ರೈತರ ಕಷ್ಟ ನಿವಾರಣೆಯಾಗಬೇಕಾದರೆ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು : ಕೆ ಎನ್ ರಾಜಣ್ಣ

ಮಧುಗಿರಿ

    ಮುಂದಿನ ದಿನಗಳಲ್ಲಿ ನಾನು ಯಾವ ಪಾರ್ಟಿಯಿಂದ ಸ್ಪರ್ಧಿಸುತ್ತೆನೆ ಎಂಬುದು ಗೊತ್ತಿಲ್ಲ ಗೆದ್ದರೆ ನಿಮ್ಮ ಕೆಲಸ ಸೋತರೆ ನನ್ನ ಕೆಲಸ ಇದ್ದೇ ಇರುತ್ತದೆ. ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.

     ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಟಿಡಿಸಿಸಿ ಬ್ಯಾಂಕ್‍ನ 31ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ನನ್ನದು ಸಹಕಾರಿ ಕ್ಷೇತ್ರ ನಮ್ಮ ಬಾವುಟದಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ಏಳು ಬಣ್ಣಗಳಿವೆ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಬಸ್‍ನಲ್ಲಿ ಸೀಟಿಗಾಗಿ ಟವಲ್ ಹಾಕುವ ರೀತಿಯಲ್ಲಿ ಬಹಳ ಜನ ಸೀಟಿಗಾಗಿ ಕಾಯುತ್ತಿದ್ದಾರೆ.

     ನನಗೆ ಸುಳ್ಳು ಹೇಳುವ ಅಭ್ಯಾಸವಿಲ್ಲ ಕಾಂಗ್ರೆಸ್ ಆಗಲಿ, ಬಿಜೆಪಿ, ಜನತಾದಳ ಬಿ.ಎಸ್.ಪಿ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುತ್ತೇನೆ ಆ ಬಗ್ಗೆ ತೀರ್ಮಾನ ಮಾಡುತ್ತೇನೆ ನೀವು ಸಹಾಯ ಮಾಡಿ. ಎಲ್ಲಾ ಮುಖಂಡರ ಬೆಂಬಲ ಹಾಗೂ ಸಹಾಯ ಪಡೆದು ಮಧುಗಿರಿಯನ್ನು ಜಿಲ್ಲಾ ಕೇಂದ್ರವಾಗಿಸುವ ಆಸೆಯಿದೆ ನನಗೆ ಮಂತ್ರಿಯಾಗುವ ಆಸೆಯಿಲ್ಲಾ ಆದರೆ ಮಂತ್ರಿ ಮಾಡುವಂತಹ ಕೆಲಸಕ್ಕೆ ಇನ್ನೂ ಹೆಚ್ಚಿನ ಕೆಲಸವನ್ನು ನೀವೆಲ್ಲಾ ಕೊಡುತ್ತೀರಾ. ರೈತರ ಕಷ್ಟ ನಿವಾರಣೆ ಯಾಗಬೇಕಾದರೆ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು ಹಾಗೂ ತಾಲ್ಲೂಕಿನ ಬರಗಾಲಕ್ಕೆ ಅಂತ್ಯ ಕಾಣಬೇಕು.

    ರಾಜಕೀಯ ಪಕ್ಷಗಳು ತಮ್ಮ ಸಿದ್ದಾಂತವನ್ನು ಕಳೆದುಕೊಳ್ಳುತ್ತೀವೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಆಯೋಗ್ಯರು, ಮತದಾರರು ಭ್ರಷ್ಟರಾಗಿದ್ದಾರೆ ಬೇರೆಯವರ ಬಗ್ಗೆ ಪ್ರಶ್ನಿಸುವ ಅಧಿಕಾರವೇನಿದೆ ಚುನಾವಣಾ ವೇಳೆಯಲ್ಲಿ ಹಣ ಹಂಚಿಕೆ ಮಾಡುವಾಗ ಯಾವುದಾದರೊಂದು ಮನೆಯನ್ನು ಬಿಟ್ಟು ಹೋದರೆ ನಮ್ಮ ಮನೆಗೆ ಹಣ ಕೊಟ್ಟಿಲ್ಲಾ ಎಂದು ಪ್ರಶ್ನಿಸುವವಂತಹವರು ಇದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾರೂ ಪ್ರೀತಿ ವಿಶ್ವಾಸ ದಿಂದ ನೀಡಿದ ತೀರ್ಪು ನಾನು ಮತ್ತೆ ಈ ಕ್ಷೇತ್ರದಿಂದಲೇ ಚುನಾವಣೆ ಎದುರಿಸುವ ಮನಸ್ಸು ಮಾಡಿದ್ದೇನೆಂದು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿನ ಪ್ರತಿಯೊಂದು ಮನೆಗೂ ಪಕ್ಷತೀತಾವಾಗಿ ಜಾತ್ಯಾತೀತವಾಗಿ ಸರಕಾರದ ಒಂದಲ್ಲಾ ಒಂದು ಸೌಲಭ್ಯವನ್ನು ತಲುಪಿಸಿದ್ದೇನೆ.

     ಐದು ವರ್ಷದ ಅವಧಿಯಲ್ಲಿ ಕುಡಿಯುವ ನೀರು, ರಸ್ತೆ, ವೃದ್ದಾಪ್ಯ ವೇತನ, ವಿಧವಾ ವೇತನ, ಸಾಲ ಸೌಲಭ್ಯ, ಪಡಿತರ ಚೀಟಿ, ಜಾತಿ ಆದಾಯ ಪ್ರಮಾಣಪತ್ರ, ವಿದ್ಯಾರ್ಥಿವೇತನ ಸೇರಿದಂತೆ ಮತ್ತಿತರರ ಸಮಸ್ಯೆಗಳನ್ನು ಹೋಗಾಲಾಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.

     ಬರಗಾಲದ ಸಮಯದಲ್ಲಿ ಕಳ್ಳ ಬಿಲ್‍ಗಳನ್ನು ಸೃಷ್ಟಿಸಿದ್ದಾರೆ ಅದು ನಿಮಗ್ಯಾರಿಗೂ ಗೊತ್ತೆ ಇಲ್ಲಾ, ಇನ್ನೂ ಜಾನುವಾರುಗಳಿಗೆ ನೀಡುವ ಮೇವು ವಿತರಣೆಯಲ್ಲಿ ಲೂಟಿ ಮಾಡಲಾಗಿದೆ ನನ್ನ ಅವಧಿಯಲ್ಲೂ ತಾಲ್ಲೂಕಿನಲ್ಲಿ ಬರಗಾಲವಿತ್ತು ಹೋಬಳಿವಾರು ಗೋ ಶಾಲೆಗಳನ್ನು ತೆರೆದು ಆಗ ಮೇವಿನ ಜೊತೆಗೆ ಗೋಪಾಲಕರಿಗೂ ಉಚಿತವಾಗಿ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಮಾಡಿದ್ದೇನೆ.

      ಹಾಸನ ಜಿಲ್ಲೆಯಿಂದ ತುಮಕೂರಿಗೆ ಹರಿಯುವ ಹೇಮಾವತಿ ನೀರನ್ನು ಹರಿಸಲು ತೊಡಕು ಉಂಟು ಮಾಡಿದವರಲ್ಲಿ ಮೊದಲಿಗರು ಮಾಜಿ ಪ್ರಧಾನಿ ದೇವೇಗೌಡರು. ಮಾನವೀಯ ಗುಣಗಳನ್ನು ಕಳೆದುಕೊಂಡವರು ಇಂದು ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಅಂತಹವರಿಗೆ ಇಂದೂ ಮಧುಗಿರಿ ಯವರು ಒಳ್ಳೆಯ ಬುದ್ಧಿ ಕಲಿಸಿದ್ದರಿಂದ ತಾಲ್ಲೂಕಿನವರನ್ನು ಇಡೀ ದೇಶದಲ್ಲಿಯೇ ಕೊಂಡಾಡುತ್ತಾರೆ.

      ನರ್ಬಾಡ್ ಸುಮಾರು 10 ಸಾವಿರ ಕೋಟಿ ಹಣವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಅಪೆಕ್ಸ್ ಬ್ಯಾಂಕ್‍ಗೆ ನೀಡುತ್ತದೆ ಸಾಲ ಪಡೆದವರು ಮರಳಿ ಕಟ್ಟುತ್ತಾರೋ ಇಲ್ಲಾವೂ ಗೊತ್ತಿಲ್ಲಾ ಆದರೆ ನಾವು ಮಾತ್ರ ಮತ್ತೆ ವಾಪಸ್ಸು ಕಟ್ಟಲೆಬೇಕು ಇಲ್ಲವಾದರೆ ಮತ್ತೆ ಅಪೆಕ್ಸ್ ಬ್ಯಾಂಕ್‍ಗೆ ನರ್ಬಾಡ್ ನವರು ಸಾಲ ನೀಡುವುದಿಲ್ಲ. ಅಪೆಕ್ಸ್ ಬ್ಯಾಂಕಿನ ಲಾಭಾಂಶದಲ್ಲಿ ಸಾಲ ಮನ್ನಾ ಮಾಡಲಾಗುವುದು. ಆದರೆ ಸಾಲ ಮನ್ನಾಕ್ಕೆ ರಾಜ್ಯ ಸರಕಾರವು ಯಾವುದೇ ಅನುದಾನ ನೀಡುವುದಿಲ್ಲ.

       ಟಿಡಿಸಿಸಿ ಬ್ಯಾಂಕ್‍ನ ನೇತೃತ್ವದಲ್ಲಿ ನಡೆಯುವ ಶಾಖೆಯು ಹೋಬಳಿಯ ರೈತರಿಗೆ ಸೇರಿದೆ ಎಲ್ಲಾರೂ ಖಾತೆಯನ್ನು ತೆರೆಯುವುದರ ಮೂಲಕ ಹಣದ ವಹಿವಾಟನನ್ನು ನಡೆಸಿ ಬ್ಯಾಂಕಿನ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಸಧೃಡರಾಗಿ ಎಂದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಉಪ್ಪು ಇಟ್ಟವರನ್ನು ಮುಪ್ಪಿನ ವರೆಗೆ ಯಾವತ್ತು ಮರೆಯಬಾರದು ಎಂಬ ಗಾದೆಯನ್ನು ಕೇಳಿದ್ದೀರಾ ಕಳೆದ ಚುನಾವಣೆಯಲ್ಲಿ ನಿಮ್ಮಿಂದ ಯಾವುದೂ ಒಂದು ಆಚಾತುರ್ಯ ನಡೆದು ಹೋಗಿದೆ ಇನ್ನೂ ಮುಂದೆ ಆ ರೀತಿ ಮಾಡುವುದು ಬೇಡಾ. ಜನರನ್ನು ಸಂಪರ್ಕಿಸುವ ಛಾಪನ್ನು ಹೊಂದಿರರುವವರೆಂದರೆ ಕೆ.ಎನ್.ರಾಜಣ್ಣ ನವರು. ನಿಮ್ಮ ಮತ್ತು ಅವರಿಂದ ನನಗೆ ಇಲ್ಲಿ ನಿಂತು ಕೊಂಡು ಮಾತನಾಡುವ ಶಕ್ತಿ ಬಂದಿದೆ.

    ನಾನು ಮೊದಲಿನಿಂದಲೂ ನೀರಾವರಿ ಹೋರಾಟದಲ್ಲಿ ತೊಡಗಿಸಿ ಕೊಂಡವನು ಪರಮಶಿವಯ್ಯನವರ ವರದಿಯನ್ನು ಹಾಗೂ ಕಲ್ಪನೆಯನ್ನು ಈ ಭಾಗದಲ್ಲಿ ಅನುಷ್ಟಾನ ಮಾಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದರು. ಸಂಸದರು ಹಾಗೂ ಕೆ.ಎನ್.ರಾಜಣ್ಣ ಬರುವ ದಾರಿಯುದ್ದಕ್ಕೂ ಪ್ರತಿ ಗ್ರಾಮದಲ್ಲೂ ಅಭೂತ ಪೂರ್ವ ಸ್ವಾಗತ ಹಾಗೂ ಜೈಕಾರ ಹೂ ಮಾಲೆಗಳನ್ನು ಹಾಗೂ ಜೆ ಸಿ ಬಿ ಮೂಲಕ ಸೇಬಿನ ಹಾರ ಮತ್ತು ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿ ನಂತರ ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಿ ಮತ್ತು ಕೆ.ಎನ್.ಆರ್ ರವರಿಗೆ ಬೆಳ್ಳಿ ಕೀರೀಟಗಳನ್ನು ತೊಡಿಸಿ ಸನ್ಮಾನಿಸಿದರು.

    ಕಾರ್ಯಕ್ರಮದಲ್ಲಿ ಬ್ಯಾಂಕ್ ನಿರ್ದೇಶಕರಾದ, ಸಿಂಗದಹಳ್ಳಿ ರಾಜ್ ಕುಮಾರ್, ಹನುಮಾನ್, ಜಿ.ಎಸ್.ರವಿ, ಲಕ್ಷ್ಮೀನಾರಾಯಣ್, ಟಿ.ಪಿ.ಮಂಜುನಾಥ್, ಹೆಚ್.ಟಿ.ತಿಮ್ಮರಾಜು, ಜಿ.ಪಂ ಸದಸ್ಯರಾದ ಜಿ.ಜೆ.ರಾಜಣ್ಣ, ಚೌಡಪ್ಪ, ತಾಪಂ ಅಧ್ಯಕ್ಷೆ ಇಂದಿರಾ ದೇನಾ ನಾಯ್ಕ, ಸಹಕಾರಿ ಯೂನಿಯನ್ ಅಧ್ಯಕ್ಷ ಎನ್.ಗಂಗಣ್ಣ, ಎಪಿಎಂಸಿ ಅಧ್ಯಕ್ಷ ಮರಿಯಣ್ಣ, ಪುರಸಭಾ ಸದಸ್ಯರಾದ ತಿಮ್ಮರಾಯಪ್ಪ, ತಾಪಂ ಸದಸ್ಯ ಚಂದ್ರಕಲಾ ರಘು, ಗ್ರಾಪಂ ಅಧ್ಯಕ್ಷ ಹೆಚ್.ಜಿ. ದೇವರಾಜು, ಸದಸ್ಯರಾದ ಬಿ.ಪಿ.ನಾಗರಾಜು, ಚಿರಂಜೀವಿ ಮೆಹಬೂಬ್ ಪಾಷ, ಗಂಗಮ್ಮ, ಕಮಲಮ್ಮ ಚಂದ್ರಣ್ಣ, ಮುಖಂಡರಾದ ಎಸ್.ಎಂ ಮಲ್ಲಿಕಾರ್ಜುನಯ್ಯ, ರಾಜ್ ಗೋಪಾಲ್, ಮಾಜಿ ತುಮುಲ್ ಅಧ್ಯಕ್ಷ ನಾಗೇಶ್ ಬಾಬು, ರಂಗಪ್ಪ, ಎಸ್.ಎನ್.ರಾಜು, ನಾರಾಯಣ ಗೌಡ, ಲಕ್ಷ್ಮೀನಾರಾಯಣ್, ಸೀತರಾಂ, ವಿ.ಎಸ್ ಎಸ್ ಎನ್ ಅಧ್ಯಕ್ಷ. ಹೆಚ್.ವಿ.ಮಂಜುನಾಥ್, ಗೋವಿಂದರಾಜು, ಇ.ಗೋವಿಂದರಾಜು, ಎಸ್.ಎಂ.ಕೃಷ್ಣಪ್ಪ, ಇರ್ಷಾದ್ ನೌಕರರಾದ ರಾಮಕೃಷ್ಣ, ನರಸಿಂಹಮೂರ್ತಿ, ಮಹಮದ್ ಯೂನಸ್, ರೇಣುಕಯ್ಯ ಸಾವಿರಾರು ಕಾರ್ಯಕರ್ತರು ಸಹಕಾರಿಗಳು ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap