ಪ್ರಬಲ ಆರ್ಥಿಕತೆಗೆ ಮಹಿಳೆಯರ ಪಾತ್ರ ಅತ್ಯಗತ್ಯ:ಸಂಜೀವ್ ಸಿಂಗ್

ಬೆಂಗಳೂರು

   ದೇಶದ ಆರ್ಥಿಕತೆ ಪ್ರಬಲವಾಗಿ ಬೆಳೆಯಬೇಕಾದರೆ, ಮಹಿಳಾಯರ ಪಾತ್ರವೂ ಬಹುದೊಡ್ಡದು. ಹಾಗಾಗಿ, ಆರ್ಥಿಕ ಚಟುವಟಿಕೆ ಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗಿಯಾಗಿ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆರ್ ಬಿಐ (ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ) ಪ್ರಧಾನ ವ್ಯವಸ್ಥಾಪಕ ಸಂಜೀವ್ ಸಿಂಗ್ ತಿಳಿಸಿದ್ದಾರೆ.

   ನಗರದಲ್ಲಿಂದು ಅಶೋಕ ಹೋಟೆಲ್ ಆವರಣದಲ್ಲಿ ಅವೇಕ್ ಸಂಸ್ಥೆ ಆಯೋಜಿಸಿದ್ದ, ಲಾಭದಾಯಕ ಬೆಳವಣಿಗೆಗೆ ಹಣಕಾಸಿನ ನೆರವು ಕುರಿತ ರಾಜ್ಯ ಮಟ್ಟದ ಮಹಿಳಾ ಉದ್ಯಮಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

   ದೇಶದ ಆರ್ಥಿಕ ಪ್ರಬಲವಾಗಿ ಬೆಳೆಯಬೇಕಾದರೆ, ಮಹಿಳಾಯರ ಪಾತ್ರವೂ ಬಹುದೊಡ್ಡದು. ಮಹಿಳೆಯರು ವಿವಿಧ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಉದ್ಯಮಪತಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು.ಹಲವು ದಶಕಗಳಿಂದ ಮಹಿಳೆಯರ ಸಶಕ್ತೀಕರಣಕ್ಕೆ ಊರುಗೋಲಾಗಿರುವ ಅವೇಕ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆಯಿಂದ ವಿವಿಧ ಉದ್ಯಮಗಳ ತರಬೇತಿಯನ್ನು ಮಹಿಳೆಯರು ಪಡೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಹಾಗೂ ಕೌಶಲ್ಯ ಅಭಿವೃದ್ಧಿಯನ್ನು ಹೊಂದಿ ಸ್ವಂತ ಉದ್ಯಮವನ್ನು ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. 

    ಕೆಎಸ್ಎಫ್ ಸಿ ಕಾರ್ಯನಿರ್ವಾಹಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ 60 ವರ್ಷಗಳ ಸುದಿರ್ಘ ಸೇವೆಯನ್ನು ರಾಜ್ಯದ ಕೈಗಾರಿಕಾ ಅಭಿವೃದ್ಧಿಗಾಗಿ ನಿರಂತರವಾಗಿ ಪ್ರಯತ್ನ ಮಾಡಿಕೊಂಡು ಬಂದಿದೆ. ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಪ್ರಗತಿಯಲ್ಲಿ ನಾವು ಪಾತ್ರದಾರಿಗಳಾಗಿದ್ದೇವೆ. ಮಹಿಳಾ ಉದ್ಯಮಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಉದ್ಯಮ ಅಭಿವೃದ್ಧಿಗೆ ಸಹಕರಿಸುತ್ತಿದ್ದೇವೆ ಎಂದು ತಿಳಿಸಿದರು.

    ಸರ್ಕಾರದ ಸಹಕಾರದಿಂದ 2 ಕೋಟಿ ರೂ.ಗಳನ್ನು ಶೇ.4 ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ಗಳನ್ನು ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.

     ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ನಿರ್ದೇಶಕ ಅಕದಾಸ್ ಮಾತನಾಡಿ, ನಾವು ಸಹ ಕೆಲವು ಇಂತಹ ಕಾರ್ಯಕ್ರಮಗಳ ಮೂಲಕ ಜಿಲ್ಲಾ ಮಟ್ಟದಲ್ಲಿ ಮಿನಿ ಕ್ಲಸ್ಟರ್ ಗಳನ್ನು ಮಾಡಲು ನಿರ್ಧಾರ ಕೈಗೊಂಡಿದೆ. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.

      ಈ ಸಂದರ್ಭದಲ್ಲಿ ಎಸ್ ಬಿಐ(ನೆಟ್ವರ್ಕ್) ಪ್ರಧಾನ ವ್ಯವಸ್ಥಾಪಕಿ ಮಂಜು ಎಸ್.ಬೋಲಕಣಿ, ಅಮೇಕ್ ಅಧ್ಯಕ್ಷೆ ಡಾ.ಆರ್.ರಾಜೇಶ್ವರಿ, ಖಜಾಂಚಿ ಸಿ.ಭುವನೇಶ್ವರಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link