ಶಿರಾ
ನಗರದಲ್ಲಿ ಗೋ ಗ್ಯಾಸ್ ಕಂಪನಿಯೊಂದು ವಾಹನಗಳಿಗೆ ಗ್ಯಾಸ್‍ನ್ನು ಮಾರಾಟ ಮಾಡುತ್ತಿದ್ದು, ಈ ಮಾರಾಟದಲ್ಲಿ ವ್ಯಾಪಕ ವಂಚನೆ ಮಾಡಲಾಗುತ್ತಿದೆ ಎಂದು ಖಂಡಿಸಿ ತಾ.ಆಟೋ ಚಾಲಕರ ಸಂಘ ಶನಿವಾರ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿತು.
ಕಳೆದ ಹಲವು ವರ್ಷಗಳಿಂದಲೂ ನಗರದಲ್ಲಿ ವಾಹನಗಳಿಗೆ ಗ್ಯಾಸ್ ಬಂಕ್ ಮೂಲಕ ಗ್ಯಾಸನ್ನು ಮಾರಾಟ ಮಾಡಲಾಗುತ್ತಿದೆ. ಅಳತೆಯಲ್ಲಿ ಹಾಗೂ ಮಾರಾಟದ ದರದಲ್ಲಿ ವ್ಯಾಪಕ ಮೋಸ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಆಟೋ ಚಾಲಕರು ಗ್ಯಾಸ್ ಬಂಕಿಗೆ ತೆರಳಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
