ದೇಶದ ಅಭಿವೃದ್ಧಿಗಾಗಿ ನಾಗರಿಕರು ವಿದ್ಯಾವಂತರಾಗಬೇಕು : ಎಸ್ ನಾಗಣ್ಣ

ತುಮಕೂರು

        ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಾಡಿನ ಸಮಸ್ತ ನಾಗರಿಕರು ವಿದ್ಯಾವಂತರಾಗಬೇಕು. ಶಿಕ್ಷಣವೇ ಶಕ್ತಿ. ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಶಿಕ್ಷಣದ ಮಹತ್ವ ಹೆಚ್ಚಾಗಿದೆ. ಮತ್ತು ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಮುಂದುವರಿ ಯುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ರಾಜ್ಯ ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ ಎಸ್. ನಾಗಣ್ಣ ಅಭಿಪ್ರಾಯಪಟ್ಟರು.

       ನಗರದ ದಾನಾ ಪಿ.ಯು ಕಾಲೇಜಿನಲ್ಲಿ ಬೆಂಗಳೂರಿನ ಅಲ್‍ಅಮಿನ್ ವಿದ್ಯಾಸಂಸ್ಥೆಯ ಸಂಸ್ಥಾಪರ ದಿನಾಚರಣೆಯನ್ನು ಡಾ. ಮುಮ್ತಾಜ್ ಅಹಮದ್ ಖಾನ್ ಅವರ ದಿನಾಚರಣೆಯನ್ನಾಗಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಅತಿಥಿ ತನ್ವೀರ್ ಹಖ್ ಮಾತನಾಡಿ, ಡಾ. ಮುಮ್ತಾಜ್ ಅಹಮದ್ ಖಾನ್ ಅವರ ಶೈಕ್ಷಣಿಕ ಕ್ಷೇತ್ರದ ಸಾಧನೆಗಳನ್ನು ವಿವರಿಸುತ್ತಾ, 1966ರಲ್ಲಿ ಸ್ಥಾಪಿತವಾದ ಸಂಸ್ಥೆ ಇದು. ಇದೀಗ ರಾಷ್ಟ್ರದಾದ್ಯಂತ 250 ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ನಡೆಯುತ್ತಿವೆ. ಮತ್ತು ಸುಮಾರು 3 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಮುಮ್ತಾಜ್ ಅಹಮದ್ ಖಾನ್‍ರ ಶೈಕ್ಷಣಿಕ ಕ್ಷೇತ್ರದ ಅನುಪಮ ಸೇವೆಯು ಯಾವುದೇ ಜಾತಿ ಮತವಿಲ್ಲದೆ ಲಕ್ಷಾಂತರ ಜೀವನದ ದಾರಿ ದೀಪವಾಗಿದ್ದಾರೆ ಎಂದು ಹೇಳಿದರು.

       ಖಾನ್ ಅವರ ಕಾರ್ಯವೈಖರಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನಮೂನೆಯಾಗಿರುತ್ತದೆ. ಮುಷ್ತಾಕ್ ಅಹಮದ್‍ಅವರು ಡಾ. ಮುಮ್ತಾಜ್ ಅಹಮದ್ ಖಾನ್ ಅವರ ಜೀವನ ಮತ್ತು ಸಾಧನೆಗಳ ವಿವರಗಳ ಬಗ್ಗೆ ಬೆಳಕನ್ನು ಚೆಲ್ಲಿದರು. ಖಾನ್ ಅವರಿಗೆ ಸಿದ್ಧಗಂಗಾ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮ ದಿನದಂದು ಅವರ ಸಮ್ಮುಖದಲ್ಲಿ ಅಂದಿನ ಮುಖ್ಯ ಮಂತ್ರಿಗಳು ಸನ್ಮಾನಿಸಿದ್ದರು. ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಡಾ. ಹಂಸರಾಜ್ ಭಾರಧ್ವಜ್ ಅವರು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು ಎಂದು ನೆನಪುಗಳನ್ನು ಮೆಲುಕು ಹಾಕಿದರು.

       ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಅಷ್ರಪ್ ಹುಸೇನ್, ಗ್ಲೋಬಲ್ ಷಾಹೀನ್ ಪಿ.ಯು ಕಾಲೇಜಿನ ಚೇರ್ಮನ್ ಅಫ್‍ಜಲ್ ಷರಿಪ್, ಇಂತಿಯಾಜ್ ಅಹಮದ್, ವಕೀಲರಾದ ಮಹಮ್ಮದ್ ಅಪ್ರೋಜ್ ಅಹಮದ್ ಅವರು ಇದ್ದರು. ಉಬೇದುಲ್ಲಾ ಷರೀಪ್ ವಂದಿಸಿದರು. ನಾಸಿರ್ ಬೇಗ್ ನಿರೂಪಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap