ದರ್ಬಾ ಗಣಪತಿಯನ್ನು ವಿಸರ್ಜನೆ

ಹರಪನಹಳ್ಳಿ :

        ವಿಶ್ವಹಿಂದು ಪರಿಷತ್, ಭಜರಂಗದಳ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಟಾಪನೆಯನ್ನು ಕಳೆದ ಎರಡು ವರ್ಷಗಳಿಂದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಾಡುತ್ತಾ ಬಂದಿದ್ದು ಸೆ.23ರಂದು ಭಾನುವಾರ ಮದ್ಯಾಹ್ನ 3ಕ್ಕೆ ಅದ್ದೂರಿಯಾಗಿ ಶೋಭಯಾತ್ರೆ ಮೂಲಕ ದರ್ಬಾ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು ಎಂದು ವಿಶ್ವಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ.ಜಗದೀಶ್ ತಿಳಿಸಿದರು.

       ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಗಣಪತಿ ವಿಸರ್ಜನೆ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ನಂತರ ಮದ್ಯಾಹ್ನ 3 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಶೋಭಯಾತ್ರೆಯನ್ನು ಆರಂಭಿಸಿ ಹರಿಹರ ವೃತ್ತ, ಹೊಸಪೇಟೆ ರಸ್ತೆ ಮಾರ್ಗವಾಗಿ ಪ್ರವಾಸಿಮಂದಿರ ವೃತ್ತದವರೆಗೆ ಸಕಲ ಕಲಾ ವಾದ್ಯಗಳೊಂದಿಗೆ ಮೇರವಣಿಗೆ ಮೂಲಕ ನಾಯಕನಕೆರೆಗೆ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದರು.

   ಕಲಾತಂಡಗಳು: ಕೇರಳದಿಂದ ಚಂಡಿಮೇಳ, ಬೆಂಗಳೂರಿನ ಅಣ್ಣಮ್ಮ ತಮಟೆ ತಂಡ, ನಾಸಿಕ ಡೋಲು, ಡೊಳ್ಳು, ವೀರಗಾಸೆ, ವೇಷಗಾರರು ಸೇರಿದಂತೆ ಡಿಜೆ ದ್ವನಿವರ್ಧಕದ ಮೂಲಕ ಭವ್ಯ ಮೆರವಣಿಗೆ ಸಾಗಲಿದೆ ದಾರಿಯುದ್ದಕ್ಕೂ ಭಕ್ತಾದಿಗಳು ಮಜ್ಜಿಗೆ, ಲಘುಉಪಹಾರ, ಪಾನಕ ವಿತರಣೆ ಮಾಡಲಿದ್ದಾರೆ.

   ಶೋಭಾಯಾತ್ರೆಗೆ ದಾವಣಗೆರೆ, ಹರಿಹರ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳು ಒಳಗೊಂಡು ಅಂದಾಜು 50ಸಾವಿರ ಸಂಖ್ಯೆಗೂ ಅಧಿಕ ಜನಸ್ಥೋಮ ಸೇರುವ ನೀರಿಕ್ಷೆ ಇದೆ ಎಂದರು.

    ಬಜರಂಗದಳದ ತಾಲೂಕು ಅಧ್ಯಕ್ಷ ನಿಟ್ಟೂರು ಹನುಮಂತಪ್ಪ, ಹಿಂದೂಸ್ಥಾನಿ ವೀರೇಶ್, ಹಾಲೇಶ್, ಛತ್ರಪತಿ ಹಾಲೇಶ್, ಅಶೋಕ, ರವಿನಾಯ್ಕ, ಚಿಕ್ಕೇರಿ ಬಸಪ್ಪ, ಆದಿತ್ಯ, ಕವಸರ ನಾಗರಾಜ, ಸುರೇಂದ್ರ ಮಂಚಾಲಿ, ಅಶೋಕ ಜಿ., ತಾಲೂಕು ಭಜರಂಗದಳ, ವಿಶ್ವಹಿಂದೂಪರಿಷತ್ ಹಾಗೂ ಕೋಟೆ ಆಂಜನೇಯ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link