ಗಗನಯಾತ್ರಿಗಳ ಆಯ್ಕೆಗೆ ಮುಂದಾದ ಇಸ್ರೋ..!!

ಬೆಂಗಳೂರು      

ಭಾರತದ ಮುಂದಿನ ಗಗನಯಾನ ಕೈಗೊಳ್ಳುವ ಗಗನಯಾತ್ರಿಗಳ ಆಯ್ಕೆ ಮತ್ತು ತರಬೇತಿ ನೀಡಲು ಮುಂದಾಗಿದೆ.
ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಯಾದ ಗಗನಯಾನ್ನ ಗಗನಯಾನಿಗಳನ್ನು ಆಯ್ಕೆ ಮಾಡುವ ಮತ್ತು ತರಬೇತಿ ನೀಡುವುದಕ್ಕೆ ಭಾರತ ತನ್ನ ಮಿತ್ರರಾಷ್ಟ್ರವಾದ ರಷ್ಯಾವನ್ನು ಆಯ್ಕೆ ಮಾಡಿಕೊಂಡು ಸೋಮವಾರ ಎರಡು ದೇಶಗಳ ನಡುವೆ ಮಹತ್ವಪೂರ್ಣ ಒಪ್ಪಂದವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.

       ಭಾರತದ ಗಗನಯಾನ್ ಯಾನಿಗಳನ್ನು ಆಯ್ಕೆ ಮಾಡುವ ಮತ್ತು ಅಂತಿಮ ಹಂತದ ತರಬೇತಿ ನೀಡುವ ಕುರಿತು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಂಗಸಂಸ್ಥೆಯಾದ ಗ್ಲಾವ್ ಕೋಸ್ಮೊಸ್ ಮತ್ತು ಇಸ್ರೋದ ಅಂಗಸಂಸ್ಥೆಯಾದ ಮಾನವ ಬಾಹ್ಯಾಕಾಶ ಕೇಂದ್ರ (ಹ್ಯುಮೆನ್ ಸ್ಪೇಸ್ ಫ್ಲೈಟ್ ಸೆಂಟರ್ (ಹೆಚ್ಎಸ್ಎಫ್ಸಿ) ನಡುವಿನ ಒಪ್ಪಂದಕ್ಕೆ ಎರಡೂ ಸಂಸ್ಥೆಗಳ ಮುಖ್ಯಸ್ಥರಾದ ನಟಾಲಿಯಾ ಲೋಕ್ಟೆವಾ ಮತ್ತು ಎಸ್. ಉನ್ನಿಕೃಷ್ಣ ನಾಯರ್ ಸಹಿ ಹಾಕಿದ್ದಾರೆ. ಈಗಿನ ಒಪ್ಪಂದದ ಪ್ರಕಾರ ಗಗನ ಯಾನಿಗಳನ್ನು ರಷ್ಯಾ ಆಯ್ಕೆ ಮಾಡುತ್ತದೆ ಮತ್ತು ಮೂರನೇ ಹಾಗೂ ಅಂತಿಮ ಹಂತದ ತರಬೇತಿಯನ್ನೂ ನೀಡುತ್ತದೆ.

       ಆಯ್ಕೆಯಾದ ಗಗನಯಾನಿಗಳಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಮೊದಲ ಎರಡು ಹಂತಗಳ ತರಬೇತಿಯನ್ನು ಭಾರತ – ರಷ್ಯಾ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಏರೋ ಸ್ಪೇಸ್ ಮೆಡಿಸಿನ್ ಸಂಸ್ಥೆ (ಐಎಎಂ) ನೀಡುತ್ತದೆ. ಅಂತಿಮ ಹಂತದ ತರಬೇತಿಯನ್ನು ರಷ್ಯಾದಲ್ಲಿ ನೀಡಲಾಗುತ್ತದೆ.

      ಭಾರತದ ಗಗನಯಾನಿಗಳ ಆಯ್ಕೆ ತರಬೇತಿ ಕಾರ್ಯವನ್ನು ಅಮೆರಿಕ, ಫ್ರಾನ್ಸ್ಗೆ ವಹಿಸಲು ಮೊದಲು ಯೋಚಿಸಲಾಗಿ ತ್ತಾದರೂ, ಅಂತಿಮವಾಗಿ ಬಾಹ್ಯಾಕಾಶ ಯಾನದಲ್ಲಿ ಪ್ರಮುಖ ಸಹವರ್ತಿಯಾದ ರಷ್ಯಾವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಮೊದಲ ಭಾರತದ ಗಗನಯಾನಿಯಾದ ರಾಕೇಶ್ ಶರ್ಮ ಅವರನ್ನು ತರಬೇತಿಗೊಳಿಸಿದ್ದು ಮತ್ತು ಬಾಹ್ಯಾಕಾಶಕ್ಕೆ ಕಳುಹಿಸಿದ್ದು ರಷ್ಯಾ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link