ಬೆಂಗಳೂರು
ಸಾಫ್ಟ್‍ವೇರ್ ಕಂಪನಿಗಳಲ್ಲಿ ಕಾಲ್ ಸೆಂಟರ್‍ಗಳಲ್ಲಿ ಹೆಚ್ಚಿನ ವೇತನದ ಉದ್ಯೋಗ ಕೊಡಿಸುವುದಾಗಿ ಕರೆಸಿಕೊಂಡು ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡಿ ಒಪ್ಪದ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಶ್ರವಣಬೆಳಗೊಳದ ದಿನೇಶ್, ಕೆ.ಆರ್ ಪೇಟೆ ಮೂಲದ ಪ್ರಜ್ವಲ್ ಹಾಗೂ ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ, ನೆಲಮಂಗಲದ ಕುಣಿಗಲ್ ಬೈಪಾಸ್‍ನಲ್ಲಿರುವ ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೂಡಿಹಾಕಿದ್ದ ಮೂವರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.
ಆನ್‍ಲೈನ್ ಅಪ್ಲಿಕೇಷನ್ ಮೂಲಕ ಯುವ ಜನತೆಯನ್ನು ಸೆಳೆಯಲಾಗುತ್ತದೆ.ಈ ಯುವಕರಿಗೆ ಕಾಲ್ ಮಾಡಿ ಲೈಂಗಿಕತೆಗೆ ಪ್ರಚೋದನೆ ಮಾಡುವ ಕೆಲಸವನ್ನು ಮಾಡುವಂತೆ ಆರೋಪಿಗಳು ಯುವತಿಯರಿಗೆ ಕಿರುಕುಳ ನೀಡುತ್ತಿದ್ದರು. ಈ ಕೆಲಸ ನಾನು ಮಾಡುವುದಿಲ್ಲ ಎನ್ನುವ ಯುವತಿಯರಿಗೆ ಕಿರುಕುಳ ನೀಡಿ, ವುಡ್‍ಲ್ಯಾಂಡ್ ಹೋಟೆಲ್‍ನಲ್ಲಿ ಕೂಡಿಹಾಕಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ, ಮೂರು ಜನ ಯುವತಿಯರನ್ನು ರಕ್ಷಿಸಿದ್ದಾರೆ.ಕೃತ್ಯದಲ್ಲಿ ದೊಡ್ಡ ಜಾಲವೇ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಕಿಂಗ್‍ಪಿನ್‍ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








