ಮಧುಗಿರಿ:
ಮಾಂಸ ಮತ್ತು ಚರ್ಮದ ಆಸೆಗಾಗಿ ನರಿಗಳನ್ನು ಬೇಟೆಯಾಡಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ಬೆಳಗ್ಗೆ ಬಂಧಿಸಿದ್ದಾರೆ ಘಟನೆ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ತಿಮ್ಲಾಪುರ ಅರಣ್ಯದ ಸಮೀಪ ಸೋಮವಾರ ರಾತ್ರಿ ಬೇಟೆಯಾಡಿದ್ದಾರೆಂದು ಹೇಳಲಾಗು ತ್ತಿರುವ 4ನರಿಗಳ ಕಳೇಬರಗಳನ್ನು ಚೀಲದಲ್ಲಿ ಕಟ್ಟಿಕೊಂಡು ಗೌರಿಬಿದನೂರು ರಸ್ತೆಯಲ್ಲಿನ ವೀರಣ್ಣನ ಹಳ್ಳಿಯ ತಾಂಡದ ಸಮೀಪ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಗೌರಿಬಿದನೂರು ತಾಲ್ಲೂಕಿನ ಕೋಟಾಲದಿನ್ನೆಯ ಹಕ್ಕಿ ಪಿಕ್ಕಿ ಕಾಲೋನಿಯ ವಾಸಿಗಳಾದ ಚೆಲಕು (30) ಮತ್ತು ಪಶುಪತಿ (35) ಎಂಬುವರನ್ನು ಬಂಧಿಸಿ ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್‍ಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾಡು ಪ್ರಾಣಿಗಳ ಮಾಂಸವನ್ನು ಮನುಷ್ಯರು ತಿಂದರೆ ಖಾಯಿಲೆಗಳು ವಾಸಿಯಾಗುತ್ತವೆ ಎಂಬಾ ಗಾಳಿ ಸುದ್ದಿಗಳು ಅಲ್ಲಲ್ಲಿ ಹರಡುತ್ತಿರುವುದರಿಂದ ಅದೆಷ್ಟೋ ಮೂಕ ಕಾಡು ಪ್ರಾಣಿಗಳು ಮಾನವನ ದುರಾಸೆಗೆ ಬಲಿಯಾಗುತ್ತಿವೆ. ಅರಣ್ಯ ಇಲಾಖೆಯವರು ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗ ಬೇಕು ಹಾಗೂ ನಾಗರೀಕರಿಗೆ ಇಲಾಖೆ ವತಿಯಿಂದ ಅರಿವು ಮೂಡಿಸುವ ಕಾರ್ಯಗಳಾಗಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಪ್ರಭಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್‍ಯರಡೋಣೆ, ಚರಣ್, ಉಪ ಅರಣ್ಯಾಧಿಕಾರಿ ಸೋಮಶೇಖರ್, ಬಿ.ಎನ್.ಮುತ್ತುರಾಜ್, ಅರಣ್ಯ ವೀಕ್ಷಕ ಪ್ರದೀಪ್ ಪಾಟೀಲ್, ಅರಣ್ಯ ರಕ್ಷಕ ಚಂದ್ರಶೇಖರ್, ಗ್ರಾಮಸ್ಥರಾದ ರಮೇಶ್ ಬಾಬು, ರಂಗನಾಥ್, ದಾಸಪ್ಪ, ಸುರೇಶ್ ಬಾಬು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ