ತಿಪಟೂರು
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ಇತ್ತ ರಸ್ತೆಯು ಇಲ್ಲ, ಇರುವ ರಸ್ತೆಯಲ್ಲಿ ಸಂಚರಿಸೋಣವೆಂದರೆ ಆಗೋದಿಲ್ಲ ನಮ್ಮ ಅಳಲನ್ನು ಯಾರಲ್ಲಿ ತೋಡಿಕೊಳ್ಳುವುದು ಎಂದು ಗಾಂದಿನಗರ ಮತ್ತು ಇಲ್ಲಿಂದ ಹಾದು ಹೋಗಿರುವ ಸುಕ್ಷೇತ್ರ ರಂಗಾಪುರ, ದಸರೀಘಟ್ಟ, ಕೆಂಕೆರೆ, ಗಂಗನಘಟ್ಟ, ನವಿಲೆ, ಎಂ.ಶಿವರ, ಹಾಸನ, ಅಣತಿ, ನುಗ್ಗೆಹಳ್ಳಿಗೆ ಚನ್ನರಾಯಪಟ್ಟಣ ಮುಂತಾದ ಕಡೆಗಳಿಗೆ ಹೋಗಲು ಕಳೆದ 2 ತಿಂಗಳಿನಿಂದಲೂ ಯು.ಜಿ.ಡಿ. ಕಾಮಗಾರಿಯಿಂದ ವೈ.ಟಿ ರಸ್ತೆಯಿಂದ ಇದ್ದ ರೈಲ್ವೇ ಪ್ಯಾರಲರ್ ರಸ್ತೆಯನ್ನು ಕಿತ್ತಿದ್ದು ಈ ಬಾಗಕ್ಕೆ ಹೋಗುವವರ ಗೋಳು ಹೇಳತೀರದಾಗಿದೆ.
ಇನ್ನು ನಗರದಲ್ಲಿರುವ ಇತರೆ ರಸ್ತೆಗಳನ್ನು ಹೇಳತೀರದಾಗಿದ್ದು ಯು.ಜಿ.ಡಿ, 24/7, ಇನ್ನಿತರ ರಸ್ತೆಕಾಮಗಾರಿಗಳಿಗಾಗಿ ರಸ್ತೆಯನ್ನು ಅಗೆದಿದ್ದು ಇನ್ನು ಕೆಲವುಕಡೆ ರಸ್ತೆ ನಿರ್ಮಿಸಲು ಜಲ್ಲಿಯನ್ನು ಹರಡಿದ್ದು ಮಳೆಗಾಲವಾದ್ದರಿಂದ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದಾರೆ.
ಇನ್ನು ನಗರದ ಗಾಂದಿನಗರದ ಜನರ ಪರಿಸ್ಥಿತಿಯಂತು ಹೇಳತೀರದಾಗಿದ್ದು ನಗರಕ್ಕೆ ಬರಬೇಕೆಂದರೆ ಒಂದು ಸಂತೆಪೇಟೆಯ ರೈಲ್ವೇ ಗೇಟ್, ಎ.ಪಿ.ಎಂ.ಸಿ. ಮಾರುಕಟ್ಟೆಯ ಒಳಗಿನಿಂದ ಬರಬೇಕು, ಇಲ್ಲ ಇಂದಿರಾನಗರ ರೈಲ್ವೆ ಕೆಳಸೇತುವೆಯಿಂದ ಬರಬೇಕು, ಮತ್ತೊಂದು ರಸ್ತೆ ಎಂದರೆ ಮಾರನಗೆರೆ ಇಲ್ಲ ಅನಗೊಂಡನ ಹಳ್ಳಿ ಹತ್ತಿರದಿಂದ ಹಾಸನ ವೃತ್ತಕ್ಕೆ ಬರಬೇಕು ಆದರೆ ಇಲ್ಲಿ ಇಂದಿರಾ ನಗರದ ರೈಲ್ವೆ ಅಂಡರ್‍ಪಾಸ್ ಬಿಟ್ಟರೆ ಎಲ್ಲಾ ಕಡೆಯೂ ರೈಲ್ವೇ ಹಳಿಯನ್ನು ದಾಟಿಕೊಂಡು ಬರಬೇಕು ಇದು ದುಸ್ಸಾಹಸವಾದಂತಿದ್ದು ರೈಲುಗಳು ಸದಾ ಸಂಚರಿಸುತ್ತಿ ರುವುದರಿಂದ ದಿನದಲ್ಲಿ ಒಟ್ಟು ಸುಮಾರು 7 ರಿಂದ 8 ಗಂಟೆ ರೈಲ್ವೇಗೇಟ್ ಹಾಕಿಯೇ ಇರುತ್ತದೆ.
ಆದರೂ ಇಲ್ಲಿ ಉಂಟಾಗುವ ಸಂಚಾರದಟ್ಟಣೆಯಲ್ಲಿ ಯಾರಾದರೊಬ್ಬರು ಆಸ್ಪತೆಗೆ ಸೇರುವ ದಾವಂತದಲ್ಲಿರುತ್ತಾರೆ. ತೀರಾ ಚಿಂತಾಜನಕವಾಗಿರುವ ರೋಗಿಯಕಥೆಯಂತು ಆಸ್ಪತ್ರೆ ಸೇರುವುದಕ್ಕಿಂತಲೂ ಮೊದಲೇ ಹರನ ಪಾದವನ್ನು ಸೇರುವುದಂತು ನಿಶ್ಚಿತ.
ಇನ್ನು ನಗರದ ಹಳೇಪಾಳ್ಯ, ಶಂಕರನಗರ, ಶಾರದಾನಗರ, ಗಾಂಧಿನಗರ, ಗೊರಗೊಂಡನಹಳ್ಳಿ, ಚಾಮುಂಡೇಶ್ವರಿ ಬಡಾವಣೆ, ಆಶಾ ಕಾರ್ಖಾನೆ ಹತ್ತಿರ, ಕೆರೆಗೋಡಿರಸ್ತೆ, ಪ್ರವಾಸಿ ಮಂದಿರದ ವೃತ್ತದಿಂದ ಗೋವಿನಪುರದ ಹಳ್ಳದವರೆಗೆ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು ಮುಂತಾದರಸ್ತೆಗಳಲ್ಲಿ ವಾಹನದಲ್ಲಿ ಸಂಚರಿಸುವವರು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಪಾದಚಾರಿಗಳು, ದ್ವಿಚಕ್ರವಾಹನಸವಾರರು, ಸೈಕಲ್ ಸವಾರರು ಯಾವ ವಾಹನ ಮೇಲೆ ಬರುತ್ತದೆಂದು ಹೆದರಿ ಸಾಯುವಂತಾಗಿದೆ.
ಭದ್ರತ್ರೆಯ ನೆಪಕ್ಕೆ ಎ.ಪಿ.ಎಂ.ಸಿ ಗೇಟ್ ಬಂದ್ : ಇನ್ನು ಗಾಂಧಿನಗರದ ಜನರಿಗೆ ಇರುವ ಒಂದೇ ಒಂದು ರಾಜಮಾರ್ಗವೆಂದರೆ ಎ.ಪಿ.ಎಂ.ಸಿ ಮಾರುಕಟ್ಟೆಯ ಮುಖಾಂತರ ಸಂಚಾರ ಆದರೆ ಇದನ್ನು ರಾತ್ರಿ 9.30 ರಿಂದ ಬೆಳಗ್ಗೆ 8 ಗಂಟೆಯವರೆಗೆ ಭದ್ರತೆಯ ದೃಷ್ಟಿಯಿಂದ ಮುಚ್ಚುತ್ತಿದ್ದು ಇದನ್ನಾದರು ತಾತ್ಕಾಲಿಕವಾಗಿ ತೆಗೆಯಬೇಕೆಂದು ಗಾಂದಿನಗರ ವಾಸಿಗಳು ವಿನಂತಿಸಿಕೊಂಡಿದ್ದಾರೆ
ಗಾಂದಿನಗರದ ಭಾಗದಲ್ಲಿ ಹೆಚ್ಚಾಗಿ ಮುಸ್ಲಾನರು ವಾಸಿಸುತ್ತಿದ್ದು ಇವರಲ್ಲಿ ಯಾರಾದರು ಮರಣಹೊಂದಿದರೆ ಅವರ ಶವವನ್ನು ಸಾಗಿಸಲು ಪರದಾಡುತ್ತಿದ್ದಾರೆ ಸಂತೆ ಪೇಟೆಯ ರೈಲ್ವೇ ಗೇಟ್ ಮುಖಾಂತರ ಬರೋಣವೆಂದರೆ ರೈಲ್ವೆ ಗೇಟ್‍ನ ಒಂದು ಕಡೆಗೆ ಬಾರಿವಾಹನಗಳು ಸಂಚರಿಸದಂತೆ ಬಾರ್‍ಹಾಕಿದ್ದಾರೆ ಇದು ಶವಸಾಗಿಸಲು ಅಡ್ಡಿಯಾಗಿದ್ದು ಇಲ್ಲಿಂದ ಒಂದು ಆಂಬುಲೆನ್ಸ್ ಸಹ ಸಂಚರಿಸಲು ಸಾದ್ಯವಾಗುವುದಿಲ್ಲವೆಂದು ಗಾಂಧಿನಗರದ ಸೈಪುಲ್ಲಾ ವಿಷಾದ ವ್ಯಕ್ತ್ತಪಡಿಸುತ್ತಾರೆ.
ಹೊಸಹಳ್ಳಿ, ರಂಗಾಪುರ, ಗಂಗನಘಟ್ಟಕ್ಕೆ ಸುಮಾರು 6ರಿಂದ 10 ಕಿ.ಮೀ ಬಳಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಭಾಗದ ಜನರು ಯು.ಜಿ.ಡಿ ಮತ್ತು ಇತರ ಅಧಿಕಾರಿಗಳಿಗೆ ಹಿಡಿಶಾಪವನ್ನು ಹಾಕುವಂತಾಗಿದೆ ಎಂದು ಮುರಳಿಕೃಷ್ಣ ತಿಳಿಸಿದರು