ತುರುವೇಕೆರೆ:
ಸಂಸ್ಕಾರ, ಸಂಘಟನೆ ಹಾಗು ಸೇವೆ ಧ್ಯೇಯದಡಿಯಲ್ಲಿ ದೇಹ, ಮನಸ್ಸು ಆರೋಗ್ಯವಾಗಿರಲು ಯೋಗ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಸಮಿತಿ ವತಿಯಿಂದ ಪ್ರತಿವರ್ಷ ಉಚಿತ ಯೋಗ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಾಲೂಕು ಸಮಿತಿಯ ಅಧ್ಯಕ್ಷ ಆನಂದ್ ರಾಜ್ ತಿಳಿಸಿದರು.
ಪಟ್ಟಣದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಪಟ್ಟಣದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸುಮಾರು 30 ವರ್ಷಗಳಿಂದಲೂ ಉಚಿತವಾಗಿ ಯೋಗಾಸನ, ಪ್ರಾಣಾಯಾಮ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದು ಇದೇ ಏಪ್ರಿಲ್ 10 ರಂದು ಹೊಸ ಯೋಗ ಶಿಬಿರ ಪ್ರಾರಂಭವಾಗಲಿದೆ.
ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ, ಸತ್ಸಂಗ ಮತ್ತು ಸಂಸ್ಕಾರಯುತ ನಡವಳಿಕೆಗಳ ಅನುಕರಣೆ ಬಗ್ಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಕ್ಕಳಿಗಾಗಿ ಪ್ರತಿ ವರ್ಷ ಬೇಸಿಗೆ ಶಿಬಿರಗಳನ್ನ ಸಹಾ ನಮ್ಮ ಸಮಿತಿಯು ಹಮ್ಮಿಕೊಂಡು ಬರುತ್ತಿದೆಯಲ್ಲದೆ, ರೈತರು, ವ್ಯಾಪಾರಿಗಳು, ನಿವೃತ್ತರು ಸೇರಿದಂತೆ ಎಲ್ಲ ವರ್ಗದವರು ಯಾವುದೇ ಭೇದ ಭಾವವಿಲ್ಲದೆ ಯೋಗಾಭ್ಯಾಸ ತರಗತಿಗಳಿಗೆ ಭಾಗವಹಿಸಬಹುದು.
ಆ ನಿಟ್ಟಿನಲ್ಲಿ ಬುಧವಾರ ಸಂಜೆ ಪಟ್ಟಣದ ಶ್ರೀ ಸರಸ್ವತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಯೋಗ ತರಗತಿಗಳ ಉಧ್ಘಾಟನಾ ಕಾರ್ಯಕ್ರಮ ನಡೆಯಲಿದೆ. 11 ರಂದು ಗುರುವಾರ ಬೆಳಿಗ್ಗೆ ಶಿಬಿರದ ತರಗತಿಗಳು ಪ್ರಾರಂಬವಾಗಲಿದ್ದು, ಶಿಬಿರದಲ್ಲಿ ಪುರುಷರಿಗೆ ಬೆಳಿಗ್ಗೆ 5-30 ರಿಂದ 6-50 ರ ವರೆಗೆ ಬಾವಿಕೇರಿ ಶ್ರೀ ಚಿದಂಬರೇಶ್ವರ ಗ್ರಂಥಾಲಯದ ಪಕ್ಕ, ಶಾಮಣ್ಣನವರ ಭವನದಲ್ಲಿ ಹಾಗು ಮಹಿಳೆಯರಿಗೆ ಸಂಜೆ 5:30 ರಿಂದ 6-50 ರ ವರೆಗೆ ಶ್ರೀ ಸರಸ್ವತಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪ್ರತಿ ದಿನ ತರಗತಿಗಳು ನೆಡೆಯಲಿವೆ.
ಯೋಗ ಶಿಬಿರದಲ್ಲಿ ಬಾಗವಹಿಸಲು ಇಚ್ಚಿಯುಳ್ಳವರು ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಈ ಸಂಧರ್ಭದಲ್ಲಿ ಕಾರ್ಯದರ್ಶಿ ಪರಮೇಶ್, ಶಿಕ್ಷಕ ಹಾವಾಳ ಶಿವು, ನಾಗರಾಜು ಉಪಸ್ಥಿತರಿದ್ದರು. ವಿವರಗಳಿಗೆ 9845087790, 9448539017, 9448539078, ಗೆ ಸಂಪರ್ಕಿಸುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
