ಸಮರ್ಪಕ ನೀರಿಗಾಗಿ ನಮ್ಮ ಶ್ರಮ ಕೂಡ ಅಗತ್ಯ.!

ಚಳ್ಳಕೆರೆ

    ಪ್ರತಿನಿತ್ಯ ನಮ್ಮೆಲ್ಲರ ಜೀವನಕ್ಕೆ ಅಮೂಲ್ಯವಾದ ನೀರನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನಾವೆಲ್ಲರೂ ಜಾಗೃತರಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಸಹಜವಾಗಿ ಮರಗಿಡಗಳು ಕಡಿಮೆಯಾಗುತ್ತಿದ್ದು, ಮಳೆ ಪ್ರಮಾಣವೂ ಸಹ ಕ್ಷೀಣಿಸಿದ್ದು, ಲಭ್ಯವಿರುವ ನೀರನ್ನೇ ಮಿತವಾಗಿ ಬಳಸಿಕೊಳ್ಳಲು ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ, ಪ್ರಾಂಶುಪಾಲ ಜಿ.ಬಾಲರೆಡ್ಡಿ ತಿಳಿಸಿದರು.

    ಅವರು, ಶುಕ್ರವಾರ ಇಲ್ಲಿನ ನೆಹರೂ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಮತ್ತು ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಲಶಕ್ತಿ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಜಾಗೃತಿ ಜಾಥ ನಡೆಸಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಿಗೆ ನೀರಿನ ಮಿತವ್ಯಯ ಬಳಕೆಯ ಬಗ್ಗೆ ಘೋಷಣೆ ಕೂಗುವ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಸದಾಕಾಲ ಜಲಸಂರಕ್ಷಣೆಯ ಬಗ್ಗೆ ಜಾಗೃತೆ ವಹಿಸಬೇಕಿದೆ. ಇಂದು ಎಲ್ಲೂ ನೀರು ಸಿಗುತ್ತಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ನಾವೇ ಹೊಣೆಯಾಗಿದ್ದೇವೆ. ನಮ್ಮ ನಿರ್ಲಕ್ಷತನದಿಂದ ನೀರು ದೊರೆಯದಂತಾಗಿದೆ ಎಂದರು.

    ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಮಾತನಾಡಿ, ಕಳೆದ ಸುಮಾರು ಒಂದು ತಿಂಗಳಿನಿಂದ ಜಿಲ್ಲಾಧಿಕಾರಿಗಳು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸೂಚನೆಯಂತೆ ಪೌರಾಯುಕ್ತರ ಮಾರ್ಗದರ್ಶನದಲ್ಲಿ ನಗರಸಭೆ ವಿದ್ಯಾರ್ಥಿಗಳ ಜಾಗೃತಿ ಜಾಥ ನಡೆಸುವ ಮೂಲಕ ಸಾರ್ವಜನಿಕರಿಗೆ ಇಡೀ ದಿನ ನೀರು ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

    ಪ್ರತಿಯೊಬ್ಬರೂ ಅವಶ್ಯಕತೆ ತಕ್ಕಂತೆ ನೀರು ಬಳಸುವ ಬದಲು ನೀರಿನ ಲಭ್ಯತೆಗೆ ತಕ್ಕಂತೆ ಬಳಸಬೇಕಿದೆ ಎಂದರು.
ಜಾಗೃತಿ ಜಾತದಲ್ಲಿ ಕಾಲೇಜು ಪ್ರಾಂಶುಪಾಲ ಓ.ಬಾಬುಕುಮಾರ್, ಉಪನ್ಯಾಸಕರಾದ ಜೆ.ತಿಪ್ಪೇಸ್ವಾಮಿ, ಉಮೇಶ್, ರುದ್ರಮುನಿಯಪ್ಪ, ಅಶ್ವತ್ಥರೆಡ್ಡಿ,ನಗರಸಭೆ ಸಮನ್ವಯಾಧಿಕಾರಿ ಪಿ.ಪಾಲಯ್ಯ, ತಿಪ್ಪೇಸ್ವಾಮಿ, ಇಂಜಿನಿಯರ್ ಜಿ.ಶ್ಯಾಮಲ, ಕಂದಾಯಾಧಿಕಾರಿ ವಿ.ಈರಮ್ಮ, ನಯನ, ಹೆಲ್ತ್ ಇನ್ಸ್‍ಪೆಕ್ಟರ್ ನಿರ್ಮಲ, ವಿಶ್ವನಾಥ, ಮಂಜುನಾಥ, ಓಬಳೇಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link