ಕುದುರೆಕುಂಟೆ ನಿವಾಸಿಗಳ ಮನವಿಗೆ ಸ್ಪಂದಿಸಿದ ಸ್ವಾಮಿ ಜಪಾನಂದಜೀ..!!!

ಪಾವಗಡ

      ಪಾವಗಡ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದ್ದು ಕಳೆದ 3 ತಿಂಗಳಿಂದ ಪುರಸಭೆಯ ನೀರನ್ನು ಬಿಟ್ಟಿಲ್ಲ, ಪುರಸಭೆಯ ಕೊಳವೆಬಾವಿಗಳು ಭತ್ತಿಹೋಗಿದ್ದು, ಪಟ್ಟಣದ ರೈನ್ ಗೇಜ್ ಬಡಾವಣೆಯ ಕುದುರೆಕುಂಟೆಯ ನಿವಾಸಿಗಳು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಯವರಿಗೆ ನೀರು ವಿತರಿಸಲು ಮನವಿ ಮಾಡಿದ ಹಿನ್ನಲೆಯಲ್ಲಿ ಸೋಮವಾರ ಇನ್ಫೋಸಿಸ್ ಪ್ರಾಯೋಜಕತ್ವದ ನೆರವಿನಡಿಯಲ್ಲಿ ಸುಮಾರು 12 ಸಾವಿರ ಲೀಟರ್ ಸಾಮಾಥ್ರ್ಯದ ವಾಹನದಿಂದ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಿದರು.

       ಈ ಯೋಜನೆಗೆ ಚಾಲನೇ ನೀಡಿ ಮಾತನಾಡಿದ ಸ್ವಾಮಿ ಜಪಾನಂದಜೀ, ರಾಮಕೃಷ್ಣ ಸೇವಾಶ್ರಮದಿಂದ ಹೀಗಾಗಲೇ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ಜಾನುವಾರುಗಳಿಗೆ ಪಾವಗಡ ತಾಲ್ಲೂಕು ಅಲ್ಲದೇ ಪಕ್ಕದ ಚಳ್ಳಕೆರೆ, ಮತ್ತಿತರ ತಾಲ್ಲೂಕುಗಳಲ್ಲಿ ಹುಲ್ಲನ್ನು ನೀಡಲಾಗುತ್ತಿದೆ, ಜೊತೆಯಲ್ಲಿ ಪಟ್ಟಣದ ಬಡ ಜನತೆ ವಾಸಿಸುವ ಬಡಾವಣೆಗಳಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ವಿತರಿಸಲಾಗುತ್ತಿದೆ, ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ ಇದನ್ನು ಮನಗಂಡು ಹೀಗಾಗಲೇ ಕೊಳಚೇಪ್ರದೇಶವಾದ ಕುಮಾರಸ್ವಾಮಿ ಬಡಾವಣೆಗೆ ಪ್ರತಿನಿತ್ಯ ನೀರಿನ ಟ್ಯಾಂಕ್ ಕಳುಹಿಸಿ ನೀರಿನ ದಾಹ ನೀಗಿಸಲಾಗುತ್ತಿದೆ,

      ರೈನ್‍ಗೇಜ್ ಬಡಾವಣೆಯ ಕುದುರೆಕುಂಟೆ ನಿವಾಸಿಗಳು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನೀರಿನ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ, ಮಳೆ ಬಂದು ಪುರಸಭೆಯ ನೀರು ಬಿಡುವವರೆಗೂ ಕುದುರೆಕುಂಟೆ ನಿವಾಸಿಗಳಿಗೆ ಎರಡು ದಿನಗಳಿಗೊಮ್ಮೆ ನೀರಿ ನ ವ್ಯವಸ್ಥೆ ಮಾಡಲಾಗುತ್ತದೆ ಎಂದರು,ಕುದುರೆಕುಂಟೆ ನಿವಾಸಿಗಳಾದ ಲಕ್ಷ್ಮೀನರಸಮ್ಮ, ಪಾರ್ವತಮ್ಮ, ಸರಸ್ಪತಿ, ಕಮಲಮ್ಮ, ವಾಣಿ, ಬಷೀರ್, ಗುಂಡುಸಾಬ್ , ವೆಂಕಟಲಕ್ಷ್ಮೀ ಮತ್ತಿತರರು ಸ್ವಾಮಿಯ ಈ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ