, ಎಎಸ್‍ಐ ಶಿವಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ