ಬೆಂಗಳೂರು
ಮಾದಕವಸ್ತವಿನ ಜೊತೆಗೆ ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಹಾಗೂ ಗಾಂಜಾ ಮಾರುತ್ತಿದ್ದ ಇಬ್ಬರು ಹಳೆಯ ಆರೋಪಿಗಳು ಸೇರಿ ಒಟ್ಟು ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾದ ಅನ್ಬರ ರಾಜ್ಯದ ಆಂಟೋನಿ ಟೆಬುಕುವ,ವಿದ್ಯಾರಣ್ಯಪುರದ ಮೌನಸ್, ಯಲಹಂಕ ಡೌನ್ ಬಜಾರ್‍ನ ಶಾನ್ ನವಾಜ್ ಹಾಗು ಹೆಗಡೆನಗರದ ಮಂಜುನಾಥ ಅಲಿಯಾಸ್ ಗಾಂಜಾ ಮಂಜ ನನ್ನು ಬಂಧಿಸಿ 2 ಕೆಜಿ 860 ಗ್ರಾಂ ಗಾಂಜಾ, 32 ಎಂಡಿಎಂಎ ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ನೈಜೀರಿಯನ್ ಸೆರೆ
ಕೊತ್ತನೂರು ಪೊಲೀಸರು, ನೈಜೀರಿಯಾದ ಅನ್ಬರ ರಾಜ್ಯದ ಆಂಟೋನಿ ಟೆಬುಕುವ (36) ನನ್ನು ಬಂಧಿಸಿ, ಒಂದು ಕೆಜಿ 120 ಗ್ರಾಂ ಗಾಂಜಾ, 32 ಎಂಡಿಎಂಎ ಮಾದಕ ಮಾತ್ರೆಗಳು, 2 ಮೊಬೈಲ್, ಒಂದು ಸಾವಿರ ನಗದು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು, ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದು, ರಾಮಮೂರ್ತಿ ನಗರದ ಕಾಲೇಜೊಂದರಲ್ಲಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿ, ಗಾಂಜಾ, ಮಾದಕ ಮಾತ್ರೆಗಳ ಮಾರಾಟದಲ್ಲಿ ತೊಡಗಿದ್ದ.
ದೊಡ್ಡಗುಬ್ಬಿ ಮುಖ್ಯರಸ್ತೆಯ ವಿಜಯ್ ವಿಠ್ಠಲ ಕಾಲೇಜಿನ ಬಳಿ ಹೊಂಡಾ ಆಕ್ಟೀವಾ ಸ್ಕೂಟರ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸುತ್ತಿದ್ದ ಕೊತ್ತನೂರು ಪೆಲೀಸ್ ಇನ್ಸ್‍ಪೆಕ್ಟರ್ ಸುಬ್ರಮಣ್ಯಸ್ವಾಮಿ, ಮತ್ತವರ ಸಿಬ್ಬಂದಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಆರೋಪಿಯ ವೀಸಾ ಅವಧಿ ಮುಗಿದಿದ್ದರೂ, ಅಕ್ರಮವಾಗಿ ನಗರದಲ್ಲಿ ಉಳಿದುಕೊಂಡಿದ್ದು, ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
