ಮಧುಗಿರಿ:
ಚುನಾವಣೆಯನ್ನು ಗೆಲ್ಲಲು ಕೇವಲ ಹಣ ಮತ್ತು ಜಾತಿಯೊಂದೆ ಮುಖ್ಯವಲ್ಲ ಎಂದು ತುಮಕೂರು ಲೋಕಸಭಾ ಅಭ್ಯರ್ಥಿ ಮಹಾಲಕ್ಷ್ಮೀ.ಸಿ.ಪಿ ಅಭಿಪ್ರಾಯಪಟ್ಟರು.
ಪಟ್ಟಣದ ಪಾವಗಡ ಗೇಟ್‍ನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ತಮ್ಮ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾನು ಚುನಾವಣೆಗೆ ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನ್ ರಾಂ ರವರ ಆದರ್ಶಗಳನ್ನಿಟ್ಟುಕೊಂಡು ಸ್ಫರ್ಧಿಸಿದ್ದು, ನಾನು ಯಾವುದೇ ರೀತಿಯ ದುರುದ್ದೇಶಗಳಿಂದ ನನ್ನ ಸ್ವಾರ್ಥ ಸಾಧನೆಗಾಗಿ ಬಂದಿಲ್ಲ.
ಜೊತೆಗೆ ನನ್ನ ಕನಸ್ಸು ನನ್ನ ಜನರ ಸದೃಢ ಹಾಗೂ ಸಮಾನತೆಯ ಬದುಕಿಗೆ ರಾಜಕೀಯ ಪ್ರವೇಶ ಮಾಡಿದ್ದೇನೆ. ನಾನು ಇದೆ ತಾಲೂಕಿನ ಚಿನಕವಜ್ರ ಗ್ರಾಮದ ವಾಸಿಯಾಗಿದ್ದು ಮಧುಗಿರಿ ಕ್ಷೇತ್ರವನ್ನು ತುಂಬ ವಿಷೇಶ ಕಾಳಜಿವಹಿಸಿ ಅಭಿವೃದ್ದಿ ಮಾಡಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ ನವರ ಕಾರ್ಯವೈಕರಿ ನೋಡಿ ನಾನು ಸಹ ಅವರಂತೆ ಜನ ಸೇವೆ ಮಾಡಬೇಕೆಂದು ರಾಜಕೀಯ ಪ್ರವೇಶ ಮಾಡಿದ್ದು, ಅವರೆ ನನ್ನ ರೋಲ್ ಮಾಡಲ್ ಆಗಿದ್ದು ಅವರಂತೆ ಜನರ ಸೇವೆಗಾಗಿ ನಾನು ನನ್ನ ಜೀವನ ಮುಡಿಪಾಗಿಸಿಕೊಂಡಿದ್ದು, ಜನರ ಕಷ್ಟ ನಷ್ಟಗಳಿಗೆ ಸದಾ ಜೊತೆಯಾಗಿರುವೆ ಹಾಗಾಗಿ ಮಧುಗಿರಿಯ ಮಗಳಾದ ನನಗೆ ತಮ್ಮೆಲ್ಲರ ಆಶೀರ್ವಾದ ನೀಡುವ ಮೂಲಕ ಜೊತೆಯಾಗಿರುತ್ತೀರೆಂದು ಬಹಳ ಆಸೆ ಇಂದ ಈ ಚುನಾವಣೆಯಲ್ಲಿ ಸ್ವರ್ದಿಸಿದ್ದು ನಮ್ಮ ತಾಲೂಕಿನ ಜನತೆ ನನ್ನನ್ನು ಕೈ ಬಿಡುವುದಿಲ್ಲ ಎಂದು ನಂಬಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎ.ಎಸ್.ಪಿ ಹಾಗೂ ಜಾಂಬವ ಯುವ ಸೇನ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಾಮೇಶ್ ಚಕ್ರವರ್ತಿ, ಸಾಹಿತಿ ಸೋಂಪುರ ರಂಗನಾಥ, ಅದಿಜಾಂಬವ ಮಹಾಸಭದ ನವೀನ್, ಬೇಡತ್ತೂರ್ ಪ್ರಸನ್ನ, ರಮೇಶ್, ಪ್ರಕಾಶ್, ಮಿಡಿಗೇಶಿ ಮಂಜು, ರಮಾದೇವಿ, ಸಾವಿತ್ರಮ್ಮ, ಭಾಗ್ಯಮ್ಮ,ಅನ್ನಪೂರ್ಣಮ್ಮ, ಸಿದ್ದಮ್ಮ, ಪುಟ್ಟಮ್ಮ. ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
