ಕಾರವಾರ
ಕರ್ನಾಟಕದ ಕಾರವಾರದ ಸೀಬರ್ಡ್ ನೌಕಾನೆಲೆ ವ್ಯಾಪ್ತಿಗೆ ಬರುವ ಕಾಮತ್ ಬೀಚ್ಗೆ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಸ್ವೀಡನ್ ದೇಶದ ಸ್ವೈನ್ ಅಲೆಕ್ಸಾಂಡರ್ ಸೆಗರ್ (27) ಬಂಧಿಸಿದ್ದಾರೆ. ಸೆ.18ರಂದು ಭಾರತಕ್ಕೆ ಬಂದಿದ್ದ ಈತ, ದಕ್ಷಿಣ ಕರಾವಳಿಯುದ್ದಕ್ಕೂ ಕಾಲ್ನಡಿಗೆಯ ಮೂಲಕ ಸಂಚರಿಸುತ್ತಿದ್ದ ಎಂದು ನೌಕಾಪಡೆ ತಿಳಿಸಿದೆ.
ಕಡಲತೀರದಲ್ಲಿ ಯೋಗಾಭ್ಯಾಸ ಮಾಡುವುದು ಈತನ ಅಭ್ಯಾಸವಾಗಿತ್ತು ಎನ್ನಲಾಗಿದೆ.ಗೋವಾದಿಂದ ಕಾರವಾರದ ಕಾಮತ್ ಕಡಲತೀರಕ್ಕೆ ನಿನ್ನೆ ಬಂದಿದ್ದ ಈತನ ಬಳಿ ಸೂಕ್ತ ದಾಖಲೆಗಳು ಇಲ್ಲದ ಕಾರಣ ನೌಕಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಾಮತ್ ತೀರ, ನೌಕಾನೆಲೆಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವಿದೆ. ಹೀಗಿರುವಾಗ ಅನುಮತಿ ಪಡೆಯದೇ ತೀರಕ್ಕೆ ಭೇಟಿ ನೀಡಿದ್ದರಿಂದ ವಿದೇಶಿಗನನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಅವನನ್ನು ಒಪ್ಪಿಸಲಾಗಿದೆ ಎಂದು ಸೇನೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
