ಜಗಳೂರು :
ನಾನು ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿನ 28 ಮಸೀದಿಗಳ ಅಭಿವೃದ್ದಿಗೆ ಅನುದಾನ ನೀಡಿದ್ದು, ಈಗಲೂ ಮಸೀದಿಗಳ ಅಭಿವೃದ್ದಿಗೆ ಅನುಧಾನ ನೀಡಲಾಗುವುದೆಂದು ಶಾಸಕ ಎಸ್.ವಿ. ರಾಮಚಂದ್ರ ಭರವಸೆ ನೀಡಿದರು.
ಪಟ್ಟಣದ ಮುಸ್ಲೀಂ ಕಾಲೋನಿಯಲ್ಲಿ ಮಂಗಳವಾರ ರಾತ್ರಿ ಸುನ್ನಿ ಸ್ಟೂಡೇಂಟ್ ಫೆಡರೇಷನ್ ವತಿಯಿಂದ ಮೊಹಬ್ಬತೇ ಮುಸ್ತಫ ,ಈದ್ –ಮಿಲಾದ್ ಫೆಸ್ಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಹಿಂದೂ ಮುಸ್ಲೀಂ ಸಮುದಾಯದವರು ಸಹದರತೆಯಿಂದ ಜೀವನ ನಡೆಸುತ್ತಿದ್ದು, ಇದು ಶಾಶ್ವತವಾಗಿ ಹಿಗೇ ನಡೆಯಲಿದೆ. ನಿಮ್ಮ ಮೇಲೆ ಯಾವುದೇ ರೀತಿಯ ತೊಂದರೆ ಯಾದರು ನಾನು ಸುಮ್ಮನಿರುವುದಿಲ್ಲ. ಅಂತವರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಅವರು ಎಸ್ ಎಸ್ ಎಫ್ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಈಗೆಯೇ ಮುಂದುವರೆಯಬೇಕು ಎಂದು ಹೇಳಿದರು.
ವಸತಿ ಯೋಜನೆಯಡಿ ಮನೆ ನಿರ್ಮಿಸಿ ಕೊಳ್ಳಲು ಯಾರಿಗೂ ಹಣ ನೀಡಬೇಡಿ ಮತ್ತು ಕೊಳವೆ ಬಾವಿಗಳಿಗೂ 30 ರಿಂದ 40 ಸಾವಿರ ಹಣ ನೀಡುತ್ತಿರಿ ಎಂಬ ಮಾಹಿತಿ ನನ್ನ ಗಮನಕ್ಕೆ ಇದೆ. ದಯಮಾಡಿ ಯಾರಿಗೂ ಹಣ ನೀಡಬೇಡಿ. ಸರಕಾರದ ಯೋಜನೆಗಳು ನಿಮಗಾಗಿ ನಿಮಗಾಗಿ ನೀಡುತ್ತೇನೆ ಎಂದರು.
ದೇಶದ ಅಭಿವೃದ್ದಿಲ್ಲಿ ಯುವ ಸಮುದಾಯದವರ ಪಾತ್ರ ಬಹಳ ಮುಖ್ಯವಾಗಿದ್ದು ಇತ್ತಿಚ್ಚಿನ ದಿನಗಳಲ್ಲಿ ಯುವ ಸಮುದಾಯದ ಕೆಲ ಯುವಕರು ತಮ್ಮ ಕೇಶವನ್ನು ಆಸಹ್ಯ ಪಡುವ ರೀತಿಯಲ್ಲಿ ಮಾಡಿಸಿಕೊಳ್ಳುತ್ತಿರುವ ಆಭ್ಯಾಸವನ್ನು ತೊರೆದು ಇತರೆಯವರಿಗೆ ಮಾದರಿಯಾಗಬೇಕು ಎಂದರು.
ಮುಸ್ಲೀಂ ಸಮುದಾಯದವರು ತಮ್ಮ ಮಕ್ಕಳನ್ನು ಸೈಕಲ್ , ಬೈಕ್ ,ರೀಪೆರಿ , ಬಿರಿಯಾನಿಯಾರಿಸುವ ಅಂಗಡಿಗಳಿಗೆ ಕಳುಹಿಸ ಬೇಡಿ. ಮಕ್ಕಳಿಗೆ ಕನಿಷ್ಟ ಪಕ್ಷ ಹತ್ತನೇ ತರಗತಿಯವರೆಗೆ ಆದರೂ ವಿದ್ಯಾಭ್ಯಾಸ ಕಲಿಸಿ ಎಂದು ಸಲಹೆ ನೀಡಿದರು
ಈ ಸಂಧರ್ಭದಲ್ಲಿ ಜಿಲ್ಲಾ ಎಸ್ಸಿ ಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ಪಿ.ಎಸ್.ಅರವಿಂದನ್, ಹುಸೇನ್ ಮಿಯ್ಯಾ, ಮೌಲನ ಅಬುಬಕ್ಕರ್ ಸಿದ್ದಿಕ್ ಫಾಳಿಲಿ, ಕನ್ವಿಯಾರ್ ಇಹ್ಸಾನ್ ಅಧ್ಯಕ್ಷರಾದ ಎನೆ.ಕೆ.ಎಂ. ಶಾಪಿ ಸಅದಿ, ತಾಲೂಕು ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., , ಪಿಂಜಾರ ಸಮುದಾಯದ ಅಧ್ಯಕ್ಷ ಮಹಮ್ಮದ್, ಪಟ್ಟಣ ಪಂಚಾಯಿತಿ ಸದಸ್ಯರಾದ , ಕೆ . ಆರ್ . ತಿಪ್ಪೇಸ್ವಾಮಿ , ಪಾಪಲಿಂಗಪ್ಪ ,ರವಿಕುಮಾರ, ದೇವರಾಜ, ರವಿಕುಮಾರ್, ಶಕೀಲ್, ರೇವಣ್ಣ, ರಮೇಶ್, ನವೀನ್ ಕುಮಾರ್, ಮಂಜುಣ್ಣ, ಸೇರಿದಂತೆ ಮುಖಂಡರಾದ ಹನುಮಂತಪ್ಪ, ಓಬಳೇಶ್, ಮುಸ್ಲೀಂ ಮುಖಂಡರು ಸೇರಿದಂತೆ ಮತ್ತಿತರರು ಹಾಜರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







