ಹಿರಿಯೂರು :
ನರೇಂದ್ರಮೋದಿಯವರ ಕನಸಿನ ಯೋಜನೆಯಾದ ಉಜ್ವಲ ಯೋಜನೆ ಅಡಿಯಲ್ಲಿ ದೇಶದ ನಾಲ್ಕುಕೋಟಿ ಬಡವರಿಗೆ ಅಡುಗೆಅನಿಲ ಸಂಪರ್ಕ ಕಲ್ಪಿಸಲಾಗಿದೆ ಎಂಬುದಾಗಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮುಖ್ಯಮಂತ್ರಿಗಳ ಅನಿಲಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಡುಗೆ ಅನಿಲದ ಸ್ಟೌವ್ ಮತ್ತು ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು.
ಕಟ್ಟಿಗೆ ಅಥವಾ ಸೀಮೆಎಣ್ಣೆಯಲ್ಲಿ ಅಡುಗೆ ತಯಾರಿಸುವುದು ಎಷ್ಟು ಕಷ್ಟ ಎಂಬ ಸತ್ಯ ಮಹಿಳೆಯರಿಗೆ ಗೊತ್ತು. ಅಂತಹವರ ಆರೋಗ್ಯ ಸಂರಕ್ಷಣೆ ಮಾಡಬೇಕೆಂದು ಭಾವಿಸಿ ಮೋದಿಯವರು ಈ ಯೋಜನೆ ಜಾರಿಗೊಳಿಸಿದ್ದಾರೆ. ಇದೇ ಯೋಜನೆಯನ್ನು ಹಿಂದಿನ ಸರ್ಕಾರ ಅನಿಲಭಾಗ್ಯ ಎಂದು ಜಾರಿಗೊಳಿಸಿದೆ ಎಂದು ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಚಂದ್ರಪ್ಪ , ಸಿದ್ದರಾಮಯ್ಯ ಅವರು ಜಾರಿಗೊಳಿಸಿದ ಹಲವು ಜನಪರ ಯೋಜನೆಗಳಲ್ಲಿ ಅನಿಲ ಭಾಗ್ಯ ಯೋಜನೆಯೂ ಒಂದಾಗಿದ್ದು, ಬಡವರು ಅಡುಗೆ ಅನಿಲವನ್ನು ಎಚ್ಚರದಿಂದ ಬಳಸಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಇಮ್ರಾನಬಾನು, ಸದಸ್ಯರಾದ ಪ್ರೇಮ್‍ಕುಮಾರ್, ಟಿ. ಚಂದ್ರಶೇಖರ್, ವನಿತಾ, ದಾದಾಪೀರ್ , , ಯಶವಂತರಾಜು, ಚಂದ್ರಕುಮಾರ್, ಕೆ.ಓಂಕಾರಪ್ಪ, ಗ್ಯಾಸ್ ವಿತರಕರಾದ ಗಂಗಾಧರ್, ಚಂದ್ರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
