ತುಮಕೂರು
ಸಿದ್ದರಾಮೇಶ್ವರ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ದಿ.ಜಿ.ಎಸ್.ಶಿವನಂಜಪ್ಪನವರ 90ನೇ ವರ್ಷದ ಜನ್ಮದಿನದ ಸಮರಣಾರ್ಥವಾಗಿ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಿದ್ದರಾಮೇಶ್ವರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಬಿಬಿ ಮಹದೇವಯ್ಯ ತಿಳಿಸಿದರು.
ನಗರದ ವೀರಶೈವ ಗುರುಕುಲ ವಿದ್ಯಾರ್ಥಿನಿಯದ ಕಚೇರಿಯಲ್ಲಿ ಏರ್ಪಾಟಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಿಂಗೈಕ್ಯ ಶಿವನಂಜಪ್ಪನವರು ಮಾಜಿ ಶಾಸಕರಾಗಿ ಅನೇಕ ಉತ್ತಮ ಕಾರ್ಯಗಳನ್ನು ಮಾಡಿ ಜನಪ್ರಿಯರಾಗಿದ್ದರು. ನಂತರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾಗಿಯೂ ಉನ್ನತ ಸೇವೆ ಸಲ್ಲಿಸಿದ್ದಾರೆ. ಅವರ 90ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಯ ಸಹಯೋಗದಲ್ಲಿ ನ.28ರಂದು ಬೆಳಗ್ಗೆ ಬಿ.ಎಚ್.ರಸ್ತೆಯ ಗುರುಕುಲ ವಿದ್ಯಾರ್ಥಿನಿಲಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಶಿಬಿರದ ಉದ್ಘಾಟನೆಯನ್ನು ಮಾಜಿ ಸಂಸದ ಜಿ.ಎಸ್.ಬಸವರಾಜು ನೆರವೇರಿಸಲಿದ್ದು, ವಿಶೇಷ ಆಹ್ವಾನಿತರಾಗಿ ವೀರಶೈವ ಗುರುಕುಲ ನಿಲಯದ ಮುಖ್ಯಸ್ಥರುಗಳು ಹಾಗೂ ಸಹಕಾರ ಬ್ಯಾಂಕಿನ ಮುಖ್ಯಸ್ಥರುಗಳು ಆಗಮಿಸಲಿದ್ದಾರೆ. ಹಿರಿಯ ಹೃದಯ ರೋಗ ತಜ್ಞ ಡಾ.ವೆಂಕಟೇಶ್ ಟಿ.ಕೆ ಅವರು ಆರೋಗ್ಯದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಈ ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಕೀಲು ಮೂಳೆ, ಬೆನ್ನು ಹುರಿ ಸಂಬಂಧಿ ಕಾಯಿಲೆ ಮತ್ತು ಸಕ್ಕರೆ ಕಾಯಿಲೆ ಸಂಬಂಧಿಸಿದಂತೆ ತಪಾಸಣೆ ಮಾಡಲಾಗುವುದು. ಇದರಲ್ಲಿ ರಕ್ತ ಪರೀಕ್ಷೆ, ಬಿಪಿ ಪರೀಕ್ಷೆ, ಇಸಿಜಿಯನ್ನು ಸಿದ್ದಗಂಗಾ ಡಯಾಗ್ನಸ್ಟಿಕ್ ಸೆಂಟರ್ ನವರು ನಡೆಸಿಕೊಡಲಿದ್ದಾರೆ. ವಾಸನ್ ಐ ಕೇರ್‍ನಿಂದ ಕಣ್ಣಿಗೆ ಸಂಬಂಧ ಪಟ್ಟ ಪರೀಕ್ಷೆಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಹಕಾರಿ ಬ್ಯಾಂಕ್‍ನ ವೃತ್ತಿಪರ ನಿರ್ದೇಶಕ ಬಿ.ಎಂ.ಶಿವರುದ್ರಯ್ಯ, ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿ ಎನ್.ಜಯಣ್ಣ, ನಿರ್ದೇಶಕ ಎಸ್.ಸಿದ್ದಪ್ಪ ಸೇರಿದಂರೆ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
.