ಒಕ್ಕಲಿಗ ಸಮಾಜದಿಂದ ಉಚಿತ ಹಾಸ್ಟಲ್ ಸೌಲಭ್ಯ

ತುಮಕೂರು

     ತುಮಕೂರು ನಗರದಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ನಡೆಸಲಾಗುತ್ತಿರುವ ಬಾಲಗಂಗಾಧರನಾಥ ಸ್ವಾಮೀಜಿ ವಸತಿ ನಿಲಯದಲ್ಲಿ 50 ಮಂದಿ ವಿದ್ಯಾರ್ಥಿಗಳಿದ್ದು, ಈ ವರ್ಷದ ಶೈಕ್ಷಣಿಕ ಸಾಲಿನಿಂದ ಇನ್ನೂ 100 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟಲ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ದೇವಪ್ರಕಾಶ್ ತಿಳಿಸಿದರು.

       ಆರ್.ನಾರಾಯಣ್ ಶಾಸಕರಾಗಿದ್ದಾಗ ಈ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಕಲ್ಪಿಸಲಾಗಿದ್ದು, ಈ ಜಾಗದಲ್ಲಿ ಈಗ 50 ಜನ ವಿದ್ಯಾರ್ಥಿಗಳಿಗೆ ಊಟ, ನೀರು, ವಸತಿ ಸೌಲಭ್ಯ ದೊರಕಿಸಿಕೊಡಲಾಗಿದೆ. ಇದೀಗ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಿಸಿಕೊಡುವ ದೃಷ್ಠಿಯಿಂದ ಇನ್ನೂ 100 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಒಟ್ಟು 150 ಮಂದಿ ವಿದ್ಯಾರ್ಥಿಗಳಿಗೆ ಈ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.

     ಕಳೆದ ಮೂವತ್ತು ವರ್ಷಗಳಿಂದ ಆಜೀವ ಸದಸ್ಯತ್ವ ಅರ್ಜಿಗಳಿಗೆ ಅನುಮತಿ ನೀಡಿರಲಿಲ್ಲ. ಈಗ ಅಧ್ಯಕ್ಷನಾಗಿ ಆಯ್ಕೆಯಾದ ನಂತರ 470 ಅರ್ಜಿಗಳಿಗೆ ಅನುಮತಿ ನೀಡಿ ಆಜೀವ ಸದಸ್ಯರನ್ನಾಗಿಸಲಾಗಿದೆ. ಇದರ ಜೊತೆಗೆ ಎಂಜಿ ರಸ್ತೆಯಲ್ಲಿ ಖಾಸಗಿ ಕಾಂಪ್ಲೆಕ್ಸ್‍ಅನ್ನು ನಿರ್ಮಾಣ ಮಾಡಲಾಗಿದ್ದು, ಅದರಿಂದ ಸುಮಾರು 20 ಲಕ್ಷದಷ್ಟು ಆದಾಯ ಬರುತ್ತದೆ. ಆ ಹಣದಿಂದ ಒಕ್ಕಲಿಗರ ಬಡಮಕ್ಕಳ ಶಿಕ್ಷಣಕ್ಕೆ, ಅವರಿಗೆ ಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡುತ್ತೇವೆ ಎಂದರು.

     ಒಕ್ಕಲಿಗ ಸಮುದಾಯ ಭವನ ನಿರ್ಮಾಣ ಮಾಡಬೇಕೆಂಬ ಒತ್ತಾಯವಿದ್ದು, ಅದನ್ನು ಕೂಡ ಆದಷ್ಟು ಶೀಘ್ರದಲ್ಲಿ ಮಾಡಲಿದ್ದೇವೆ. ನಮ್ಮ ಸಂಘದ ಸದಸ್ಯರು ಬಡ ಮಕ್ಕಳನ್ನು ಗುರುತಿಸಿ ತಿಳಿಸಿದಲ್ಲಿ ಅವರಿಗೆ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಟರಂಗೇಗೌಡ, ಕೃಷ್ಣಪ್ಪ, ಗೋವಿಂದರಾಜು, ರಾಮಣ್ಣ ನಾಗವಲ್ಲಿ, ದೇವೇಗೌಡ, ಗಿರಿಧರ ಸೇರಿದಂತೆ ಇನ್ನಿತರ ನಿರ್ದೇಶಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap