ಶಿರಾ:
ತಾಲ್ಲೂಕಿನ ಜನರ ಆಪೇಕ್ಷಿತ ಹಾಗೂ ಅತ್ಯಂತ ಜರುರಾಗಿ ಕೈಗೊಳ್ಳಬೇಕಾಗಿರುವ ಅನೇಕ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕಿದ್ದು ಕಳೆದ 12 ವರ್ಷಗಳ ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿ ಜನತೆಯ ಕನಸಿನ ಕಾಮಗಾರಿಯಾದ ಸೇತುವೆ ನಿರ್ಮಾಣಕ್ಕೆ 3.75 ಕೊಟಿ ರೂಗಳ ಅನುದಾನ ಮಂಜೂರಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.
ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಯಲದಬಾಗಿಯ ಹಳ್ಳಕ್ಕೆ ಸರ್ಕಾರದಿಂದ ಮಂಜೂರಾದ ಕೋಟ್ಯಾಂತರ ರೂಗಳ ಬೃಹತ್ ಸೇತುವೆ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಳ್ಳಂಬೆಳ್ಳ ಕೆರೆಗೆ ಹರಿದು ಬರುವ ಯಲದಬಾಗಿ ಹಳ್ಳದ ಸೇತುವೆಯು ವ್ಯಾಪಕ ಮಳೆಯಿಂದ ಹಾಗೂ ಅಕ್ರಮ ಮರಳು ಗಣಿಗಾರಿಕೆಯಿಂದ ಕುಸಿದು ಹೋಗಿತ್ತು. ಕಳೆದ 12 ವರ್ಷಗಳಿಂದಲೂ ಈ ಭಾಗದ ಜನರಿಗೆ ರಸ್ತೆ ಸಂಪರ್ಕವೇ ಕಡಿದು ಹೋಗಿತ್ತು. ಇದನ್ನು ಮನಗಂಡ ನಾನು ಶಾಸಕನಾಗಿ ಆಯ್ಕೆಗೊಂಡ ಕೂಡಲೇ ಮುಖ್ಯಮಂತ್ರಿಗಳಿಗೆ ಒತ್ತಡ ತಂದು ಸೇತುವೆ ನಿರ್ಮಾಣದ ಕಾಮಗಾರಿಗೆ ಅನುದಾನ ಹಾಕಿಸಿದ್ದು ಈ ಭಾಗದ ಜನರ ಬೇಡಿಕೆ ಈಡೇರಿದಂತಾಗಿದೆ ಎಂದರು.
ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ನಾನು ಸುಮ್ಮನೇ ಕುಳಿತಿಲ್ಲ. ಮುಖ್ಯಮಂತ್ರಿಗಳ ಹಾಗೂ ಲೋಕೋಪಯೋಗಿ ಸಚಿವರ ಬೆನ್ನು ಹತ್ತಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕೋಟ್ಯಾಂತರ ರೂಗಳ ಅನುದಾನ ಮಂಜೂರು ಮಾಡಿಸಿದ್ದು ಈ ಎಲ್ಲಾ ಕಾಮಗಾರಿಗಳು ಇದೀಗ ಆರಂಭಗೊಳ್ಳುತ್ತಿವೆ. ಅನೇಕ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ಅತಿ ಜರೂರಾಗಿ ಕೈಗೊಳ್ಳಲಾಗುವುದು ಎಂದು ಶಾಸಕ ಸತ್ಯನಾರಾಯಣ್ ತಿಳಿಸಿದರು.ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಮುದಿಮಡು ಮಂಜುನಾಥ್, ಜಿಲ್ಲಾ ಜೆ.ಡಿ.ಎಸ್. ಪ್ರ. ಕಾರ್ಯದರ್ಶಿ ವೀರೇಂದ್ರ, ಹೊನ್ನೇಶ್‍ಗೌಡ, ಹುಂಜಿನಾಳು ರಾಜಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








