ಬಿಸಿಯೂಟ ಆಹಾರ ಸಾಮಗ್ರಿ ದುರೂಪಯೋಗ

ದಾವಣಗೆರೆ:

         ಇಲ್ಲಿನ ಶಾಂತಿನಗರದಲ್ಲಿರುವ ವಿನಾಯಕ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಕ್ಕಳ ಬಿಸಿಯೂಟದ ಆಹಾರ ಸಾಮಗ್ರಿಯನ್ನು ದುರೂಪಯೋಗ ಪಡೆಸಿಕೊಳ್ಳುತ್ತಿದ್ದಾರೆಂದು ಕರ್ನಾಟಕ ಕದಂಬ ಸೇನೆಯ ರಾಜ್ಯಾಧ್ಯಕ್ಷ ಮಾಗಡಿ ಹೆಚ್.ದ್ವಾರಕೀಶ್ ಆರೋಪಿಸಿದ್ದಾರೆ.

        ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯ ಮುಖ್ಯ ಶಿಕ್ಷಕರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಅಲ್ಲದೆ, ಮಕ್ಕಳ ಹಾಜರಾತಿ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸರ್ಕಾರ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಬಿಸಿಯೂಟ ನೀಡುತ್ತಿದ್ದರೆ, ಈ ಮುಖ್ಯ ಶಿಕ್ಷಕ ಸುಳ್ಳು ಲೆಕ್ಕ ಕೊಡುವ ಮೂಲಕ ಮಕ್ಕಳ ಬಿಸಿಯೂಟ ಆಹಾರ ಸಾಮಗ್ರಿಯನ್ನು ದುರುಪಯೋಗ ಪಡೆಸುಕೊಳ್ಳುತ್ತಿದ್ದಾರೆಂದು ದೂರಿದರು.

         ಈ ಶಾಲೆಯು ಸಾಕಷ್ಟು ಅವ್ಯವಸ್ಥೆಯಿಂದ ಕೂಡಿದ್ದು, ಶಾಲಾ ಕೊಠಡಿಗಳು ದುರಸ್ತಿಗೆ ಬಂದಿದ್ದು, ಕಿಟಕಿ, ಬಾಗಿಲುಗಳು ಮುರಿದು ಹೋಗಿವೆ. ಎಲ್ಲಾ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ, ಪಾಠ ಮಾಡುತ್ತಾರೆ. ಈ ಎಲ್ಲಾ ವಿಚಾರಗಳೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಗಮನಕ್ಕೂ ಬಂದಿದ್ದು, ಶಾಲೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಎನ್.ಹರೀಶರಾವ್ ಗುಜ್ಜರ್, ನವೀನ, ದಾದಾಪೀರ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap