ಬೆಂಗಳೂರು
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್)ಕಾರ್ಖಾನೆಯ ಕಾರು ಚಾಲಕ ಎಂದು ನಂಬಿಸಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಗಳ ದೋಚಿ ದುಷ್ಕರ್ಮಿಯೊಬ್ಬ ಪರಾರಿಯಾಗಿದ್ದಾನೆ.
ಬಿಇಎಲ್‍ನ ಕಂಪನಿಯ ಆಡಳಿತ ನಿರ್ದೇಶಕರ ಕಾರು ಚಾಲಕ ಎಂದು ಹೇಳಿಕೊಂಡು ನಮ್ಮ ಕಂಪನಿಯಲ್ಲಿ ಕೆಲಸ ಕೊಡಿಸಲಿದ್ದೇನೆ ಎಂದು ಸುಮಾರು 14 ಮಂದಿಯಿಂದ ಲಕ್ಷಾಂತರ ಹಣ ದೋಚಿ ಪರಾರಿಯಾಗಿರುವ ನಯಾಜ್ ಪಾಷಾನಿಗಾಗಿ ವಂಚಕನ ವಿರುದ್ಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತೀವ್ರ ಶೋಧ ನಡೆಸಿದ್ದಾರೆ.
ಮೊದಲಿಗೆ 5 ಲಕ್ಷ ಹಣ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಮೊದಲು ಲಿಸ್ಟ್ ನಲ್ಲಿ ನಿಮ್ಮ ಹೆಸರು ಪ್ರಕಟವಾದರೆ 1.50 ಲಕ್ಷ ಕೊಡಿ ನೇಮಕಾತಿ ಬಳಿಕ ಬಾಕಿ ಹಣ ನೀಡುವಂತೆ ಹೇಳಿದ್ದು ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಕೊಟ್ಟ ಹಣ ಸಿಕ್ಕಿದ ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದಾನೆ.
ವಾಟ್ಸಪ್ ಮೂಲಕ ಬಿಇಎಲ್ ಫ್ಯಾಕ್ಟರಿಯ ಲೇಟರ್ ಹೇಡ್‍ನಲ್ಲಿ ನಕಲಿ ಲಿಸ್ಟ್ ತೋರಿಸಿ 2018 ನವಂಬರ್ 8ಕ್ಕೆ ಸಂದರ್ಶನಕ್ಕೆ ಕರೆಯಲಾಗಿದೆ ಎಂದು ಹಣ ಪಡೆದಿದ್ದಾನೆ. ಬಳಿಕ ನಯಾಜ್ ಮಹಿಳೆಯೊಬ್ಬಳಿಂದ ಕರೆ ಮಾಡಿಸಿ ಸಂದರ್ಶನದ ದಿನಾಂಕವನ್ನು 2019 ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ಸುಳ್ಳು ಹೇಳಿಸಿದ್ದನು. ನಂತರ ಜ.28ಕ್ಕೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಹಣ ಕಳೆದುಕೊಂಡ ಗಂಗಾಧರ್ ಹೇಳಿದ್ದಾರೆ.
ಈ ಬಗ್ಗೆ ಅನುಮಾನ ಬಂದು ಬಿಇಎಲ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.ಇನ್ನೂ ನಯಾಜ್ ಇದುವರೆಗೂ 14 ಜನರಿಂದ ಸುಮಾರು 21 ಲಕ್ಷ ಹಣ ಪೀಕಿದ್ದಾನೆ. ಈ ಸಂಬಂಧ ವಂಚನೆಗೊಳಗಾದವರು ಜಾಲಹಳ್ಳಿ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.