ಹರಪನಹಳ್ಳಿ,
ಬಿಎಸ್ ಎಸ್ ಎಂಟರಪ್ರೈಸಸ್ ಹೆಸರಲ್ಲಿ ಲಾಟರಿ ಮೂಲಕ ಗೃಹಯೋಗಿ ವಸ್ತುಗಳನ್ನು ನೀಡುವುದಾಗಿ ವಿವಿಧ ಹಳ್ಳಿಗಳಲ್ಲಿ ಹಣ ಪಾವತಿಸಿತಿಕೊಂಡು ಸಾರ್ವಜನಿಕರನ್ನು ವಂಚಿಸಿದ ಘಟನೆ ತಾಲೂಕಿನಲ್ಲಿ ಜರುಗಿದೆ.ಪ್ರಶಾಂತ ಹಾಗೂ ಭಾಗ್ಯ ಎಂಬುವ ಅಪರಿಚಿತರು ಹರಪನಹಳ್ಳಿ, ಜಗಳೂರು ಹಾಗೂ ಹೂವಿನಹಡಗಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಬಿಎಸ್ ಎಸ್ ಎಂಟರಪ್ರೈಸಸ್ ಹೆಸರಿನಲ್ಲಿ ಸ್ಕೀಂ ಮಾಡಿ 42 ಗೃಹಪಯೋಗಿ ವಸ್ತುಗಳನ್ನು ಹೆಸರಿಸಿ ನೂರು ರುಪಾಯಿ ಪಡೆದು ಇಲ್ಲಿಯ ಕೊಟ್ಟೂರು ಸರ್ಕಲ್ ವಿಳಾಸ ವಿರುವ ಕಾರ್ಡನ್ನು ನೀಡಿದ್ದಾರೆ.
ಸ್ವಲ್ಪ ದಿನಗಳ ನಂತರ 700 ರು.ಗಳನ್ನು ಪಡೆದು ರಸೀದಿ ನೀಡಿದ್ದಾರೆ. ಮಾ.4-2-19 ರಂದು ಹರಪನಹಳ್ಳಿ ಪಟ್ಟಣದ ತೆಗ್ಗಿನಮಠದ ಬಳಿ ಡ್ರಾ ಮಾಡಲಾಗುವುದು ಎಂದು ಅವರು ಜನರಿಗೆ ಹೇಳಿದ್ದಾರೆ.
700 ರು. ಪಾವತಿಸಿ ಕಾರ್ಡ ತೆಗೆದುಕೊಂಡಿದ್ದ ಜನತೆ ಚೀಟಿ ಡ್ರಾ ಮಾಡುತ್ತಾರೆ, ನಮಗೆ ಏನಾದರೂ ಗೃಹಪಯೋಗಿ ವಸ್ತುಗಳು ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಮಾ.,4 ರಂದು ಸೋಮವಾರ ಹರಪನಹಳ್ಳಿ ಪಟ್ಟಣದ ತೆಗ್ಗಿನಮಠದ ಬಳಿ ಕಾರ್ಡ ನೊಂದಿಗೆ ಆಗಮಿಸಿದ್ದಾರೆ.
ಆದರೆ ಇಲ್ಲಿ ವಸ್ತುಗಳನ್ನು ಡ್ರಾ ಮಾಡುವವರ ಪತ್ತೆ ಇಲ್ಲದ್ದು ಕಂಡು ಜನರು ಕಂಗಾಲಾಗಿದ್ದಾರೆ. ಕೊಟ್ಟೂರು ರಸ್ತೆಯಲ್ಲಿರುವ ಆರಂಭಿಸಿದ್ದ ಕಚೇರಿ ಮುಚ್ಚಲಾಗಿದೆ. ಅವರು ನೀಡಿದ ದೂರವಾಣಿ ಸಂಖ್ಯೆಗಳು ಸ್ವಿಚ್ ಆಪ್ ಆಗಿವೆ. ಹಣ ಕಳೆದುಕೊಂಡು ಮೋಸ ಹೋದ ಜನತೆ ಇಲ್ಲಿಯ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕಲ್ಲಪ್ಪ, ಕೆಂಚಮನಾಗತಿಹಳ್ಳಿ, ಅವರು ಒಂದು ತಿಂಗಳ ಕೆಳಗೆ ಒಬ್ಬ ಹುಡುಗ, ಹುಡುಗಿ ಬಂದು ಒಂದು ನೂರು ರು.ತೆಗೆದುಕೊಂಡು ಕಾರ್ಡ ನೀಡಿ, 15 ದಿನದ ನಂತರ ಪುನಃ ಆಗಮಿಸಿ 700 ರು. ಪಡೆದು ಮಾ.4 ರಂದು ಹರಪನಹಳ್ಳಿ ತೆಗ್ಗಿನಮಠದ ಬಳಿ ಡ್ರಾ ಇದೆ ಎಂದು ಹೇಳಿದ್ದರು. ಅದಕ್ಕಾಗಿ ನಾವು ಇಲ್ಲಿಗೆ ಬಂದರೆ ಇಲ್ಲಿ ಯಾರೂ ಇಲ್ಲ, ನಾವು ಮೋಸ ಹೋಗಿದ್ದೇವೆ ಎಂದರು