ಅಭಿವೃದ್ದಿಗೆ ವಿಜ್ಞಾನ ಬಳಕೆ ಅನಿವಾರ್ಯ

ಚಿತ್ರದುರ್ಗ

      ಇಂದಿನ ದಿನಮಾನದಲ್ಲಿ ವಿಜ್ಞಾನ ಇಲ್ಲದೆ ಇರುವುದು ಕಷ್ಟವಾಗಿದೆ ಎಲ್ಲಾ ಕಡೆಯಲ್ಲಿಯೂ ಸಹಾ ವಿಜ್ಞಾನ ತನ್ನ ಪಾತ್ರವನ್ನು ಬೀರಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ ವಸ್ತ್ರಮಠ ತಿಳಿಸಿದರು.

        ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಚಿತ್ರದುರ್ಗ ವಿಜ್ಞಾನ ಕೇಂದ್ರದವತಿಯಿಂದ ನಗರದ ಜಿಲ್ಲಾಧಿಕಾರಿಗಳ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಮನ್ ರವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದರು.

       ಈ ಮುಂಚೆ ವಿಜ್ಞಾನದ ಬಳಕೆ ಅಷ್ಟಾಗಿ ಇರದಿದ್ದರೂ ಇಂದಿನ ದಿನಮಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ, ಎಲ್ಲೆದರಲ್ಲೂ ಸಹಾ ವಿಜ್ಞಾನದ ಬಳಕೆಯ ಪ್ರಮಾಣ ಹೆಚ್ಚಾಗಿದೆ. ರಾಮನ್‍ರವರು ಅತಿ ಕಡಿಮೆ ವೆಚ್ಚದಲ್ಲಿ ಉತ್ತಮವಾದ ಸಂಶೋಧನೆಯನ್ನು ಮಾಡುವುದರ ಮೂಲಕ ಪ್ರಪಂಚಕ್ಕೆ ಜ್ಞಾನವನ್ನು ನೀಡಿದ್ದಾರೆ. ಇಂದು ನಾವು ಬಳಕೆ ಮಾಡುತ್ತಿರುವ ವಿವಿಧ ವಸ್ತುಗಳಾದ ಮೊಬೈಲ್ ಅಧುನಿಕ ತಂತ್ರಜ್ಞಾನ ಇಲ್ಲದೆ ಬಳಕೆ ಮಾಡಲು ಸಾಧ್ಯವಿಲ್ಲ ವಿಜ್ಞಾನಿಗಳು ತಮ್ಮ ಜ್ಞಾನವನ್ನು ಉಪಯೋಗ ಮಾಡುವುದರ ಮೂಲಕ ಯುದ್ದ ಕಾಲಕ್ಕೆ ಬೇಕಾದ ವಿವಿಧ ರೀತಿಯ ಅಸ್ತ್ರಗಳನ್ನು ಕಂಡು ಹಿಡಿಯುವುದರ ಮೂಲಕ ದೇಶಕ್ಕೆ ನೆರವಾಗಿದ್ದಾರೆ ಎಂದು ತಿಳಿಸಿದರು.

        ಮುಂದಿನ ದಿನಮಾನದಲ್ಲಿ ವಿಜ್ಞಾನದ ಬಗ್ಗೆ ಓದುವುದರ ಮೂಲಕ ಅದರಲ್ಲಿ ಆಸಕ್ತಿಯನ್ನು ಬೆಳಸಿಕೊಂಡು ಉತ್ತಮ ವಿಜ್ಞಾನಿಗಳಾಗಿ, ನಿಮ್ಮಿಂದ ದೇಶ ಬಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದೆ ಅದಕ್ಕೆ ಪೂರಕವಾದ ಜ್ಞಾನವನ್ನು ಸಂಪಾದನೆ ಮಾಡುವಂತೆ ವಿದ್ಯಾರ್ಥಿಗಳಿಗೆ ನ್ಯಾಯಾಧೀಶರಾದ ವಸ್ತ್ರಮಠ್ ಕರೆ ನೀಡಿದರು.

        ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶೀ ದಿಂಡಲಕೊಪ್ಪ, ವಿಜ್ಞಾನ ಕೇಂದ್ರದ ದಾಸೇಗೌಡ, ಕಸಾಪದ ಅಧ್ಯಕ್ಷ ದೊಡ್ಡಮಲ್ಲಯ್ಯ, ಬ್ರಹ್ಮಾನಂದಗುಪ್ತ, ಮಹೇಂದ್ರನಾಥ್, ಶ್ರೀಮತಿ ಗಾಯತ್ರಿಶಿವರಾಂ, ಸ್ವಾಮಿ ರಶ್ಮಿ ಅಕ್ಕನವರು ಸಹಕಾರ್ಯದರ್ಶಿ ನವೀನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

         ಕಾರ್ಯಕ್ರಮದಲ್ಲಿ ರೊಟರಿ ಶಾಲೆ,ಮದಕರಿ ಶಾಲೆ,ಸೆಂಟ್ ಜೋಸೆಫ್ ಕಾನ್ವೆಂಟ್,ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು,ಪಾಶ್ರ್ವ ನಾಥ ಪ್ರೌಢಶಾಲೆ. ಸರ್ಕಾರಿ ಬಾಲಕರ ಹಳೆ ಮಾಧ್ಯಮಿಕ ಪಾಠಶಾಲೆ./ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಸರ್ಕಾರಿ ಉರ್ದು ಪಾಠಶಾಲೆ. ರಿಷಿ ಸಂಸ್ಕೃತಿ ಹಿರಿಯ ಪ್ರಾಥಮಿಕ ಪಾಠ ಶಾಲೆ. ಸಿದ್ದರಾಮೇಶ್ವರ ಪ್ರೌಢಶಾಲೆ./ಕೋಟೆ ಸರ್ಕಾರಿ ಪ್ರೌಢಶಾಲೆ. ಗುರುಕುಲ ಪ್ರೌಢಶಾಲೆ./ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ (ಚರ್ಚ್ ಪಕ್ಕ)/ಹೊಂಗಿರಣ ಶಾಲೆ./ ಬಿಇಡಿ ವಿಧ್ಯಾರ್ಥಿಗಳು ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap