ಮತ್ತೆ ಕಲ್ಯಾಣ’ಕಾರ್ಯಕ್ರಮಕ್ಕೆ ಕೋಟೆನಗರಿ ಸಜ್ಜು.!

ಚಿತ್ರದುರ್ಗ

   ಆಗಸ್ಟ್ 1 ರಿಂದ ರಾಜ್ಯದಲ್ಲಿ ಸಹಮತ ವೇದಿಕೆವತಿಯಿಂದ ಪ್ರಾರಂಭವಾಗಿರುವ ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಚಿತ್ರದುರ್ಗದಲ್ಲಿ ನಡೆಸಲು ಸಕಲ ಸಿದ್ದತೆಯನ್ನು ಮಾಡಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕರಾದ ಜಿ.ಎಸ್. ಮಂಜುನಾಥ್ ತಿಳಿಸಿದ್ದಾರೆ.

    ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಕಾರ್ಯಕ್ರಮದ ಮಾಹಿತಿ ನೀಡಲು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ಆಶಯದಂತೆ ಮತ್ತೇ ಕಲ್ಯಾಣ ಕಾರ್ಯಕ್ರಮ ನಡೆಯುತ್ತಿದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹಾ ಈ ಕಾರ್ಯಕ್ರಮ ನಡೆದಿದ್ದು ಈ ತಿಂಗಳ ಅಂತ್ಯದವರೆಗೂ ಸಹಾ ನಡೆಯಲಿದೆ ಎಂದರು

    ಚಿತ್ರದುರ್ಗ ನಗರದಲ್ಲಿ ಆ. 15 ರಂದು ಕಾರ್ಯಕ್ರಮ ನಡೆಯಲಿದ್ದು ಇದರ ಯಶಸ್ವಿಗಾಗಿ ಕಳೆದ ಹಲವಾರು ದಿನಗಳಿಂದು ಸಮಿತಿಯ ಪದಾಧಿಕಾರಿಗಳು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಇದಕ್ಕಾಗಿ ರಚನೆ ಮಾಡಲಾದ ಸಮಿತಿಗಳು ತಮ್ಮ ಕಾರ್ಯವನ್ನು ಮಾಡಿವೆ, ಈಗಾಗಲೇ ಕಾಲೇಜುಗಳು ಮತ್ತು ಮಠಾಧಿಶರಿಗೆ, ಗಣ್ಯರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಮಾಡಲಾಗಿದೆ ಎಂದರು.

    ಅಂದು ದೇಶ ಸ್ವಾತಂತ್ರ್ಯ ದಿನಾಚರಣೆಯ ದಿನವಾಗಿದ್ದು, ಈ ಶುಭ ದಿನದಂದು ನಮ್ಮ ಜಿಲ್ಲೆಗೆ ಕಾರ್ಯಕ್ರಮ ಬಂದಿರುವುದು ಸಂತೋಷವಾಗಿದೆ. ಅಂದು ದೇಶದ ಧ್ವಜಾರೋಹಣವಾದ ಮೇಲೆ ನಮ್ಮ ಕಾರ್ಯಕ್ರಮ ಪ್ರಾರಂಭವಾಗಲಿದೆ. ಯಾರಿಂದಲೂ ಸಹಾ ದೇಣಿಗೆಯನ್ನು ವಸೂಲಿ ಮಾಡದೇ ಸಮಿತಿಯಲ್ಲಿನ ಪದಾಧಿಕಾರಿಗಳೇ ಸ್ವಯಂ ಆಗಿ ಹಾಕಿಕೊಂಡು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ .

    ಇತ್ತೀಚೇಗೆ ಉತ್ತರ ಕರ್ನಾಟಕದಲ್ಲಿ ನೆರೆಯಿಂದಾಗಿ ಹಾನಿಯಾಗಿದ್ದು ಇದಕ್ಕೂ ಸಹಾ ಸ್ಪಂದನೆ ಮಾಡಬೇಕಿದೆ ಈ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಯಾವುದೇ ಆಡಂಬರ ಇಲ್ಲದೆ ಅಗತ್ಯವಿದ್ದ ಕಡೆಯಲ್ಲಿ ಮಾತ್ರವೇ ಖರ್ಚು ಮಾಡಿ ಉಳಿತಾಯ ಮಾಡಿ ಸಂತ್ರಸ್ಥರ ಪರಿಹಾರಕ್ಕೆ ನೀಡಬೇಕೆಂದು ಸಹಾ ತೀರ್ಮಾನಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದರು.

    ರಾಜ್ಯದಲ್ಲಿ ಈಗ 18 ಜಿಲ್ಲೆಗಳಲ್ಲಿ ನರೆ ಬಂದು ಜನತೆ ಸಂಕಷ್ಟದಲ್ಲಿದ್ದಾರೆ ಇಂತಹ ಸಮಯದಲ್ಲಿ ಈ ಕಾರ್ಯಕ್ರಮ ಅವಶ್ಯಕತೆ ಇದ್ದೇಯಾ ಎಂದು ಬಹಳಷ್ಟು ಜನತೆ ಪ್ರಶ್ನೆ ಮಾಡಿದ್ದಾರೆ ಆದರೆ ಇದು ಯಾವುದೇ ಸಾಂಸ್ಕøತಿಕ ಕಾರ್ಯಕ್ರಮವಲ್ಲ ಚಿಂತನೆ ಮಾಡುವ ಕಾರ್ಯಕ್ರಮವಾಗಿದೆ ಆದ್ದರಿಂದ ಕಾರ್ಯಕ್ರಮವನ್ನು ನಿಲ್ಲಿಸದೇ ಮಾಡಲಾಗುತ್ತದೆ ಈಗ ಕಾರ್ಯಕ್ರಮ ನಡೆದಿರುವ ಜಿಲ್ಲೆಗಳಲ್ಲಿ ಮಳೆಯಿಂದ ಯಾವುದೇ ರೀತಿಯಿಂದಲೂ ಹಾನಿಯಾಗದೇ ಬರಗಾಲವನ್ನು ನಿರೂಪಿಸುತ್ತಿದೆ ಚಿತ್ರದುರ್ಗದಿಂದ ಮುಂದೆ ನಡೆಯುವಂತ ಜಿಲ್ಲೆಗಳಲ್ಲಿ ಮಳೆ ಮತ್ತು ನೆರೆಯಿಂದ ಹಾನಿಯಾಗಿದೆ ಇದರ ಬಗ್ಗೆ ಶ್ರೀಗಳು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

    ಅಂದು ಬೆಳಿಗ್ಗೆ 9.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಶಾಲೆಯಲ್ಲಿ ಧ್ವಜಾರೋಹಣ ಕಾರ್ಯ ನೇರವೇರಿದ ನಂತರ 10 ಕ್ಕೆ ಸಾಮರಸ್ಯ ನಡಿಗೆಯ ಪಾದಯಾತ್ರೆ ಪ್ರಾರಂಭವಾಗಲಿದೆ ಸಂತೇಪೇಟೆ ವೃತ್ತ,ಬಿ.ಡಿ.ರಸ್ತೆ, ಎಸ್.ಬಿ.ಎಂ.ವೃತ್ತ, ವಾಸವಿ ವೃತ್ತ, ಅಂಬೇಡ್ಕರ್ ವೃತ್ತವನ್ನು ಹಾದು ಮದಕರಿ ವೃತ್ತದ ಮೂಲಕ ಕಾರ್ಯಕ್ರಮ ನಡೆಯುವ ತರಾಸು ರಂಗಮಂದಿರವನ್ನು ತಲುಪಲಿದೆ. ಈ ಸಮಯದಲ್ಲಿ ಸಕಲ ಜಾತಿ ಧರ್ಮದ ಗುರುಗಳು ಸಾರ್ವಜನಿಕರು, ಭಕ್ತಾಧಿಗಳು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

    ಬೆ.11ಕ್ಕೆ ರಂಗಮಂದಿರದಲ್ಲಿ ನಡೆಯುವ ಮುಕ್ತ ಸಂವಾದ ಕಾರ್ಯಕ್ರಮದ ಸಾನಿಧ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ವಹಿಸಲಿದ್ದು, ಸಾಹಿತಿ ಲೋಕೇಶ ಆಗಸನಕಟ್ಟೆ ಸಂವಾದವನ್ನು ನಡೆಸಿಕೊಡಲಿದ್ದಾರೆ. ಪ್ರಾಧ್ಯಾಪಕರಾದ ಡಾ.ಜೆ.ಕರಿಯಪ್ಪ ಮಾಳಿಗೆ ಮತ್ತೇ ಕಲ್ಯಾಣದ ಬಗ್ಗೆ ಮಾತನಾಡಲಿದ್ದಾರೆ.

    ಮಧ್ಯಾಹ್ನ 2.30 ರಿಂದ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಸಾನಿಧ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ವಿಶ್ರಾಂತ ನ್ಯಾಯಾಧೀಶರಾದ ಹೆಚ್,ಬಿಲ್ಲಪ್ಪ ವಹಿಸಲಿದ್ದಾರೆ. ನ್ಯಾಯವಾದಿಗಳಾದ ಪ್ರೋ.ರವಿವರ್ಮ ಕುಮಾರ್ ಕಾಯಕ ಜೀವಿಗಳ ಕ್ರಾಂತಿ ಮತ್ತು ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಶರಣರ ಕೃಷಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ರಾತ್ರಿ 8.30ರಿಂದ ಶ್ರೀ ಪಂಡಿತಾರಾಧ್ಯ ಶ್ರೀಗಳು ರಚನೆ ಮಾಡಿದ ಸಾಣೆಹಳ್ಳಿಯ ಶಿವಸಂಚಾರ ಕಲಾವಿದರ ಅಭಿನಯದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.ಪತ್ರಿಕಾ ಗೋಷ್ಟಿಯಲ್ಲಿ ಸಹಮತ ವೇದಿಕೆಯ ಮತ್ತೇ ಕಲ್ಯಾಣ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap