ಆಹಾರ ಸುರಕ್ಷತಾ ಮತ್ತು ಸಾಂಕ್ರಮಿಕ ರೋಗ ತಡೆಗೆ ಸೈಕಲ್ ಜಾಥ ಚಾಲನೆ

ಹರಿಹರ;

          ಮಹಾತ್ಮಗಾಂಧೀಜಿಯವರ 150 ನೇ ಜನ್ಮದಿನಾಚರಣೆಯ ಜ್ಞಾಪಕಾರ್ಥವಾಗಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನವದೆಹಲಿ ಈಟ್ ರೈಟ್ ಇಂಡಿಯಾ ಇವರ ಸಹಯೋಗದಲ್ಲಿ ಆಹಾರ ಸುರಕ್ಷತಾ ಮತ್ತು ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಸೈಕಲ್ ಜಾಥ ಚಾಲನೆಗೊಂಡಿದೆ ಎಂದು ರಾಜ್ಯ ಆಹಾರ ಸುರಕ್ಷತಾ ಅಧಿಕಾರಿ ಕೆವಿ.ಶ್ರೀನಿಧಿ ಹೇಳಿದರು.

          ತ್ರಿವೆಂಡ್ರಂಪುರದಿಂದ ಜಾಥವು ಪ್ರಾರಂಭಗೊಂಡು ತಮಿಳುನಾಡು ರಾಜ್ಯದಲ್ಲಿ ಸಂಚರಿಸಿ ಬೆಂಗಳೂರಿನಿಂದ ಆಹಾರ ಸಚಿವ ಮತ್ತು ಕಾರ್ಯದರ್ಶಿಗಳಿಂದ ಉದ್ಘಾಟನೆಗೊಂಡು ತುಮಕೂರು ಶಿರಾ ಚಿತ್ರದುರ್ಗ, ದಾವಣಗೆರೆ ಮಾರ್ಗವಾಗಿ ಹರಿಹರಕ್ಕೆ ಬಂದು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗಿದೆ.

           ಸಾರ್ವಜನಿಕರು ಊಟಕ್ಕೆ ಉಪ್ಪು, ಸಕ್ಕರೆ ಅಡುಗೆಗೆ ಬಳಸುವ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆಯಲ್ಲಿಟ್ಟುಕೊಳ್ಳಬೇಕು ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವುದಕ್ಕೆ ಉತ್ತಮ ಪರಿಸರ ನಿರ್ಮಾಣ ಮಾಡೋಣ ಎಂದು ಹೇಳಿದರು.

          ಸೈಕಲ್ ಜಾಥದಲ್ಲಿ ಎನ್ಸಿಸಿಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತ, ಸದಸ್ಯರಾದ ರತ್ನಮ್ಮ, ಪ್ರತಿಭಾಕುಲಕರ್ಣಿ, ಪಿಎಲ್ಡಿ ಬ್ಯಾಂಕ್ ನ ಮಾಜಿ ಸದಸ್ಯ ಡಿ.ರೇವಣಸಿದ್ದಪ್ಪ, ಹಾಗೂ ಈಟ್ ರೈಟ್ ಇಂಡಿಯಾದ ಕೇಂದ್ರದ ಜಾಥ ಸಂಯೋಜಕ ಅಶೋಕ ಕುಮಾರ್ ಮಿಶ್ರಾ,, ಜಿಲ್ಲಾ ಡಾ.ಗಂಗಾಧರ, ಕೊಟ್ರೇಶ್, ಮಂಜುನಾಥ ಕುಸುಮ, ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap