ಬೋನಿಗೆ ಬಿದ್ದ ನಾಲ್ಕನೆ ಚಿರತೆ..!

ಕೊರಟಗೆರೆ

    ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ರೈತರ ತೋಟದ ಮನೆಗಳಲ್ಲಿ ಸಾಕುತ್ತಿರುವ ಕುರಿ, ಮೇಕೆಗಳ ಮೇಲೆ ದಾಳಿ ಮಾಡಿ ಬೇಟೆ ಆಡುತ್ತಿದ್ದ ನಾಲ್ಕನೆ ಚಿರತೆಯು ಅರಣ್ಯ ಇಲಾಖೆ ಬೋನಿಗೆ ಬಿದ್ದು ಚೀರಾಟ ನಡೆಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

     ತಾಲ್ಲೂಕಿನ ಕಸಬಾ ಹೋಬಳಿ ಹುಲಿಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಮತ್ತು ಓಬಳದೇವರಹಳ್ಳಿ ತಾಂಡದ ಬಳಿ ಕೇವಲ 30 ದಿನದ ಅಂತರದಲ್ಲಿ ವಾರಕ್ಕೆ ಒಂದರಂತೆ ನಾಲ್ಕು ಚಿರತೆಗಳು ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದ್ದು ರೈತರು ನಿಟ್ಟುಸಿರು ಬಿಡುವಂತಾಗಿದೆ.

      ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಓಬಳದೇವರಹಳ್ಳಿ ಸಮೀಪದ ಬೆಟ್ಟದ ಕೆಳಗೆ ಚಿರತೆ ಸೆರೆಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಆಹಾರ ಹುಡುಕಿ ಬಂದಿದ್ದ ನಾಲ್ಕನೆ ಚಿರತೆ ಸೋಮವಾರ ರಾತ್ರಿ ಬಿದ್ದು ಚೀರಾಟ ನಡೆಸಿದೆ. ನಾಲ್ಕನೆ ಚಿರತೆಯನ್ನು ನೋಡಿದ ಗ್ರಾಮಸ್ಥರು ಇನ್ನೆಷ್ಟು ಚಿರತೆಗಳು ಬೆಟ್ಟದಲ್ಲಿ ಇವೆಯೊ ಎಂದು ಭಯಬೀತರಾಗಿದ್ದಾರೆ.

     ರೈತರ ಜಮೀನು ಮತ್ತು ಬೆಟ್ಟದಲ್ಲಿ ಮತ್ತೆರಡು ಚಿರತೆಗಳಿವೆ ಎಂಬ ಸ್ಥಳೀಯರ ಒತ್ತಾಯದ ಮನವಿ ಮೇರೆಗೆ, ಅರಣ್ಯ ಇಲಾಖೆಯವರು ಗೌರಗಾನಹಳ್ಳಿ ರೈತರ ಜಮೀನು ಮತ್ತು ಓಬಳದೇವರಹಳ್ಳಿ ಬೆಟ್ಟದ ಕೆಳಗೆ ತಲಾ ಎರಡು ಬೋನುಗಳನ್ನು ಪುನಃ ಇಟ್ಟು ಚಿರತೆ ಸೆರೆಹಿಡಿಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ.

     ಸ್ಥಳಕ್ಕೆ ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿ ನಾಗರಾಜು, ಸಿಬ್ಬಂದಿ ನರಸಿಂಹಯ್ಯ, ಬಾಬು, ಹನುಮಂತಪ್ಪ, ಬಾದಪ್ಪ, ಮಂಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಬೋನಿನಲ್ಲಿ ಸೆರೆಯಾದ ಚಿರತೆಯನ್ನು ದೂರದ ಮತ್ತೊಂದು ಅರಣ್ಯಕ್ಕೆ ಇಲಾಖೆ ಸಿಬ್ಬಂದಿ ರವಾನಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link