ಹುಳಿಯಾರಿನಿಂದ ಉಚಿತ ಪ್ರಯಾಣಕ್ಕೆ ವ್ಯವಸ್ಥೆ

ಹುಳಿಯಾರು:

    ಲಾಕ್‍ಡೌನ್ ಮುಂಚಿತವಾಗಿ ಅನ್ಯ ಕಾರ್ಯ ನಿಮಿತ್ತ ಹುಳಿಯಾರಿಗೆ ಆಗಮಿಸಿದ್ದವರನ್ನು ಅವರವರ ಊರಿಗೆ ಕಳುಹಿಸಿಕೊಡಲು ಚಿಕ್ಕನಾಯಕನಹಳ್ಳಿ ತಾಲೂಕು ಆಡಳಿತದವತಿಯಿಂದ ಹುಳಿಯಾರು ಬಸ್ ನಿಲ್ದಾಣದಲ್ಲಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಕಂದಾಯ ತನಿಖಾಧಿಕಾರಿ ಮಂಜುನಾಥ್ ಅವರ ನೇತೃತ್ವದ ತಂಡ ಪ್ರಯಾಣಿಕರು ಪ್ರಯಾಣಿಸಬೇಕಾದ ಊರು, ಮೊಬೈಲ್ ನಂಬರ್, ವಿಳಾಸ ಮತ್ತಿತರ ವಿವರಗಳನ್ನು ಎಂಟ್ರಿ ಮಾಡಿಕೊಂಡು ಜನರು ತೆರಳಬೇಕಿದ್ದ ಸ್ಥಳಗಳಿಗೆ ತೆರಳಲು ಅವಕಾಶ ಮಾಡಿಕೊಡಲಾಯಿತು.

    ಸದ್ಯ ರಾಯಚೂರು, ಹಾವೇರಿ, ಬಿಜಾಪುರ ಹಾಗೂ ಬೆಂಗಳೂರಿಗೆ ತೆರಳುವ 12 ಪ್ರಯಾಣಿಕರಿಗೆ ಅಧಿಕಾರಿಗಳೇ ಬಸ್‍ಗಳಿಗೆ ಹತ್ತಿಸಿ ಸುಖಕರವಾಗಿ ತಮ್ಮತಮ್ಮ ಊರುಗಳನ್ನು ಸೇರಿಕೊಳ್ಳಿ ಎಂದು ಆಶಿಸಿ ಕಳುಹಿಸಿಕೊಟ್ಟರು.ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀನಿವಾಸ್, ಈಶ್ವರ್, ಚಂದ್ರು, ಮಂಜುನಾಥ್ ಸೇರಿದಂತೆ ಕೆಲ ಗ್ರಾಮ ಸಹಾಯಕರು ಉಪಸ್ಥಿತರಿದ್ದು ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ