ಮಾ.01ರಿಂದ ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ : ನಗರಸಭೆ ಆಯುಕ್ತರು

ತಿಪಟೂರು
   
     ರಾಜ್ಯದಾದ್ಯಂತ ಪ್ಲಾಸ್ಟಿಕ್ ಮುಕ್ತವಾಗಿಸಲು ಪಣತೊಟ್ಟಿರುವ ಸಂದರ್ಭದಲ್ಲಿ ತಿಪಟೂರು ನಗರಸಭೆಯು ಮಾ.01 ರಿಂದ ನಗರದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್‍ಮುಕ್ತಗೊಳಿಸಲು ನಗರಸಭೆ ಆಯುಕ್ತರಾದ ಡಾ.ಮಧು ಪಾಟೀಲ್ ತಿಳಿಸಿದರು.
   
      ಸೋಮವಾರ ನಗರಸಭೆಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದಂತೆ ಪ್ಲಾಸ್ಟಿಕ್‍ನಿಂದಾಗುವ ತೊಂದರೆಯನ್ನು ತಪ್ಪಿಸಲು ಈ ಕೆಳಕಂಡ ಪ್ಲಾಸ್ಟಿಕ್ ವಸ್ತುಗಳಾದ ಕ್ಯಾರಿಬ್ಯಾಗ್, ಬಿತ್ತಪತ್ರ, ತೋರಣ, ಬಂಟಿಂಗ್ಸ್ (ಬಾವುಟ), ಬ್ಯಾನರ್ ಫ್ಲೆಕ್ಸ್, ತಟ್ಟೆ, ಚಮಚ, ಲೋಟ, ಊಟದ ಟೇಬಲ್ ಮೇಲೆ ಹಾಸುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್ ಹಾಗೂ ಮೈಕೋಬಿಡ್‍ಗಳನ್ನು ಕಟ್ಟುನಿಟ್ಟಾಗಿ ಬಳಸದಂತೆ ಕಟ್ಟುನಿಟ್ಟಾಗಿ ಮಾ.-01 ರಿಂದ ಸಂಪೂರ್ಣವಾಗಿ ನಿಷೇದಿಸಲಾಗುತ್ತದೆ ಎಂದು ತಿಳಿಸಿದರು.
       ಈಗಾಗಲೇ ಪ್ಲಾಸ್ಟಿಕ್ ಬಗ್ಗೆ ಹಲವು ಸಾರ್ವಜನಿಕ ಪ್ರಟಕಣೆಯ ಮೂಲಕ ತಿಳುವಳಿಕೆ ತಿಳಿಸಿದ್ದು, ಪ್ಲಾಸ್ಟಿಕ್ ಮಾರಾಟ ಮಾಡುವ ಉದ್ದಿಮೆದಾರರಿಂದ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡಗಳನ್ನು ವಿಧಿಸಲಾಗುವುದು. ಇದ್ಯಾವುದನ್ನು ಲೆಕ್ಕಿಸದೆ ಮಾ.01ರ ನಗರ ವ್ಯಾಪ್ತಿಯಲ್ಲಿ ಮಾರಾಟಮಾಡುವುದು ಕಂಡುಬಂದರೆ ಪರಿಸರ ಕಾಯಿದೆ 1986ರ ಸೆಕ್ಷನ್ 5ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದಲ್ಲದೆ ರೂ. 5000/- ದಿಂದ 1 ಲಕ್ಷದವರೆಗೆ ದಂಡ ವಿಧಿಸಲಾಗುವುದೆಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ :
 
        ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದ ಅವರು, ಪರಿಸರವನ್ನು ಸಂರಕ್ಷಿಸುವುದು ಮತ್ತು ಪ್ಲಾಸ್ಟಿಕ್ ನಿಯಂತ್ರಣ ಬರಿ ನಗರಸಭೆಯ ಕರ್ತವ್ಯವಲ್ಲ. ಮೊದಲು ನಾವು ಯಾರು ಪ್ಲಾಸ್ಟಿಕ್ ಕವರ್ ಬಳಸುತ್ತಿರಲಿಲ್ಲ.
       ಆದರೆ ಇಂದು ಪ್ಲಾಸ್ಟಿಕ್ ಇಲ್ಲದೆ ಬದುಕುವುದಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದೇವೆ. ನಾವು ಈ ಮನಸ್ಥಿತಿಯನ್ನು ಬಿಟ್ಟು ವ್ಯವಹಾರಕ್ಕೆ ಹೋಗುವಾಗ ಚಿಕ್ಕದೊಂದು ಬಟ್ಟೆಯ ಬ್ಯಾಗ್ ತೆಗೆದುಕೊಂಡು ಹೋದರೆ ಸಾಕು ನಮ್ಮ ಅರ್ಧ ಪರಿಸರವನ್ನು ಉಳಿಸಿದಂತೆ. ಆದ್ದರಿಂದ ಅಂಗಡಿಯವರು ಪ್ಲಾಸ್ಟಿಕ್ ಚೀಲ ನೀಡಿದರೂ ತಿರಸ್ಕರಿಸುವ ಮನೋಭಾವ ನಮ್ಮಲ್ಲಿ ಬಂದರೆ ಅಂಗಡಿಯವನು ಕೊಡುವುದನ್ನು ನಿಲ್ಲಿಸುತ್ತಾನೆ. ಮೊದಲು ನಾವು ಸ್ವಚ್ಛವಾಗಿ ನಮ್ಮ ಪರಿಸರವನ್ನು ಉಳಿಸೋಣ ಎಂದು ಸಾರ್ವಜನಿಕರೆಗೆ ಕರೆನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನಗರಸಭೆಯ ಆರೋಗ್ಯಾಧಿಕಾರಿ ತೀರ್ಥಪ್ರಸಾದ್ ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link