ಬ್ರಾಹ್ಮಣ ಸಮಾಜದ ಅಭಿವೃದ್ದಿಗೆ ಶಿಕ್ಷಣವೇ ಮಾರ್ಗ

ಚಿತ್ರದುರ್ಗ:

      ಸರ್ಕಾರದಿಂದ ಯಾವ ಸೌಲಭ್ಯವನ್ನು ತೆಗೆದುಕೊಳ್ಳಲು ಆಗದಿರುವ ಬ್ರಾಹ್ಮಣರು ಮೊದಲಿನಿಂದಲೂ ಜ್ಞಾನ, ಶಿಕ್ಷಣಕ್ಕೆ ಪ್ರಾಧಾನ್ಯತೆ ಕೊಡುತ್ತ ಬರುತ್ತಿದ್ದಾರೆ. ಬ್ರಾಹ್ಮಣ ಸಮಾಜ ಉಳಿದುಕೊಳ್ಳಬೇಕಾದರೆ ಶಿಕ್ಷಣವೊಂದೆ ದಾರಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಬ್ರಾಹ್ಮಣ ಸಮುದಾಯಕ್ಕೆ ಕರೆ ನೀಡಿದರು.

        ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಚಿತ್ರದುರ್ಗ ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಎರಡನೆ ದಿನವಾದ ಶನಿವಾರ ವಿಪ್ರ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯರ ಜೀವನದಲ್ಲಿ ಐವತ್ತು ಅವರತ್ತು ವರ್ಷವಾಯಿತೆಂದರೆ ಮೃತ್ಯು ಹತ್ತಿರವಾಯಿತೆಂದರ್ಥ. ಆದರೆ ಚಿತ್ರದುರ್ಗ ಬ್ರಾಹ್ಮಣರ ಸಂಘಕ್ಕೆ ನೂರು ವರ್ಷವಾಗಿದೆ ಎಂದರೆ ಇದರ ಹಿಂದೆ ಅನೇಕರ ತ್ಯಾಗ ಪರಿಶ್ರಮವಿದೆ. ಹಾಗಾಗಿ ಸಾಧಕರಿಗೆ ಕೃತಜ್ಞತೆ ಸಮರ್ಪಿಸದಿದ್ದರೆ ಮನಷ್ಯತ್ವವೇ ಇರುವುದಿಲ್ಲ ಎಂದು ಹೇಳಿದರು.

       ಕರ್ನಾಟಕ ರಾಜ್ಯದಲ್ಲಿ ಚಿತ್ರದುರ್ಗ ಬ್ರಾಹ್ಮಣ ಸಂಘ, ಶಿವಮೊಗ್ಗ, ಸೋಮವಾರಪೇಟೆ, ಮೈಸೂರು ಸಂಘ ಮತ್ತು ಮತ್ತೊಂದು ಸಹಕಾರಿ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಉಪನಿಷತ್ತಿನ ಮಾತುಗಳು ಎಲ್ಲರಿಗೂ ಅನ್ವಯವಾಗಬೇಕು. ಭಾರತದಲ್ಲಿ ಬ್ರಾಹ್ಮಣ ಒಂದೆ ರಾಷ್ಟ್ರೀಯ ಸಮಾಜವಾಗಿದೆ. ಏಕೆಂದರೆ ಭಾರತದ ಎಲ್ಲಾ ಕಡೆ ಬ್ರಾಹ್ಮಣರು ಇದ್ದಾರೆ. 1972 ರಿಂದ 80 ರತನಕ ಬ್ರಾಹ್ಮಣ ಸಂಘದಲ್ಲಿ ಒಡಕು ತುತ್ತ ತುದಿಯಲ್ಲಿತ್ತು. ಈಗ ಎಲ್ಲರಲ್ಲೂ ಸೌಹಾರ್ಧ ವಾತಾವರಣವಿದೆ ಎಂದು ಹರ್ಷ ವ್ಯಕ್ತಪಡಿಸಿದರು.

      ನಮ್ಮಲ್ಲಿ ಅನೇಕ ಸಮಸ್ಯೆಗಳಿವೆ. ಮೀಸಲಾತಿ, ಶಿಕ್ಷಣಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಮುಂದುವರೆದ ಜನಾಂಗದ ಹಿಂದುಳಿದವರ ಅಭಿವೃದ್ದಿಗೆ ಪ್ರಧಾನಿ ಮೋದಿ ಶೇ.10 ರಷ್ಟು ಮೀಸಲಾತಿ ನೀಡಿರುವುದು ನಮಗೆ ಅನುಕೂಲವಾಗಿದೆ. ಯಾವುದೇ ಭಿನ್ನ ಭೇದವಿಲ್ಲದೆ ಒಟ್ಟಾಗಿ ಕೆಲಸ ಮಾಡೋಣ. ಬ್ರಾಹ್ಮಣರು ಬದುಕುವುದಲ್ಲದೆ ಸುತ್ತಮುತ್ತಲಿನವರಿಗೂ ಸಹಾಯ ಮಾಡಬೇಕು. ಎಲ್ಲಾ ಶಕ್ತಿಗಳನ್ನು ಕ್ರೂಢೀಕರಿಸಿದರೆ ಸಂಘ ಬಲಿಷ್ಟವಾಗುತ್ತದೆ. ಬ್ರಾಹ್ಮಣರು ಸುಸಂಸ್ಕೃತವಾಗಿ ಬೇರೆ ಸಮಾಜದವರೊಂದಿಗೆ ನಡೆದುಕೊಳ್ಳಬೇಕು ಎಂದರು.

      ಹರಿಹರಪುರ ಶ್ರೀಮಠದ ಆಡಳಿತಾಧಿಕಾರಿ ಬಿ.ಎಸ್.ರವಿಶಂಕರ್ ಮಾತನಾಡಿ ಅವಧೂತರು, ಸಿದ್ದರು ನೆಲೆಸಿರುವ ನಾಡು, ಶರಣರ ಬೀಡು ಚಿತ್ರದುರ್ಗದಲ್ಲಿ ಬ್ರಾಹ್ಮಣ ಸಂಘ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ದೊಡ್ಡ ಇತಿಹಾಸ. 1918 ರಲ್ಲಿ ವೆಂಕಟಕೃಷ್ಣರವರು ಸಂಘ ನೊಂದಣಿ ಮಾಡಿ ಪುರಸಭೆ ಅಧ್ಯಕ್ಷರಾದ ಮೇಲೆ ಬ್ರಾಹ್ಮಣ ಸಮಾಜಕ್ಕೆ ಈ ಜಾಗವನ್ನು ದೊರಕಿಸಿಕೊಟ್ಟರು ಎಂದು ಸಂಘ ಶತಮಾನೋತ್ಸವ ಆಚರಿಸಿಕೊಳ್ಳಲು ಕಾರಣಕರ್ತರಾದ ಹಿರಿಯರನ್ನು ಸ್ಮರಿಸಿಕೊಂಡರು.

       ರಾಮಾನುಜಾಚಾರ್ಯ, ಶಂಕರಾಚಾರ್ಯ, ಮಧ್ವಾಚಾರ್ಯರ ಸಾಧನೆಗಳನ್ನು ಬ್ರಾಹ್ಮಣ ಸಮಾಜ ಗೌರವಿಸಬೇಕು. ಮನುಷ್ಯ ಏಕಾಂಗಿಯಾಗಿದ್ದಾಗ ನೂರೆಂಟು ಚಿಂತೆಗಳು ಕಾಡುತ್ತವೆ. ಹಾಗಾಗಿ ನಮ್ಮ ಕಣ್ಣು ಮತ್ತು ಗಮನ ಯಾವಾಗಲೂ ಸಾಧನೆ ಕಡೆಗಿರಬೇಕು. ಬ್ರಾಹ್ಮಣರ ಆಚಾರ-ವಿಚಾರ, ಸಂಸ್ಕಾರ, ಸಂಸ್ಕೃತಿ ಮನೆಯಲ್ಲಿರಬೇಕು. ಹೊರಗೆ ಬಂದಾಗ ಬೇರೆ ಸಮಾಜದವರೊಡನೆ ಆತ್ಮೀಯತೆ ಯಿಂದ ಇರಬೇಕು. ಬ್ರಾಹ್ಮಣ ಸಮುದಾಯಕ್ಕೂ ಸಾಕಷ್ಟು ಸಮಸ್ಯೆಗಳಿವೆ. ಶಿಕ್ಷಣ, ಮೀಸಲಾತಿ ಇವು ನಮ್ಮ ಸಮುದಾಯದ ಎದುರಿಗಿರುವ ಬಹುದೊಡ್ಡ ಸವಾಲು ಎಂದು ಹೇಳಿದರು.ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

      ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರುಗಳಾದ ಲಕ್ಷ್ಮಿಕಾಂತ್, ಶಂಕರನಾರಾಯಣ್, ಕಾರ್ಯದರ್ಶಿ ಮಂಜುನಾಥಶರ್ಮ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap